ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ
ಮಲ್ಲಾಡಿಹಳ್ಳಿ ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ ಎಂದು ಪ್ರಸಿದ್ಧ ರಂಗನಿರ್ದೇಶಕ
ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ
ಮಲ್ಲಾಡಿಹಳ್ಳಿ:
ಇತ್ತೀಚಿಗೆ ನಡೆದ ಹೊಳಲ್ಕೆರೆ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಅನಾಥಸೇವಾಶ್ರಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಪದವಿಪೂರ್ವ ಕಾಲೇಜಿನ ಟಿ.ಎಚ್.ಗುಡ್ಡಪ್ಪ ಮಾತನಾಡುತ್ತಾ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗುತ್ತಾರೆಂದು ನುಡಿದರು.
ಬಾಲಕೀಯರ ವಿಭಾಗದಲ್ಲಿ ಖೋಖೋ, ವಾಲಿಬಾಲ್ ಟೆನ್ನಿಕಾಯಿಟ್ ಇವುಗಳಲ್ಲಿ ಪ್ರಥಮ ಸ್ಥಾನಗಳಿಸಿದರು. ಬಾಲ್‌ಬ್ಯಾಡ್ಮಿಂಟನ್, ಷಾಟ್‌ಪುಟ್‌ಥ್ರೋ, ಡಿಸ್ಕಸ್‌ನಲ್ಲಿ ದ್ವಿತೀಯ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕೀಯರ ವಿಭಾಗದಲ್ಲಿ ಖೋಖೋ(ಜಂಟಿ-ಪ್ರಥಮ), ಪುಟ್‌ಬಾಲ್, ಹ್ಯಾಂಡ್‌ಬಾಲ್, ಗುಂಡುಎಸೆತ, ಡಿಸ್ಕಸ್‌ಥ್ರೋ, ಜಾವೆಲಿನ್, ಹ್ಶೆಜಂಪ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿದರು.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕ ವೇಣುಗೋಪಾಲ ಹಾಗೂ ಉಪನ್ಯಾಸಕ ವರ್ಗದವರನ್ನು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಆಡಳಿತಮಂಡಳಿಯವರು ಅಭಿನಂದಿಸಿದ್ದಾರೆಂದು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ತಿಳಿಸಿದರು.
ಫೋಟೋ-೧ : ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಮಲ್ಲಾಡಿಹಳ್ಳಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಮತ್ತೀತರ ಉಪನ್ಯಾಸಕ ವರ್ಗದವರೊಂದಿಗೆ ಬಾಲಕರ ತಂಡ.
ಫೋಟೋ-೨ : ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಮಲ್ಲಾಡಿಹಳ್ಳಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಮತ್ತೀತರ ಉಪನ್ಯಾಸಕ ವರ್ಗದವರೊಂದಿಗೆ ಬಾಲಕೀಯರ ತಂಡ.