ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಅನಾಥಸೇವಾಶ್ರಮವೆಂಬ ಬಂಜರು ನಾಡಿನ ಕಲ್ಪವೃಕ್ಷ ಬಾರಕೂರಿನ ಬಾ. ರಾಘವೇಂದ್ರರಾವ್ ಎಂಬ ತರುಣರು. ಬಾಲ್ಯದಿಂದಲೇ ದೇವರನ್ನು ಕಾಣುವ ಹುಚ್ಚನ್ನು ಹಿಡಿಸಿಕೊಂಡ ಇವರು ಮಠ, ಮಂದಿರಗಳೆಂದು ಅಲೆದಾಡುತ್ತಾ ಕಂಡ ಕಂಡ ಸಾಧು ಸಂತರನ್ನು ಭೇಟಿಯಾಗಿ ಬೇಡಿಕೊಳ್ಳುತ್ತಾ ಕೊನೆಗೆ ಸ್ವಾಮಿ ಶಿವಾನಂದರ ಆಶ್ರಯಕ್ಕೆ ಬಂದು ಧ್ಯಾನ ಮಾರ್ಗವನ್ನು ಹಿಡಿದರು. ಬ್ರಹ್ಮಚರ್ಯದ ವ್ರತಧಾರಣೆ ಮಾಡಿದರು. ಸ್ವಾಮಿ ಶಿವಾನಂದರ ಮಾರ್ಗದರ್ಶನದಲ್ಲಿ ಬರೋಡಾದ ಪ್ರೊ.ರಾಜರತ್ನ ಮಾಣಿಕ್‌ರಾಯ್‌ರವರ ಶಿಷ್ಯತ್ವ ವಹಿಸಿ ಯೋಗ ಮತ್ತು ದೈಹಿಕ ಶಿಕ್ಷಣದ ತರಬೇತಿಯನ್ನು ಪಡೆದು ಬಿ.ಪಿ.ಇ ಎನ್ನುವ ಪದವಿಯನ್ನು ಗಳಿಸಿದರು. ತದನಂತರ ಆಗ ಭಾರತಕ್ಕೆ ಸೇರಿದ ಈಗ ಪಾಕಿಸ್ತಾನದಲ್ಲಿರುವ ಕರಾಚಿಗೆ ಹೋಗಿ ಅಂದಿನ ಅತ್ಯಂತ ಪ್ರಸಿದ್ಧ ಆಯುರ್ವೇದ ತಜ್ಞರಾದ ಪಂಡಿತ್ ಲಕ್ಷ್ಮಣಬಾಬಾರವರಲ್ಲಿ ಆಯುರ್ವೇದ ವೈದ್ಯ ವಿದ್ಯೆಯ ಜ್ಞಾನವನ್ನು ಗಳಿಸಿದರು.