News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಆಧ್ಯಾತ್ಮದ ಉನ್ನತಿಯನ್ನು ಸಾಧಿಸುವುದೇ ಯೋಗ-ಡಾ.ಶಿಮುಶ

Tuesday, June 21st, 2016

ಮಲ್ಲಾಡಿಹಳ್ಳಿ 21-06-2016
ಆಧ್ಯಾತ್ಮದ ಉನ್ನತಿಯನ್ನು ಸಾಧಿಸುವುದೇ ಯೋಗ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಹಮ್ಮಿಕೊಂಡಿದ್ದ ವಿಶ್ವಯೋಗ ದಿನಾಚರಣೆಯಲ್ಲಿ ದಿವ್ಯಸಾನ್ನಿಧ್ಯವನ್ನು ವಹಿಸಿ ಮಾತನಾಡುತ್ತಾ ಜೀವನದಲ್ಲಿ ಏನನ್ನು ಬೇಕಾದರೂ ಸರಳವಾಗಿ ಪಡೆದುಕೊಳ್ಳಬಹುದು ಆದರೆ ಶಾಂತಿ ಮತ್ತು ನೆಮ್ಮದಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಪತಂಜಲಿಯ ಅಷ್ಟಾಂಗ ಯೋಗದ ಮೂಲಕ ಸಾಧ್ಯವಾಗುತ್ತದೆ ಅದೂ ಸಹ ಇಂದಿನ ದಿನಗಳಲ್ಲಿ ಕಷ್ಟಸಾಧ್ಯವಾಗಿದ್ದು ‘ಅಷ್ಟಾಂಗ ಯೋಗ ಕಷ್ಟವೆನಿಸಿದೊಡೆ ಲಿಂಗ ಯೋಗದ ಮೂಲಕ ಮೋಕ್ಷ ಹೊಂದಿರಯ್ಯ’ ಮಾಡಿರಯ್ಯ ಎನ್ನುವ ಶರಣರ ವಾಕ್ಯದಂತೆ ಲಿಂಗ ದೀಕ್ಷೆಯು ಧ್ಯಾನದ ಉನ್ನತೀಕರಣವನ್ನು ಮೂಡಿಸುತ್ತದೆ ಎಂದರು. ಬ್ರಹ್ಮರಂದ್ರ, ಶಿಖಾರಂದ್ರ ಮತ್ತು ಪಶ್ಚಿಮರಂದ್ರಗಳನ್ನು ಹೊಂದಿರುವ ದೇಹದಲ್ಲಿ ಅಂತರ್‍ಯೋಗವನ್ನು ಮಾಡಿ ಮನಸ್ಸನ್ನು ಶುದ್ಧಗೊಳಿಸಿಕೊಂಡು ಆರೋಗ್ಯವಂತರಾಗಿ ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪ್ರಾಚಾರ್ಯ ಹಾಗೂ ಹಿರಿಯ ಯೋಗಾಚಾರ್ಯ ಎನ್.ಎನ್.ಶಿವನಗೌಡ ಮಾತನಾಡಿ ಯಮ ನಿಯಮಗಳಿಂದ ಕೂಡಿದ ಆಸನ ಮಾಡಿ ಪ್ರಾಣಾಯಾಮದ ಮೂಲಕ ದೇಹವನ್ನು ಶುದ್ಧೀಕರಣಗಳಿಸಿಕೊಂಡು ಧಾರಣ ಧ್ಯಾನ ಸಮಾಧಿಗಳಲ್ಲಿ ಮನುಷ್ಯನ ಇಹಲೋಕದ ಇರುವಿಕೆಯನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು. ಯೋಗತರಬೇತುದಾರ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ 3 ಸಾವಿರ ವಿದ್ಯಾರ್ಥಿಗಳು ಆಸನಗಳು, ಸೂರ್ಯನಮಸ್ಕಾರ ಹಾಗೂ ಧ್ಯಾನದ ಭಂಗಿಗಳ ಪ್ರದರ್ಶನ ನೀಡಿದರು. ವಿಶ್ವಸ್ತ ಸಮಿತಿಯ ಟ್ರಸ್ಟಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು. ಆಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಸ್ವಾಗತಿಸಿ, ಉಪನ್ಯಾಸಕರಾದ ತಂಗರಾಜು ನಿರೂಪಿಸಿ, ಟಿ.ಲೋಕೇಶ್ ವಂದಿಸಿದರು. ಅನಾಥಸೇವಾಶ್ರಮದ ಶಾಲಾ ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿವರ್ಗದವರು ಹಾಗೂ ಯೋಗಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಯೋಗ ಕ್ಷೇತ್ರಕ್ಕೆ ರಾಘವೇಂದ್ರ ಸ್ವಾಮೀಜಿಯವರ ಕೊಡುಗೆ ಕುರಿತಂತೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.

Malladihalli IDY 21-6-2016 1

Malladihalli IDY 21-6-2016 2

Malladihalli IDY 21-6-2016 3