News and Events

ಶಿಕ್ಷಕನು ವೃತ್ತಿಗೆ ನ್ಯಾಯ ಒದಗಿಸಿದಾಗ ಮಾತ್ರ ದೇಶದ ಅಭಿವೃದ್ಧಿ- ಎಸ್.ಕೆ.ಬಿ.ಪ್ರಸಾದ್
ಶಿಕ್ಷಕನು ವೃತ್ತಿಗೆ ನ್ಯಾಯ ಒದಗಿಸಿದಾಗ ಮಾತ್ರ ದೇಶದ ಅಭಿವೃದ್ಧಿ- ಎಸ್.ಕೆ.ಬಿ.ಪ್ರಸಾದ್

ಮಲ್ಲಾಡಿಹಳ್ಳಿ: ಶಿಕ್ಷಕನು ಉತ್ತಮ ಬೋಧನೆ ಮಾಡುತ್ತಾ ವೃತ್ತಿಗೆ ನ್ಯಾಯ

ಆಯುರ್ವೇದ ಮಹತ್ವ ಅರಿಯಿರಿ-ಡಾ|| ಎಸ್.ನಾಗರಾಜ
ಆಯುರ್ವೇದ ಮಹತ್ವ ಅರಿಯಿರಿ-ಡಾ|| ಎಸ್.ನಾಗರಾಜ

ಮಲ್ಲಾಡಿಹಳ್ಳಿ: ಇತ್ತೀಚಿನ ದಿನಗಳಲ್ಲಿ ಜನರು ಖಾಯಿಲೆಗಳಿಂದ ಹೆಚ್ಚಾಗಿ ಬಳಲುತ್ತಿದ್ದು

ಮಲ್ಲಾಡಿಹಳ್ಳಿ ಆಶ್ರಮದ ದುಮ್ಮಿ ಅರುಣೋದಯ ಪ್ರೌಢಶಾಲೆಗೆ ಶೇ.96

ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಆಶ್ರಯದಲ್ಲಿ ನಡೆಯುತ್ತಿರುವ ದುಮ್ಮಿಯ

Follow Us

ಮಲ್ಲಾಡಿಹಳ್ಳಿಯಲ್ಲಿ ಎನ್.ಸಿ.ಸಿ. ಕೆಡೆಟ್‍ಗಳ ಯೋಗ ಪ್ರದರ್ಶನ

Tuesday, June 21st, 2016

ಮಲ್ಲಾಡಿಹಳ್ಳಿ, 21-06-2016
ಮಲ್ಲಾಡಿಹಳ್ಳಿಯಲ್ಲಿ ಜೂನಿಯರ್ ಎನ್.ಸಿ.ಸಿ ಕೆಡೆಟ್‍ಗಳು ಹಾಗೂ ಸೀನಿಯರ್ ಎನ್.ಸಿ.ಸಿ ಕೆಡೆಟ್‍ಗಳು ಯೋಗ ಪ್ರದರ್ಶನ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಮಾತನಾಡಿ ಎನ್.ಸಿ.ಸಿ ವಿಭಾಗಗಳ 400ಕ್ಕೂ ಹೆಚ್ಚು ಕೆಡೆಟ್‍ಗಳು ಒಂದೇ ವೇದಿಕೆಯಲ್ಲಿ  ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ವಿವಿಧ ರೀತಿಯ ಯೋಗಾಸನಗಳ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಸದೃಡತೆಯನ್ನು ತಂದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸೀನಿಯರ್ ಬೆಟಾಲಿಯನ್ ಕಮಾಂಡರ್ ಎಚ್.ಟಿ.ರಮೇಶ್ ಹಾಗೂ ಜ್ಯೂನಿಯರ್ ಬೆಟಾಲಿಯನ್ ಕಮಾಂಡರ್ ಹಾರೋಮಠ್ ಹಾಗೂ ಇತರೆ ಎನ್.ಸಿ.ಸಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.