Anathasevashrama Trust (R)

Sri Raghavendra College of Education

Malladihalli - 577531

Holalkere Tq, Chitradurga Dist, Karnataka

Ph : 08191-289242 / 289529 / 9902276970

Email ID: principalccpemdh@gmail.com

Anathasevashrama Trust (R) Malladihalli Sites > Sri Raghavendra College of Education, BEd > News & Events > ಶಿಕ್ಷಣ ಒಂದು ಬದುಕು ಅದು ಪದವಿಯಲ್ಲ – ಡಾ.ಕರಿಯಪ್ಪ ಮಾಳಿಗೆ

ಶಿಕ್ಷಣ ಒಂದು ಬದುಕು ಅದು ಪದವಿಯಲ್ಲ – ಡಾ.ಕರಿಯಪ್ಪ ಮಾಳಿಗೆ

ಮಲ್ಲಾಡಿಹಳ್ಳಿ :

ಶಿಕ್ಷಣ ಒಂದು ಬದುಕು ಅದು ಪದವಿಯಲ್ಲ ಶಿಕ್ಷಣದ ಮೂಲಕ ಪದವಿಯನ್ನು ಪಡೆದು ಕೊಳ್ಳಬಹುದಾಗಿದ್ದು ನಾವು ಪಡೆಯುವ ಶಿಕ್ಷಣ ನಮ್ಮ ಬದುಕನ್ನು ಕಟ್ಟಿಕೊಡುತ್ತದೆ ಎಂದು ಚಿತ್ರದುರ್ಗ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಬಿ.ಇಡಿ ಕಾಲೇಜಿನಲ್ಲಿ ಸಮಾರೋಪ ಭಾಷಣ ಮಾಡುತ್ತಾ ಎದೆಗೆ ಬಿದ್ದ ಅಕ್ಷರ ಮತ್ತು ನೆಲಕ್ಕೆ ಬಿದ್ದ ಬೀಜ ಹೇಗೆ ಫಲವನ್ನು ಕೊಡುತ್ತವೆಯೋ ಹಾಗೆ ನಾವು ಕಲಿತ ಶಿಕ್ಷಣ ಫಲಪ್ರದವಾಗಿರಬೇಕು ಎಂದರು. ನಾಳೆಯ ಕುರಿತು ಆತಂಕ ಮತ್ತು ಹತಾಶೆಯಲ್ಲಿ ನಾವುಗಳು ಬದುಕುತ್ತಿದ್ದು ವರ್ತಮಾನದಲ್ಲಿ ಬದುಕಿದಾಗ ಉತ್ತಮರಾಗುತ್ತೇವೆ ಎಂದರು.

ನಾವು ಆಡುವ ಮಾತು ಉತ್ತಮವಾಗಿರಬೇಕು ಅದು ಹೃದಯದ ಮಾತಾಗಿರಬೇಕು ಮಾತನಾಡುವ ಸಮಯದಲ್ಲಿ ಮೌನವಾಗಿರಬಾರದು ಹಾಗೆಯೇ ಮೌನವಾಗಿರುವ ಸಮಯದಲ್ಲಿ ಮಾತನಾಡಬಾರದು ಎಂಬ ಸಲಹೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಸಿಂಡಿಕೇಟ್ ಬ್ಯಾಂಕ್‍ನ ಪ್ರಬಂಧಕ ಕುಮಾರನಾಯಕ್ ಮಾತನಾಡಿ ನಾವು ಬಳಸುವ ಭಾಷೆ ನಮ್ಮ ಬದುಕನ್ನು ಕಟ್ಟಿಕೊಡುತ್ತದೆ ಆದ್ದರಿಂದ ಭಾಷೆಯ ಬಳಕೆಯನ್ನು ಶಿಕ್ಷಣದ ಮೂಲಕ ಶುದ್ಧಗೊಳಿಸಿಕೊಳ್ಳಬೇಕು ಎಂದರು. ಯಾವುದೇ ಭಾಷೆ ವ್ಯವಹಾರಿಕ ಹಿನ್ನಲೆಯನ್ನು ಪಡೆದುಕೊಂಡಾಗ ಅದರ ಬೆಳವಣಿಗೆ ತೀವ್ರವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಮಾತನಾಡಿ ಮುಂದೆ ಶಿಕ್ಷಕರಾಗುವ ಅರ್ಹತೆ ಪಡೆದುಕೊಳ್ಳುವ ನೀವುಗಳು ಸತತ ಅಧ್ಯಯನದಲ್ಲಿ ತೊಡಗಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದರು. ಸಮಾಜದಲ್ಲಿ ಬರುವ ಸವಾಲುಗಳನ್ನು ಎದುರಿಸುವ ಮನೋಸ್ತೈರ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಹಿರಿಯ ಉಪನ್ಯಾಸಕ ಎನ್.ಧನಂಜಯ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಣಾರ್ಥಿಗಳಾದ ದೀಪಿಕಾ ಸ್ವಾಗತಿಸಿ, ಗಿರೀಶ್ ವಂದಿಸಿ ಶಾರದಾ ನಿರೂಪಿಸಿದರು.