ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ
ಮಲ್ಲಾಡಿಹಳ್ಳಿ ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ ಎಂದು ಪ್ರಸಿದ್ಧ ರಂಗನಿರ್ದೇಶಕ
ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ
ಮಲ್ಲಾಡಿಹಳ್ಳಿ
ಗಾಂಧೀಜಿಯವರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಮಲ್ಲಾಡಿಹಳ್ಳಿಯ ಎಲ್ಲ ಶಾಲಾ ಕಾಲೇಜುಗಳ ವತಿಯಿಂದ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ತಮ್ಮ ಸಂದೇಶದಲ್ಲಿ ತಿಳಿಸಿದರು.
ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಬುದ್ಧನಂತೆ ಕಟ್ಟೆಯ ಮೇಲೆ ಧ್ಯಾನಾಸಕ್ತನಾಗಿ ಯೋಚಿಸುವ ಅಗತ್ಯತೆ ಇಂದು ನಮ್ಮ ಯುವಕರಿಗೆ ಬೇಕಾಗಿದೆ ಎಂದರು. ನಾವೆಲ್ಲರೂ ಸೇರಿ ಗಾಂಧೀಜಿಯವರ ಕನಸುಗಳನ್ನು ಪ್ರೋತ್ಸಾಹಿಸುವ ದಿಕ್ಕಿನಲ್ಲಿ ಆರೋಗ್ಯಯುತ, ಶಾಂತಿಯುತ ಸಮಾಜವನ್ನು ಕಟ್ಟಬೇಕು ಎಂದರು. ಒಟ್ಟಾರೆಯಾಗಿ ಸಂಘಶಕ್ತಿ ರಾಷ್ಟ್ರಶಕ್ತಿಯಾಗಿ ರೂಪುಗೊಳ್ಳುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಯೋನಿವೃತ್ತಿ ಹೊಂದಿದ ಪ್ರೊ.ಟಿ.ಎಚ್.ಗುಡ್ಡಪ್ಪ, ವೈ.ಬಿ.ವನಜಾಕ್ಷಮ್ಮ, ಜಿ.ಎಸ್.ಬುದ್ಧನಗೌಡರ್ ಬಿ.ಲೀಲಾವತಿ ಮತ್ತು ಸೇವೆಯನ್ನು ಸಲ್ಲಿಸಿದ ಎಂ.ಎನ್.ವೇಣು ಮತ್ತಿತರರನ್ನು ಸನ್ಮಾನಿಸಲಾಯಿತು. ಎನ್.ಸಿ.ಸಿ ಜ್ಯೂನಿಯರ್ ವಿಭಾಗದ ಅಧಿಕಾರಿ ಆರ್.ಬಿ.ಹಾರೋಮಠರವರ ನೇತೃತ್ವದಲ್ಲಿ ಪಥಸಂಚಲನೆ ಆಕರ್ಷಕವಾಗಿ ಮೂಡಿಬಂದಿತು. ವಿಶ್ವಸ್ತರಾದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಕೆ.ವಿ.ಪ್ರಭಾಕರ್, ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ, ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಶಿವಾನಂದ ಮತ್ತು ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸಾಂಸ್ಕತಿಕ ಕಾರ್ಯಕ್ರಮ ನಡೆಸಿಕೊಟ್ಟರು.