ಸುದ್ದಿಗಳು

ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ-ರಂಗ ನಿರ್ದೇಶಕಿ ಶೀಲಾ ಹಾಲ್ಕುರಿಕೆ
ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ-ರಂಗ ನಿರ್ದೇಶಕಿ  ಶೀಲಾ ಹಾಲ್ಕುರಿಕೆ

ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ

ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ-ಕೃಷ್ಣಮೂರ್ತಿ ಕವತ್ತಾರ್
ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ-ಕೃಷ್ಣಮೂರ್ತಿ ಕವತ್ತಾರ್

ಮಲ್ಲಾಡಿಹಳ್ಳಿ ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ ಎಂದು ಪ್ರಸಿದ್ಧ ರಂಗನಿರ್ದೇಶಕ

ಮಲ್ಲಾಡಿಹಳ್ಳಿಯಲ್ಲಿ ಜಾನಪದ ಕಲಾ ತಂಡಗಳೊಂದಿಗೆ ವೈಭವಯುತ ಮೆರವಣಿಗೆ
ಮಲ್ಲಾಡಿಹಳ್ಳಿಯಲ್ಲಿ ಜಾನಪದ ಕಲಾ ತಂಡಗಳೊಂದಿಗೆ ವೈಭವಯುತ ಮೆರವಣಿಗೆ

ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ

Follow Us

ನಮ್ಮೆಲ್ಲರ ಮನಸ್ಸಿನ ಪ್ರತಿಬಿಂಬ ನಾಟಕ-ಚಂದ್ರಶೇಖರ ತಾಳ್ಯ

ಗುರುವಾರ, ಜನವರಿ 14th, 2016

ಮಲ್ಲಾಡಿಹಳ್ಳಿ

ನಮ್ಮೆಲ್ಲರ ಮನಸ್ಸಿನ ಪ್ರತಿಬಿಂಬವನ್ನು ನಾಟಕಗಳಲ್ಲಿ ನಾವು ಕಾಣಬಹುದು ಎಂದು ಖ್ಯಾತ ಕವಿ ಚಂದ್ರಶೇಖರ ತಾಳ್ಯ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಸೂರುದಾಸ್‍ಜೀ ಸ್ವಾಮೀಜಿಯವರ ಪುಣ್ಯಾರಾಧನಾ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹ ನಾಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಮನಸ್ಸಿನಲ್ಲಿರುವ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ನಾಟಕ ಒಂದು ವೇದಿಕೆಯಾಗಿದೆ ಇಂದು ಸಾಂಸ್ಕøತಿಕವಾಗಿ ಜೀವಂತವಾಗಿರಲು ನಾಟಕಗಳು ಮುಖ್ಯ ಎಂದರು. ಆದರೆ ಇಂದು ಸಾಂಸ್ಕøತಿಕ ರಾಜಕಾರಣದ ವಿಪರ್ಯಾಸವನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ ಸಾಂಸ್ಕøತಿಕ ಜವಬ್ಧಾರಿ ಮತ್ತು ಬದ್ಧತೆ ಯಿಂದ ಸಾಹಿತ್ಯ ಸೃಷ್ಠಿಯಾಗಬೇಕಾಗಿದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಕಡಕೊಳ ಮಾತನಾಡಿ ಸಾಂಸ್ಕøತಿಕ ಲೋಕ ಬೆಂಗಳೂರಿನಲ್ಲಿ ಕೇಂದ್ರೀಕರಣಗೊಂಡಿದೆ ಅದು ವಿಷಾದನೀಯ ಸಂಗತಿ ಅದು ವಿಕೇಂದ್ರಿಕರಣಗೊಂಡಾಗ ಸಾಂಸ್ಕøತಿಕ ವಾತಾವರಣ ರಾಜ್ಯದಾದ್ಯಂತ ಸೃಷ್ಠಿಯಾಗುತ್ತದೆ ಎಂದರು. ಇಂದು ಆಧುನೀಕರಣಕ್ಕೆ ಕೊಟ್ಟ ಪ್ರೋತ್ಸಾಹ ಸಾಹಿತ್ಯಕ್ಕೆ ಸಂಸ್ಸøತಿಗೆ ಕೊಡದಿರುವುದು ನೋವಿನ ಸಂಗತಿ ಎಂದರು.

ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅನಾಥಸೇವಾಶ್ರಮದ ವಿಶ್ವಸ್ತ ಮಂಡಳಿಯ ಸದಸ್ಯ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ ಶಿಕ್ಷಕ ನಾಟಕಗಳ ಮೂಲಕ ಮಕ್ಕಳ ಕನಸುಗಳನ್ನು ನನಸು ಮಾಡಲು ಪ್ರಯತ್ನಿಸಬೇಕು ಉತ್ತಮ ಸಾಹಿತ್ಯದ ಅಭಿರುಚಿಗಳನ್ನು ಮೂಡಿಸುವುದರ ಮೂಲಕ ಮಕ್ಕಳ ವ್ಯಕ್ತಿತ್ವ ರೂಪಿಸಬೇಕು ಅದಕ್ಕೆ ಶಿಕ್ಷಕ ನಾಟಕಾಭಿನಯದ ಮೂಲಕ ಬೋಧಿಸಬೇಕು ಎಂದರು. ವಿದ್ಯಾರ್ಥಿಗಳಿಗೆ ಗುರಿಮುಟ್ಟದಿರುವ ತನಕ ಮಲಗದಿರಿ ಎಂದು ಹೇಳುವಾಗ ಮೊದಲು ಗುರಿ ತೋರಿಸಿ ಅದನ್ನು ಮುಟ್ಟುವ ರೀತಿಯನ್ನು ಹೇಳಿಕೊಟ್ಟಾಗ ಮಾತ್ರ ವಿದ್ಯಾರ್ಥಿ ಗುರಿ ಮುಟ್ಟುತ್ತಾನೆ ಎಂದರು.

ಮಾಜಿ ಶಾಸಕ ಪಿ. ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಾನು ವಿದ್ಯಾರ್ಥಿ ಜೀವನವನ್ನು ಮಲ್ಲಾಡಿಹಳ್ಳಿಯಿಂದಲೇ ಪ್ರಾರಂಭಗೊಂಡು ಶಾಸಕನಾಗಿ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದರು. ಪ್ರೊ.ಎಸ್.ಎಚ್.ಪಟೇಲ್, ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್, ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ ಶರ್ಮ, ಎಚ್.ಸಿ.ಹನುಮಂತಪ್ಪ ಕಾರ್ಯನಿರ್ವಹಣಾಧಿಕಾರಿ ಎ.ಎಸ್.ನಿರ್ವಾಣಪ್ಪ, ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಯೋಗ ತರಬೇತುದಾರ ಸಂತೋಷ್ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಶಿಕ್ಷಕ ಎಂ.ಎನ್.ವೇಣು ಸ್ವಾಗತಿಸಿ, ಉಪನ್ಯಾಸಕ ಜಿ.ಶಿವಕುಮಾರ್ ನಿರೂಪಿಸಿ ಬಿ.ಪಿ.ಚಂದ್ರಶೇಖರ್ ವಂದಿಸಿದರು. ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿವರ್ಗದವರು ಇದ್ದರು.

ಇದೇ ಸಂದರ್ಭದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ರಚಿಸಿ ಶ್ರೀಮತಿ ಶೀಲಾ ಹಾಲ್ಕುರಿಕೆ ನಿರ್ದೇಶಿಸಿದ ಉಮೇಶ್ ಪತ್ತಾರ್ ಸಂಗೀತ ನೀಡಿ ಜಮುರಾ ಕಲಾ ತಂಡದವರು ಅಭಿನಯಿಸಿದ ‘ನೀರ ತಾವರೆ’ ನಾಟಕ ಪ್ರದರ್ಶಿಸಲ್ಪಟ್ಟಿತು.

ಫೋಟೋ :

1. ಚಂದ್ರಶೇಖರ ತಾಳ್ಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿರುವುದು

1
2. ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡುತ್ತಿರುವುದು.

2
3. ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ರಚಿಸಿ, ಅಪ್ಪಣ್ಣ ರಾಮದುರ್ಗ ನಿರ್ದೇಶನದ ಜಮುರಾ ಕಲಾತಂಡದವರಿಂದ ‘ಜನರೆಡೆಗೆ ಜಂಗಮ’ ಎಂತೆನ್ನುವ ನಾಟಕ ಪ್ರದರ್ಶನ ನೀಡುತ್ತಿರುವ ದೃಶ್ಯ

3