News and Events

ಅಭಿನಯದ ಮೂಲಕ ಬೋಧನೆ ಪರಿಣಾಮಕಾರಿ - ಪ್ರೊ.ಟಿ.ಎಚ್.ಕೃಷ್ಣಮೂರ್ತಿ
ಅಭಿನಯದ ಮೂಲಕ ಬೋಧನೆ ಪರಿಣಾಮಕಾರಿ - ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ಮಲ್ಲಾಡಿಹಳ್ಳಿ ಶಿಕ್ಷಕನು ಅಭಿನಯವನ್ನು ಕಲಿತುಕೊಂಡು ಅಭಿನಯಿಸುತ್ತಾ ಬೋಧಿಸಿದಾಗ ಪಠ್ಯ

ಒಳ್ಳೆತನಗಳು ಹೆಚ್ಚು ಬಿಂಬಿತವಾದಷ್ಟು ಸಮಾಜದ ಪರಿವರ್ತನೆ ಸಾಧ್ಯ-ಡಾ.ಎಸ್.ಎಸ್.ಪಾಟೀಲ್
ಒಳ್ಳೆತನಗಳು ಹೆಚ್ಚು ಬಿಂಬಿತವಾದಷ್ಟು ಸಮಾಜದ ಪರಿವರ್ತನೆ ಸಾಧ್ಯ-ಡಾ.ಎಸ್.ಎಸ್.ಪಾಟೀಲ್

ಮಲ್ಲಾಡಿಹಳ್ಳಿ ಒಳ್ಳೆತನಗಳು ಹೆಚ್ಚು ಬಿಂಬಿತವಾದಷ್ಟು ಸಮಾಜದ ಪರಿವರ್ತನೆ ಸಾಧ್ಯ

ಉತ್ತಮ ಶಿಕ್ಷಕರಾಗಲು ಉತ್ತಮ ಶಿಕ್ಷಣ ಅವಶ್ಯ - ಪ್ರೊ.ಟಿ.ಎಚ್.ಕೃಷ್ಣಮೂರ್ತಿ
ಉತ್ತಮ ಶಿಕ್ಷಕರಾಗಲು ಉತ್ತಮ ಶಿಕ್ಷಣ ಅವಶ್ಯ - ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ಮಲ್ಲಾಡಿಹಳ್ಳಿ ಉತ್ತಮ ಶಿಕ್ಷಕರಾಗಲು ಉತ್ತಮ ಶಿಕ್ಷಣದ ಅವಶ್ಯವಿದ್ದು ಅದನ್ನು

Follow Us

ಜನವರಿ 12 ರಿಂದ ಮಲ್ಲಾಡಿಹಳ್ಳಿಯಲ್ಲಿ ತಿರುಕರಂಗೋತ್ಸವ

Wednesday, December 30th, 2015

Raghavendra Swamiji

ಮಲ್ಲಾಡಿಹಳ್ಳಿ

ರಾಜ್ಯದ ಪ್ರಸಿದ್ಧ ಅನಾಥಸೇವಾಶ್ರಮದಲ್ಲಿ ಬರುವ ಜನವರಿ 12 ರಿಂದ 14ರವರೆಗೆ ಸ್ವಾಮ್ಭಿಜಿದ್ವಯರ ಪ್ಮಣ್ಯಾರಾಧನೆ ಅಂಗವಾಗಿ 3 ದಿನಗಳ ನಾಟಕೋತ್ಸವ ನಡೆಯಲಿದೆ ಎಂದು ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ದಿನಾಂಕ : 12-01-2016ರಂದು ಕಲ್ಲಪ್ಪ ಪ್ರಜಾರ್ ನಿದೇಶನದ ವೈದೇಹಿ ಕನ್ನಡಕ್ಕೆ ಅನುವಾದಿಸಿದ ‘ಕಣ್ಕಟ್ ನಗರ ತಲೆಕೆಟ್ ರಾಜ’ ಎಂತೆನ್ನುವ ನಾಟಕ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿದೆ. ದಿನಾಂಕ : 13-01-2016ರಂದು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ರಚಿಸಿದ ಅಪ್ಪಣ್ಣ ರಾಮದುರ್ಗ ನಿರ್ದೇಶನದ ‘ಜನರೆಡೆಗೆ ಜಂಗಮ’ ಉಮೇಶ್ ಪತ್ತಾರ್ ಸಂಗೀತ ನೀಡಿರುವ ಚಿತ್ರದುರ್ಗದ ಜಮುರಾ ತಂಡದ ಕಲಾವಿದರಿಂದ ಅಭಿನಯಿಸಲ್ಪಡುವ ನಾಟಕ ಪದರ್ಶನಗೊಳ್ಳಲಿದೆ.

ದಿನಾಂಕ : 14-01-2016ರಂದು ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ರಚಿಸಿರುವ ‘ವೀರ ತಾವರೆ’ ನಾಟಕವನ್ನು ಶ್ರೀಮತಿ ಶೀಲಾ ಹಾಲ್ಕುರಿಕೆ ನಿರ್ದೇಶಿಸಲಿದ್ದು ಜಮುರಾ ಕಲಾತಂಡದವರಿಂದ ಪ್ರದರ್ಶಿಸಲ್ಪಡುತ್ತದೆ ಎಂದು ಅನಾಥಸೇವಾಶ್ರಮದ ಪ್ರಕಟಣೆ ತಿಳಿಸಿದೆ. ಪ್ರತಿನಿತ್ಯ ಮಧ್ಯಾಹ್ನ 3.00ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾಡಿನ ಸಾಹಿತಿಗಳು, ರಾಜಕೀಯ ಧುರೀಣರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಗಣ್ಯರು ಮತ್ತು ಅನಾಥಸೇವಾಶ್ರಮದ ಭಕ್ತವೃಂದ ಭಾಗವಹಿಸಲಿದ್ದಾರೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದಲ್ಲದೆ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ದಿನಾಂಕ : 10-1-2016ರಿಂದ 14-1-2016ರವರೆಗೆ ಯೋಗಶಿಬಿರ ನಡೆಯಲಿದ್ದು, ಉದ್ಘಾಟನಾ ದಿನದಂದು ಜಾನಪದ ಕಲಾ ತಂಡಗಳೊಂದಿಗೆ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರುದಾಸ್ ಜೀ ಸ್ವಾಮೀಜಿಯವರ ಭಾವಚಿತ್ರಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು ಅನಾಥಸೇವಾಶ್ರಮದ ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮದಲ್ಲಿ ಟ್ರಸ್ಟಿ ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿಗಳು, ವಿಶೇಷಾಧಿಕಾರಿಗಳು ಹಾಗೂ ಅನಾಥಸೇವಾಶ್ರಮದ ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

MALLADIHALLI VINAYAL