ಸುದ್ದಿಗಳು

ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ-ರಂಗ ನಿರ್ದೇಶಕಿ ಶೀಲಾ ಹಾಲ್ಕುರಿಕೆ
ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ-ರಂಗ ನಿರ್ದೇಶಕಿ  ಶೀಲಾ ಹಾಲ್ಕುರಿಕೆ

ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ

ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ-ಕೃಷ್ಣಮೂರ್ತಿ ಕವತ್ತಾರ್
ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ-ಕೃಷ್ಣಮೂರ್ತಿ ಕವತ್ತಾರ್

ಮಲ್ಲಾಡಿಹಳ್ಳಿ ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ ಎಂದು ಪ್ರಸಿದ್ಧ ರಂಗನಿರ್ದೇಶಕ

ಮಲ್ಲಾಡಿಹಳ್ಳಿಯಲ್ಲಿ ಜಾನಪದ ಕಲಾ ತಂಡಗಳೊಂದಿಗೆ ವೈಭವಯುತ ಮೆರವಣಿಗೆ
ಮಲ್ಲಾಡಿಹಳ್ಳಿಯಲ್ಲಿ ಜಾನಪದ ಕಲಾ ತಂಡಗಳೊಂದಿಗೆ ವೈಭವಯುತ ಮೆರವಣಿಗೆ

ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ

Follow Us

ರಾಘವೇಂದ್ರ ಸ್ವಾಮೀಜಿ ನಿಜವಾದ ಅಂತರಂಗದ ಸಂತ ಬಹಿರಂಗದ ಕರ್ಮಯೋಗಿ

ಬುಧವಾರ, ಜನವರಿ 13th, 2016

ಮಲ್ಲಾಡಿಹಳ್ಳಿ

ರಾಘವೇಂದ್ರ ಸ್ವಾಮೀಜಿ ನಿಜವಾದ ಅಂತರಂಗದ ಸಂತ ಬಹಿರಂಗದ ಕರ್ಮಯೋಗಿ ಎಂದು ನಿವೃತ್ತ ಪ್ರಾಚಾರ್ಯ ಎ.ಪಿ.ನಾರಾಯಣಪ್ಪ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಸೂರುದಾಸ್‍ಜೀ ಸ್ವಾಮೀಜಿಯವರ ಪುಣ್ಯಾರಾಧನಾ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹ ನಾಟಕಗಳ ಉತ್ಸವದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ರಾಘವೇಂದ್ರ ಸ್ವಾಮೀಜಿ ನಿಷ್ಕಾಮ ಯೋಗಿ ಹಾಗೂ ಒಬ್ಬ ತಪಸ್ವಿಯಾಗಿದ್ದರಿಂದಲೇ ಇಂತಹ ಬೃಹತ್ ಆಶ್ರಮವನ್ನು ಕಟ್ಟಿ ಲಕ್ಷಾಂತರ ಬಡ ಮಕ್ಕಳ ಪಾಲಿನ ಸಂಜೀವಿನಿಯಾಗಿದ್ದಾರೆ ಎಂದರು.

ಅವರು ಒಂದು ವಟವೃಕ್ಷವಿದ್ದಂತೆ ಅದರಡಿಯಲ್ಲಿ ಸಾವಿರಾರು ಕುಟುಂಬಗಳು ಇಂದು ಬದುಕುತ್ತಿವೆ ಎಂದರು. ಮನುಷ್ಯನನ್ನು ಮನುಷ್ಯನನ್ನಾಗಿಸುವ ವಿದ್ಯೆಗಳನ್ನು ಶಿಕ್ಷಣದ ಜೊತೆಯಲ್ಲಿ ಕಲಿಸಿದ್ದರಿಂದಲೇ ಇಂತಹ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ತುಮಕೂರಿನ ಡಾ.ಪಿ.ಎನ್.ಶಾಂತಕುಮಾರ್ ಮಾತನಾಡಿ ಮಲ್ಲಾಡಿಹಳ್ಳಿ ಶಾಲೆಗಳ ಶಿಸ್ತು ಮತ್ತು ಸಂಸ್ಕಾರ ಹಾಗೂ ಬಡ ಮಕ್ಕಳ ಬಗೆಗಿನ ಕಾಳಜಿ ಇಂದು ಎಲ್ಲ ಸಂಸ್ಥೆಗಳಿಗೂ ಅನುಕರಣೀಯ ಎಂದರು. ಇನ್ನೋರ್ವ ಅತಿಥಿ ಶಿವಮೊಗ್ಗ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ದಶರಥ ಮಾತನಾಡಿ ಅಂದಿನ ಶಿಕ್ಷಣದ ಗುಣಮಟ್ಟ ಮತ್ತು ಇಂದಿನ ಶಿಕ್ಷಣದ ಗುಣಮಟ್ಟಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು ಅಂದು ಶಿಕ್ಷಣದ ಜೊತೆಯಲ್ಲಿ ಮೌಲ್ಯಗಳನ್ನು ಕಲಿಸುತ್ತಿದ್ದುದರಿಂದಲೇ ಇಂದು ಸಮಾಜದಲ್ಲಿ ನಮ್ಮಂತವರು ಉತ್ತಮ ನಾಗರೀಕರಾಗಲು ಸಾಧ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಬಿ.ಕಲಿವಾಳ ಮಾತನಾಡಿ ಇಂದು ಹಲವಾರು ವಿಶ್ವವಿದ್ಯಾನಿಲಯಗಳು ಮಾಡುವ ಕೆಲಸವನ್ನು ಅಂದು ಏಕಾಂಗಿಯಾಗಿ ಎಲ್ಲ ರೀತಿಯ ಶಿಕ್ಷಣವನ್ನು ಒಂದೇ ಸೂರಿನಡಿಯಲ್ಲಿ ನೀಡುತ್ತಾ ಸ್ವಾಮೀಜಿಯವರು ಈ ಭಾಗದ ಜನರ ಬಾಳಿನ ಬೆಳಕಾಗಿದ್ದಾರೆ ಎಂದರು. ಇಂದು ಹಲವಾರು ಕೋರ್ಸ್‍ಗಳನ್ನು ಇಲ್ಲಿ ಪ್ರಾರಂಭಿಸಲು ನಮ್ಮ ವಿಶ್ವವಿದ್ಯಾನಿಲಯವು ಅವಕಾಶ ನೀಡಲಿದೆ ಎಂದರು.

ಬೆಂಗಳೂರು ಬಿ.ಡಿ.ಎ ಅಸಿಸ್ಟೆಂಟ್ ಇಂಜಿನೀಯರ್ ಶಶಿಕಿರಣ್ ವಾಣಿಜ್ಯ ತೆರಿಗೆ ಅಧಿಕಾರಿ ಡಿ.ಶಿವಕುಮಾರ್ ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ, ಅಲೋಕ್ ಕಿಕ್ಕೇರಿ, ಕಾರ್ಯನಿರ್ವಹಣಾಧಿಕಾರಿ ಎ.ಎಸ್.ನಿರ್ವಾಣಪ್ಪ ಮತ್ತು ವಿಶೇಷಾಧಿಕಾರಿ ಪ್ರೊ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಉಪಪ್ರಾಚಾರ್ಯ ಆರ್.ಬಿ.ಹಾರೋಮಠ್ ಸ್ವಾಗತಿಸಿ, ಕನ್ನಡ ಅಧ್ಯಾಪಕ ಜಿ.ಟಿ.ಶಂಕರಮೂರ್ತಿ ನಿರೂಪಿಸಿ, ಪ್ರೊ. ರಘುನಾಥ್ ರೆಡ್ಡಿ ವಂದಿಸಿದರು. ಇದೇ ಸಂದರ್ಭದಲ್ಲಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ರಚಿಸಿ, ಅಪ್ಪಣ್ಣ ರಾಮದುರ್ಗ ನಿರ್ದೇಶನದ ಜಮುರಾ ಕಲಾತಂಡದವರಿಂದ ‘ಜನರೆಡೆಗೆ ಜಂಗಮ’ ಎಂತೆನ್ನುವ ನಾಟಕ ಪ್ರದರ್ಶಿಸಲಾಯಿತು.

ಫೋಟೋ :

1. ನಿವೃತ್ತ ಪ್ರಾಚಾರ್ಯ ಅ.ಪು.ನಾರಾಯಣಪ್ಪ ಮಾತನಾಡುತ್ತಿರುವುದು.

3
2. ವೈದೇಹಿ ಅನುವಾದಿಸಿ ಕಲ್ಲಪ್ಪ ಪುಜಾರ್ ನಿರ್ದೇಶನದ ‘ಕಣ್ಕಟ್ ನಗರ ತೆಲೆಕೆಟ್ ರಾಜ’ ರಾಘವೇಂದ್ರ ಗುರುಕುಲ ವಿದ್ಯಾಪೀಠ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಅಭಿನಯಿಸಿದ ನಾಟಕದ ದೃಶ್ಯ

3. ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಬಿ.ಕಲಿವಾಳ ಮಾತನಾಡುತ್ತಿರುವುದು

2