News and Events

ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನುಗ್ಗಿ ಅವಕಾಶ ಪಡೆದುಕೊಳ್ಳಿ-ಡಾ.ವಾಣಿಶ್ರೀ
ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನುಗ್ಗಿ ಅವಕಾಶ ಪಡೆದುಕೊಳ್ಳಿ-ಡಾ.ವಾಣಿಶ್ರೀ

ಮಲ್ಲಾಡಿಹಳ್ಳಿ ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನುಗ್ಗಿ ಅವಕಾಶವನ್ನು ಪಡೆದುಕೊಳ್ಳಿ

ವಿದ್ಯಾದಾನ ಮಾಡಿದ ಸಂಸ್ಥೆಯನ್ನು ಮರೆಯದಿರಿ - ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು
ವಿದ್ಯಾದಾನ ಮಾಡಿದ ಸಂಸ್ಥೆಯನ್ನು ಮರೆಯದಿರಿ - ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು

ಮಲ್ಲಾಡಿಹಳ್ಳಿ ತಾವು ಓದಿದ ಮತ್ತು ವಿದ್ಯಾದಾನ ಮಾಡಿದ ಸಂಸ್ಥೆಯನ್ನು

Poshakaru Tamma Makkala Kadege Gamana Avashya-Prof.T.H. Krishnamurthy
Poshakaru Tamma Makkala Kadege Gamana Avashya-Prof.T.H. Krishnamurthy

ಮಲ್ಲಾಡಿಹಳ್ಳಿ ಪೋಷಕರು ತಮ್ಮ ಮಕ್ಕಳ ಕಡೆಗೆ ಗಮನ ಹರಿಸಿ

Follow Us

ಮಲ್ಲಾಡಿಹಳ್ಳಿಯಲ್ಲಿ ಎನ್.ಸಿ.ಸಿ. ಕೆಡೆಟ್‍ಗಳ ಯೋಗ ಪ್ರದರ್ಶನ

Tuesday, June 21st, 2016

ಮಲ್ಲಾಡಿಹಳ್ಳಿ, 21-06-2016
ಮಲ್ಲಾಡಿಹಳ್ಳಿಯಲ್ಲಿ ಜೂನಿಯರ್ ಎನ್.ಸಿ.ಸಿ ಕೆಡೆಟ್‍ಗಳು ಹಾಗೂ ಸೀನಿಯರ್ ಎನ್.ಸಿ.ಸಿ ಕೆಡೆಟ್‍ಗಳು ಯೋಗ ಪ್ರದರ್ಶನ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಮಾತನಾಡಿ ಎನ್.ಸಿ.ಸಿ ವಿಭಾಗಗಳ 400ಕ್ಕೂ ಹೆಚ್ಚು ಕೆಡೆಟ್‍ಗಳು ಒಂದೇ ವೇದಿಕೆಯಲ್ಲಿ ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ವಿವಿಧ ರೀತಿಯ ಯೋಗಾಸನಗಳ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಸದೃಡತೆಯನ್ನು ತಂದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸೀನಿಯರ್ ಬೆಟಾಲಿಯನ್ ಕಮಾಂಡರ್ ಎಚ್.ಟಿ.ರಮೇಶ್ ಹಾಗೂ ಜ್ಯೂನಿಯರ್ ಬೆಟಾಲಿಯನ್ ಕಮಾಂಡರ್ ಹಾರೋಮಠ್ ಹಾಗೂ ಇತರೆ ಎನ್.ಸಿ.ಸಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.