ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ
ಮಲ್ಲಾಡಿಹಳ್ಳಿ ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ ಎಂದು ಪ್ರಸಿದ್ಧ ರಂಗನಿರ್ದೇಶಕ
ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ
ಮಲ್ಲಾಡಿಹಳ್ಳಿ
ಸ್ವತಂತ್ರ ವಿಜ್ಞಾನ ಕಾಲೇಜು ತಾಲ್ಲೂಕಿಗೆ ಸಮಗ್ರ ಪ್ರಶಸ್ತಿಮಲ್ಲಾಡಿಹಳ್ಳಿ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜು ತಾಲ್ಲೂಕಿನ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಗಳಿಸಿಕೊಂಡಿದ್ದು, ಉತ್ತಮ ಸಂಸ್ಕಾರ, ಉತ್ತಮ ಶಿಕ್ಷಣಕ್ಕೆ ಹೆಸರಾದ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶಾಲಾ ಕಾಲೇಜುಗಳು ಉತ್ತಮ ಯಶಸ್ಸನ್ನು ಗಳಿಸುತ್ತಿರುವುದು ಶ್ಲಾಘನೀಯ ಎಂದು ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ತಿಳಿಸಿದರು. ಬಾಲಕರ ವಿಭಾಗದಲ್ಲಿ ಖೋಖೋ, ಷಟಲ್ ಬ್ಯಾಂಡ್ಮಿಂಟನ್, ಚೆಸ್, ಫುಟ್‍ಬಾಲ್ ಪ್ರಥಮ ಸ್ಥಾನ ಪಡೆದಿದ್ದು, ಕಬಡ್ಡಿ ದ್ವಿತೀಯ ಸ್ಥಾನ ಗಳಿಸಿಕೊಂಡಿದೆ. ಉದ್ದಜಿಗಿತ, ಎತ್ತರ ಜಿಗಿತಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, 400ಮೀ ಓಟ ದ್ವಿತೀಯ ಹಾಗೂ ಗುಂಡು ಎಸೆತ ಮತ್ತು 5000ಮೀ ಓಟ ತೃತೀಯ ಸ್ಥಾನ ಗಳಿಸಿರುತ್ತಾರೆ.
ಬಾಲಕೀಯರ ವಿಭಾಗದಲ್ಲಿ ವಾಲಿಬಾಲ್, ಥ್ರೋಬಾಲ್ ಹಾಗೂ ಷಟಲ್ ಬ್ಯಾಂಡ್ಮಿಂಟನ್‍ನಲ್ಲಿ ಪ್ರಥಮ ಬಾಲ್ ಬ್ಯಾಂಡ್ಮಿಂಟನ್‍ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ. 4*400ಮೀ ರಿಲೇ, ಗುಂಡು ಎಸೆತ ಪ್ರಥಮ ಸ್ಥಾನ ಮತ್ತು ಉದ್ದಜಿಗಿತ, ಎತ್ತರ ಜಿಗಿತ ಹಾಗೂ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಒಟ್ಟಾರೆ ಗುಂಪು ಆಟಗಳಲ್ಲಿ ನಮ್ಮ ಕಾಲೇಜು ಸಮಗ್ರ ಪ್ರಶಸ್ತಿ ಗಳಿಸಿರುವುದಕ್ಕೆ ಆಡಳಿತ ಮಂಡಳಿಯು ಪ್ರಾಚಾರ್ಯರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.