
ವ್ಯಕ್ತಿ ಸಾಧನೆಯತ್ತ ಮುನ್ನುಗ್ಗಬೇಕು – ಡಾ. ಶಿವಮೂರ್ತಿ ಮುರುಘಾ ಶರಣರು
Thursday, January 27th, 2022ಮಲ್ಲಾಡಿಹಳ್ಳಿ: ವ್ಯಕ್ತಿ ಯಾವುದಾದರೊಂದು ಸಾಧನೆಯತ್ತ ಮುನ್ನುಗ್ಗಿದಾಗ ಮಾತ್ರ ವ್ಯಕ್ತಿತ್ವ ನಿರ್ಮಾಣಗೊಂಡು ಉತ್ತಮ ಸಮಾಜ ಸೃಷ್ಠಿಯಾಗುತ್ತದೆಂದು ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಎಲ್ಲ ಶಾಲಾ ಕಾಲೇಜುಗಳ ವತಿಯಿಂದ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಶಿಸ್ತು, ಶಾಂತಿ, ಭ್ರಾತೃತ್ವ ಮುಂತಾದವುಗಳನ್ನು ರೂಢಿಸಿಕೊಂಡಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಗಣ ಎಂದರೆ ಒಂದು ಗುಂಪು ಅವಗುಣಗಳನ್ನು ತೊಡೆದುಹಾಕಿದಾಗ ಮಾತ್ರ ನಾವೆಲ್ಲರೂ ಒಂದು ಒಳ್ಳೆಯ ಗಣವಾಗುತೇವೆ, ಒಳಿಗಿನ ಮಾನಸಿಕ ತುಮುಲಗಳೇ ನಮ್ಮ ಆಂತರಿಕ ಶತೃಗಳು, […]