ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ
ಮಲ್ಲಾಡಿಹಳ್ಳಿ ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ ಎಂದು ಪ್ರಸಿದ್ಧ ರಂಗನಿರ್ದೇಶಕ
ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ

ದಿನಾಂಕ01.12.2013 ರ ಭಾನುವಾರ ಸಂಜೆ ಬಸವನಗುಡಿಯ ಬೀದಿ ಬೀದಿಗಳಲ್ಲಿ ಕಡ್ಲೆಕಾಯಿ ಪರೀಷೆಯ ಮೇಳ ನಡೆಯುತ್ತಿದ್ದರೆ ಮತ್ತೊಂದೆಡೆ ಕಹಳೆ ಬಂಡೆ ಉದ್ಯಾನವನದ ವೇದಿಕೆಯಲ್ಲಿ ಬೆಂಗಳೂರಿಗರಿಗೆ ಅಪರೂಪದ ಹಾಡುಗಳ ಅನುರಣನ. ಒಟ್ಟಾರೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ಸಂಜೆ ರಂಗೇರಿತ್ತು. ಗಾಯಕ ಶ್ರೀಧರ ಅಯ್ಯರವರ ಸ್ವರಸುರಭಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆನಂದ ಕಂದ ಗೀತೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾಂರ್ಯಕ್ರಮದಲ್ಲಿ ಸಾವಿರ ಹಾಡುಗಳ ಸರ್ದಾರ ಬಾಳಪ್ಪ ಹುಕ್ಕೇರಿ ಹಾಗೂ ಇಂದಿನ ಪೀಳಿಗೆಯ ಸುಗಮ ಸಂಗೀತ ನಿರ್ದೇಶಕ ಮೃತ್ಯುಂಜಯ […]
ಮಲ್ಲಾಡಿಹಳ್ಳಿ, 28-11-2013: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಪಾಟೀಲರು ಬೆಂಗಳೂರಿನ ಸ್ವರಸುರಭಿ ಟ್ರಸ್ಟ್ ನವರು ನೀಡುವ ವಾರ್ಷಿಕ ವಿಶೇಷ ಪ್ರಶಸ್ತಿಯನ್ನು ಡಿಸೆಂಬರ್ 1ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸ್ವೀಕರಿಸಲಿರುವರು. ರಾಘವೇಂದ್ರ ಪಾಟೀಲರ ಸಾಹಿತ್ಯ, ಸಮಾಜ ಸೇವೆ, ಆಡಳಿತ ಮುಂತಾದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಿರುವರು. ಕಾರ್ಯಕ್ರಮದಲ್ಲಿ ಸ್ವರಸುರಭಿ ಟ್ರಸ್ಟಿನ 9ನೇ ವರ್ಷದ ವಾರ್ಷಿಕ ಸಮಾರಂಭದಲ್ಲಿ ಬಾಳಪ್ಪ ಹುಕ್ಕೇರಿ ಹಾಗೂ ಮೃತ್ಯಂಜಯ ದೊಡ್ಡವಾಡರ ಸಂಗೀತ ಸಂಯೋಜನೆಯ ಬೆಟಗೇರಿ ಕೃಷ್ಣಶರ್ಮರವರ ಗೀತೋತ್ಸವ ಸಮಾರಂಭ ಜರುಗಲಿದೆ. ಕಾರ್ಯಕ್ರಮದ […]
ಮಲ್ಲಾಡಿಹಳ್ಳಿ ಆಶ್ರಮದ ವಿದ್ಯಾರ್ಥಿಗಳಲ್ಲಿ ಒಂದು ವಿನಂತಿ ದಿನಾಂಕ 2 8 -9 -2013 ರಂದು ರವಿಂದ್ರ ಕಲಾಕ್ಷೇತ್ರದ ಆವರಣದಲ್ಲಿ ಹಳೆಯ ವಿದ್ಯರ್ಥಿಗಳೆಲ್ಲ ಸೇರುವುದೆಂದು ನಿಶ್ಚಯಿಸಿರುತ್ತೇವೆ ಅದ್ದರಿಂದ ತಾವುಗಳೆಲ್ಲ ಸಾಯಂಕಾಲ 5 ಗಂಟೆಗೆ ಬಂದು ಯಶಸ್ವಿಗೊಳಿಸಬೇಕು ಚರ್ಚೆಯ ವಿಷಯ ೧) ಬರಿಗೈನಲ್ಲಿ ಬಂದು ಸೇವೆಯ ಮಂತ್ರವನ್ನು ಜಪಿಸುತ್ತಾ ಸಮಾಜ ಸೇವಾ ಕೈಂಕರ್ಯದಲ್ಲಿ ಕೊನೆಯುಸಿರಿರುವವರೆಗೂ ತಮ್ಮನ್ನು ತೊಡಗಿಸಿಕೊಂಡ. ಕೇವಲ ಭಿಕ್ಷೆಯಿಂದ-ಜೋಳಿಗೆಯ ಸಹಾಯದಿಂದ ಕೋಟ್ಯಂತರ ರೂಪಾಯಿಗಳ ಮೌಲ್ಯದ ಆಶ್ರಮವನ್ನು ಸರ್ವತೋಮುಖವಾಗಿ ಬೆಳೆಸಿ ಸಮಾಜಕ್ಕೆ ಆರ್ಪಿಸಿ ಹೇಗೆ ಬಂದರೋ ಹಾಗೆ ಬರಿಗೈಯಲ್ಲಿ ತೆರಳಿದ […]
ಮಲ್ಲಾಡಿಹಳ್ಳಿ: ಇತ್ತೀಚಿಗೆ ನಡೆದ ಹೊಳಲ್ಕೆರೆ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಅನಾಥಸೇವಾಶ್ರಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಪದವಿಪೂರ್ವ ಕಾಲೇಜಿನ ಟಿ.ಎಚ್.ಗುಡ್ಡಪ್ಪ ಮಾತನಾಡುತ್ತಾ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗುತ್ತಾರೆಂದು ನುಡಿದರು. ಬಾಲಕೀಯರ ವಿಭಾಗದಲ್ಲಿ ಖೋಖೋ, ವಾಲಿಬಾಲ್ ಟೆನ್ನಿಕಾಯಿಟ್ ಇವುಗಳಲ್ಲಿ ಪ್ರಥಮ ಸ್ಥಾನಗಳಿಸಿದರು. ಬಾಲ್‌ಬ್ಯಾಡ್ಮಿಂಟನ್, ಷಾಟ್‌ಪುಟ್‌ಥ್ರೋ, ಡಿಸ್ಕಸ್‌ನಲ್ಲಿ ದ್ವಿತೀಯ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕೀಯರ ವಿಭಾಗದಲ್ಲಿ ಖೋಖೋ(ಜಂಟಿ-ಪ್ರಥಮ), ಪುಟ್‌ಬಾಲ್, […]
ಮಲ್ಲಾಡಿಹಳ್ಳಿ: ಉತ್ತಮ ನಾಗರೀಕರಾಗಲು ಸಾಮಾಜಿಕ ಪ್ರಜ್ಞೆ ಅವಶ್ಯ ಎಂದು ಅನಾಥಸೇವಾಶ್ರಮದ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ಎಸ್.ಎಸ್.ಬಿ.ಎಸ್. ಡಿ.ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮಾಜದಲ್ಲಿ ಸಾಮಾಜಿಕ ಪ್ರಜ್ಞೆ ಕಡಿಮೆ ಇದ್ದು ಇಂತಹ ಶಿಬಿರಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ಅದು ವೃದ್ಧಿಯಾಗುತ್ತದೆ ಎಂದರು.ಇಂದಿನ ಯುವಜನತೆ ಆಧುನಿಕ ಸಂಸ್ಕೃತಿಗೆ ಮಾರು ಹೋಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ತಮ್ಮ ಜೀವನವನ್ನು ಜೊತೆಯಲ್ಲಿ ಸಮಾಜದ ಅವನತಿಗೆ ಕಾರಣವಾಗುತ್ತಿದ್ದಾರೆ. ಹಾಗೆಯೇ ಅಂದು ಒಬ್ಬ ಶಿಕ್ಷಕ ಪುರದ ಒಂದು […]
ಅನಂತ ನಮಸ್ಕಾರಗಳು, ತಮ್ಮ ಕೃಪಾಶೀರ್ವಾದದ ಬಲದಿಂದ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮವು ನಿರಂತರ ಪ್ರಗತಿಯನ್ನು ಸಾಧಿಸುತ್ತ ಮನ್ನಡೆದಿದೆ. ದಾನ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಲಭ್ಯವಾಗುವ ಆದಾಯವನ್ನು ಜತನ ಮಾಡಿಕೊಂಡು ಕಾಳಜಿಯಿಂದ ಬಳಸುತ್ತ ಬಂದುದರಿಂದ ಕನಿಷ್ಠ 5-6 ಕೋಟಿ ಮೊತ್ತದ ಕಟ್ಟಡ ಕಾಮಗಾರಿಗಳು ಆಶ್ರಮದ ಆವರಣದಲ್ಲಿ ಮತ್ತು ಆಶ್ರಮದ ಬೇರೆ ಊರಿನಲ್ಲಿಯ ಶಾಲಾ ಆವರಣಗಳಲ್ಲಿ ಇತ್ತೀಚೆಗೆ ಏರ್ಪಟ್ಟಿವೆ. ಆಶ್ರಮದ ಆವರಣದಲ್ಲಿ ಶಿಕ್ಷಣ ಕಾಲೇಜು, ಐ.ಟಿ.ಐ., ಆಯುರ್ವೇದ ಮಹಾವಿದ್ಯಾಲಯ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಮತ್ತು ಪದವಿ ಪೂರ್ವ ವಿಜ್ಞಾನ ಕಾಲೇಜು, ಇವಿಷ್ಟು […]