ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ-ರಂಗ ನಿರ್ದೇಶಕಿ ಶೀಲಾ ಹಾಲ್ಕುರಿಕೆ

ಶುಕ್ರವಾರ, ಜನವರಿ 19th, 2018

ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ ಶೀಲಾ ಹಾಲ್ಕುರಿಕೆ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಜ್ಞಾನಮಂಟಪದಲ್ಲಿ ನಡೆದ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ 22ನೇ ಹಾಗೂ ಪೂಜ್ಯ ಶ್ರೀ ಸೂರುದಾಸ್ ಜೀ ಸ್ವಾಮೀಜಿಯವರ 20ನೇ ಪುಣ್ಯಾರಾಧನೆ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ದಾಸೋಹ ಕಾರ್ಯಕ್ರಮದ 3ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಒಂದು ಮಗು ರಂಗಭೂಮಿ, ರಂಗಚಟುವಟಿಕೆಯಲ್ಲಿ ತೊಡಗಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು, ರಂಗಭೂಮಿಯಲ್ಲಿ ಮನುಷ್ಯನ ವಿಕಾಸಕ್ಕೆ ಬೇಕಾದ ಎಲ್ಲ ಚಟುವಟಿಕೆಗಳು ರೂಪುಗೊಳ್ಳುತ್ತದೆ ಅದರ ಮೂಲಕ ಉತ್ತಮ ಸಮಾಜದ ಸೃಷ್ಟಿಯಾಗುತ್ತದೆ ಎಂದು ಹೇಳಿದರು. ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ ಶೀಲಾ ಹಾಲ್ಕುರಿಕೆ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಜ್ಞಾನಮಂಟಪದಲ್ಲಿ ನಡೆದ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ 22ನೇ ಹಾಗೂ ಪೂಜ್ಯ ಶ್ರೀ ಸೂರುದಾಸ್ ಜೀ ಸ್ವಾಮೀಜಿಯವರ 20ನೇ ಪುಣ್ಯಾರಾಧನೆ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ದಾಸೋಹ ಕಾರ್ಯಕ್ರಮದ 3ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಒಂದು ಮಗು ರಂಗಭೂಮಿ, ರಂಗಚಟುವಟಿಕೆಯಲ್ಲಿ ತೊಡಗಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು, ರಂಗಭೂಮಿಯಲ್ಲಿ ಮನುಷ್ಯನ ವಿಕಾಸಕ್ಕೆ ಬೇಕಾದ ಎಲ್ಲ ಚಟುವಟಿಕೆಗಳು ರೂಪುಗೊಳ್ಳುತ್ತದೆ ಅದರ ಮೂಲಕ ಉತ್ತಮ ಸಮಾಜದ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಮುಖ್ಯಅತಿಥಿಯಾಗಿ ಮಾತನಾಡಿದ ಅಮೃತ್ ಆಗ್ರ್ಯಾನಿಕ್ಸ್‍ನ ಮಾಲೀಕರಾದ ಕೆ.ನಾಗರಾಜ್ ಮಾತನಾಡುತ್ತಾ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರ ತತ್ವಾದರ್ಶಗಳು ಇಂದು ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿಸಿವೆ. ಸಮಾಜದ ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ಸೇವೆಯನ್ನು ಮಾಡಲು ಸಿದ್ಧರಿರುವುದಾಗಿ ತಿಳಿಸಿದರು. ತುಮಕೂರಿನ ಖ್ಯಾತ ವೈದ್ಯ ಡಾ.ಶಾಂತಕುಮಾರ್ ಮಾತನಾಡಿ ಸ್ವಾಮೀಜಿಯವರಿಗೆ ಹಲವಾರು ವಿದ್ಯೆಗಳು ಕರಗತವಾಗಿದ್ದು ಜನರ ಸೇವೆಗಾಗಿ ಅವುಗಳನ್ನು ಮುಡಿಪಾಗಿಟ್ಟರು ಅವರಿಗೆ ರಂಗಕಲೆಯಲ್ಲಿ ಅಪಾರವಾದ ಅಭಿರುಚಿ ಇದ್ದುದದರಿಂದ 20ಕ್ಕೂ ಹೆಚ್ಚು ನಾಟಕಗಳನ್ನು ಸ್ವತಃ ಬರೆದಿದ್ದಾರೆ ಹಾಗೂ ಅಭಿನಯಿಸಿದ್ದಾರೆ ಕಲೆಗಳ ಮೂಲಕವೂ ಜನರ ಸೇವೆಯನ್ನು ಮಾಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಕೃಷ್ಣಮೂರ್ತಿ ಮಾತನಾಡಿ ಡಾ.ಶಿವಮೂರ್ತಿ ಮುರುಘಾ ಶರಣರ ದಿವ್ಯನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ತಿರುಕನೂರಿನಲ್ಲಿ ರಂಗದಾಸೋಹ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂದಿದೆ ಸಂಸ್ಥೆಯ ಎಲ್ಲ ನೌಕರವರ್ಗದವರು ಹಗಲಿರುಳು ಶ್ರಮಿಸಿದ್ದರ ಫಲ ಈ ಯಶಸ್ಸು ಎಂದರು. ಮುಂದೆ ರಾಘವೇಂದ್ರ ಸ್ವಾಮೀಜಿಯವರ ಆಶಯಗಳನ್ನೊತ್ತು ಸಮಾಜದಲ್ಲಿ ಜನರಿಗಾಗಿಯೇ ಶ್ರಮಿಸುತ್ತಿರುವ ವ್ಯಕ್ತಿಯನ್ನು ಗುರುತಿಸಿ ಸನ್ಮಾನಿಸಿ ‘ತಿರುಕಶ್ರೀ’ ಪ್ರಶಸ್ತಿಯನ್ನು ನೀಡಲಾಗುವುದು ಎಂದರು. ಉಪನ್ಯಾಸಕರಾದ ಜಿ.ಶಿವಕುಮಾರ್ ಸ್ವಾಗತಿಸಿ, ಎಚ್.ಗಿರೀಶ್ ನಿರೂಪಿಸಿ, ಪವನ್ ಕುಮಾರ್ ವಂದಿಸಿದರು.

ಆಶ್ರಮದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ರಚಿತ, ವೈ.ಡಿ.ಬದಾಮಿ ಹಾಗೂ ಮಂಜುಳಾ ಬದಾಮಿ ನಿರ್ದೇಶನದ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಜೀವನಾಧಾರಿತ ‘ತಿರುಕಯಾನ’ ಮೊದಲ ಯಶಸ್ವೀ ಪ್ರಯೋಗ ನಡೆಯಿತು. ಸುರೇಶ ಕೇಸಾಪುರ ಸಂಗೀತ ನೀಡಿದರು.

ರಂಗನಿರ್ದೇಶಕಿ ಶೀಲಾ ಹಾಲ್ಕುರಿಕೆ ಅನಾಥಸೇವಾಶ್ರಮದ ತಿರುಕನೂರಿನಲ್ಲಿ ರಂಗದಾಸೋಹದ ಸಮಾರೋಪ ಭಾಷಣ ಮಾಡುತ್ತಿರುವುದು.

ಡಾ.ಜಿ.ಎನ್.ಮಲ್ಲಿಕಾರ್ಜುನ ರಚಿತ ವiಲ್ಲಾಡಿಹಳ್ಳಿಯ ತಿರುಕರಂಗೋತ್ಸವದಲ್ಲಿ ಪ್ರದರ್ಶನಗೊಂಡ ‘ತಿರುಕಯಾನ’ ನಾಟಕದ ದೃಶ್ಯ.1

ಡಾ.ಜಿ.ಎನ್.ಮಲ್ಲಿಕಾರ್ಜುನ ರಚಿತ ವiಲ್ಲಾಡಿಹಳ್ಳಿಯ ತಿರುಕರಂಗೋತ್ಸವದಲ್ಲಿ ಪ್ರದರ್ಶನಗೊಂಡ ‘ತಿರುಕಯಾನ’ ನಾಟಕದ ದೃಶ್ಯ.2