News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನುಗ್ಗಿ ಅವಕಾಶ ಪಡೆದುಕೊಳ್ಳಿ-ಡಾ.ವಾಣಿಶ್ರೀ

Thursday, March 9th, 2017

ಮಲ್ಲಾಡಿಹಳ್ಳಿ

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನುಗ್ಗಿ ಅವಕಾಶವನ್ನು ಪಡೆದುಕೊಳ್ಳಿ ಎಂದು ರಾಘವೇಂದ್ರ ಆಯುರ್ವೇದ ಮೆಡಿಕಲ್ ಕಾಲೇಜಿನ ವೈದ್ಯೆ ಡಾ.ವಾಣಿಶ್ರೀ ಹೇಳಿದರು. ಅವರು ರಾಘವೇಂದ್ರ ಬಿ.ಇಡಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಸ್ತ್ರೀ ಇಂದು ಎಲ್ಲ ರಂಗಗಳಲ್ಲೂ ತನ್ನದೇ ಆದ ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿದ್ದು ಅವಕಾಶಗಳನ್ನು ಯಾರೂ ಕೊಡುವುದಿಲ್ಲ ಪ್ರತಿಭೆಯಿದ್ದಾಗ ಅವುಗಳು ಹುಡುಕಿಕೊಂಡು ಬರುತ್ತವೆ ಒಂದು ವೇಳೆ ಅವುಗಳು ಕೈತಪ್ಪುವ ಸಂದರ್ಭ ಬಂದಲ್ಲಿ ಮುನ್ನುಗ್ಗಿ ಸಮರ್ಥವಾಗಿ ಅವುಗಳನ್ನು ಬಳಸಿಕೊಂಡು ಪ್ರತಿಭೆಯನ್ನು ಪ್ರದರ್ಶಿಸಬೇಕು ಮತ್ತು ‘ಸ್ತ್ರೀ’ ಕೀಳಿರಿಮೆಯನ್ನು ಬೆಳೆಸಿಕೊಳ್ಳಬಾರದು ಎಂದು ಕರೆ ನೀಡಿದರು.

ಪುರುಷ ಪ್ರಧಾನ ಸಮಾಜ, ನಮಗೆ ಅವಕಾಶಗಳಿಲ್ಲ, ನಮ್ಮನ್ನು ಮನೆಯಲ್ಲಿಯೇ ಇರಲು ಮಾತ್ರ ಎನ್ನುವಂತಹ ಕಾಲ ಹೋಗಿ ಇಂದು ಎಲ್ಲ ರಂಗಗಳಲ್ಲೂ ಸಮಾಜ ಮಹಿಳೆಯರನ್ನು ಸ್ವೀಕರಿಸಿದೆ ಆದರೆ ನಮ್ಮ ಮನಸ್ಸಿನಲ್ಲಿ ದೃಢನಿರ್ಧಾರದ ಮೂಲಕ ಹೊರಬರಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಹಿರಿಯ ಉಪನ್ಯಾಸಕ ಎನ್.ಧನಂಜಯ ಮಾತನಾಡಿ ಸಮಾಜದಲ್ಲಿ ಸ್ತ್ರೀ ಶೋಷಣೆ ಎನ್ನುವುದು, ಪುರುಷ ಪ್ರಧಾನ ಸಮಾಜ ಎನ್ನುವುದಿಲ್ಲ ಸಂದರ್ಭಗಳನ್ನು ಬಳಸಿಕೊಳ್ಳುವ ಕಡೆ ವಿಚಾರ ಮಾಡಬೇಕು ಮತ್ತು ಪ್ರಸ್ತುತ ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳುವ ಸಾಹಸ ಪ್ರವೃತ್ತಿಗಳನ್ನು ಬೆಳೆಸಿಕೊಂಡಾಗ ಮುಂದೆ ಬರಲು ಸಾಧ್ಯವಾಗುತ್ತದೆ. ಇಂದು ಕಾನೂನಾತ್ಮಕವಾಗಿ ಎಲ್ಲ ರಕ್ಷಣೆಗಳು ಮಹಿಳೆಗಿದ್ದು ಅವುಗಳನ್ನು ಅರ್ಥೈಸಿಕೊಂಡು ಅನಿವಾರ್ಯ ಸಂದರ್ಭಗಳಲ್ಲಿ ಹೋರಾಟ ನಡೆಸಿ ಸಮಾಜಮುಖಿಯಾಗಿ ಬದುಕಬೇಕು ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಗಳ ಬಗ್ಗೆ ಅನೇಕ ಯೋಜನೆಗಳಿವೆ ಅವುಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಯೋಗ ಪಟು ಕನ್ಯಾಶ್ರೀ ಯೋಗ ಪ್ರದರ್ಶನ ನಡೆಸುವುದರ ಮೂಲಕ ಸ್ತ್ರೀಯರು ಆರೋಗ್ಯವನ್ನು ಭಾರತೀಯ ಪರಂಪರೆಯಲ್ಲಿ ಸರಳವಾಗಿ ಆಚರಿಸುವುದರ ಮೂಲಕ ಹೇಗೆ ಇಟ್ಟುಕೊಳ್ಳುತ್ತಿದ್ದರು ಎನ್ನುವುದನ್ನು ತೋರಿಸಿಕೊಟ್ಟರು.

ಪ್ರಶಿಕ್ಷಣಾರ್ಥಿಗಳಾದ ಗೀತಾ ಶಿವಸಿಂಪಿಗೇರ, ಐಶ್ವರ್ಯ ಸ್ತ್ರೀ ಸಬಲೀಕರಣ ಮತ್ತು ದೌರ್ಜನ್ಯಗಳ ರಕ್ಷಣೆ ಕುರಿತಂತೆ ಮಾತನಾಡಿದರು.  ಕುಮಾರಿ ಮಾನಸ ಸ್ವಾಗತಿಸಿ, ಜಯಲಕ್ಷ್ಮಿ ನಿರೂಪಿಸಿ, ಲತಾ ವಂದಿಸಿದರು. ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.