News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

workshop conducted to create awareness about National anthem and national flag

Friday, November 28th, 2014

ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಯ ಮಹತ್ವದ ಅರಿವು ಅವಶ್ಯ-ಎಚ್.ಸ್ವಾಮಿ

ಮಲ್ಲಾಡಿಹಳ್ಳಿ
ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಯ ಮಹತ್ವದ ಅರಿವು ಅವಶ್ಯ ಎಂದು ಸೇವಾದಳದ ಅಧಿಕಾರಿ ಎಚ್.ಸ್ವಾಮಿ ನುಡಿದರು. ಅವರು ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮ ಶ್ರೀ ರಾಘವೇಂದ್ರ ಬಿ.ಇಡಿ ಕಾಲೇಜು ಹಾಗೂ ಸೇವಾದಳ-ದಾವಣಗೆರೆ ಶಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಯ ಅರಿವಿನ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಇಂದು ಸಮಾಜದಲ್ಲಿ ರಾಷ್ಟ್ರಧ್ವಜದ ಮಹತ್ವ ಅರಿಯದೆ ಬೇಕಾಬಿಟ್ಟಿಯಾಗಿ ಧ್ವಜವನ್ನು ಆರೋಹಣ ಮತ್ತು ಅವರೋಹಣ ಮಾಡುತ್ತಿರುವುದು ವಿಷಾದನೀಯ, ಯಾವುದೇ ದೇಶದ ಪ್ರಜೆ ಆ ದೇಶದ ರಾಷ್ಟ್ರಗೀತೆ, ಧ್ವಜ, ಚಿಹ್ನೆ ಇವುಗಳ ಅರಿವನ್ನು ಮಾಡಿಕೊಂಡಾಗ ಮಾತ್ರ ದೇಶಭಕ್ತಿ ಹೆಚ್ಚುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಎಚ್.ಎಸ್.ರಾಮಚಂದ್ರಪ್ಪ ಮಾತನಾಡಿ ಸಮಾಜದಲ್ಲಿ ದೇಶ ಮತ್ತು ದೇಶಭಕ್ತರನ್ನು ಕೇವಲ ರಾಷ್ಟ್ರೀಯ ಹಬ್ಬಗಳಂದು ನೆನಪು ಮಾಡಿಕೊಳ್ಳುವ ಪ್ರಕ್ರಿಯೆ ಇದ್ದು ಅದು ಬದಲಾಗಿ ಪ್ರತಿನಿತ್ಯ ಸ್ಮರಣೆಯನ್ನು ಮಾಡಿಕೊಳ್ಳುವ ಮಹತ್ತರ ಕೆಲಸ ಆಗಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಘವೇಂದ್ರ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಎಸ್.ರವಿಶಂಕರ್ ಮಾತನಾಡಿ ಮುಂದಿನ ಶಿಕ್ಷಕರಾಗುವ ಶಿಕ್ಷಣಾರ್ಥಿಗಳಲ್ಲಿ ಈ ಗೌರವ ಬಂದರೆ ನಾಳಿನ ತರಗತಿಗಳಲ್ಲಿ ಅದು ಸಾಧ್ಯವಾಗುತ್ತದೆ ಎಂದರು. ಪಠ್ಯಕ್ರಮದಲ್ಲಿ ರಾಷ್ಟ್ರೀಯ ಅಭಿಮಾನದ ಬಗ್ಗೆ ಒಂದು ವಿಷಯವಾಗಿ ಬೋಧನೆಯಾಗಬೇಕಾಗಿದೆ ಎಂದರು. ಪೂಜ್ಯ ರಾಘವೇಂದ್ರ ಸ್ವಾಮೀಜಿಯವರು ಸಾರ್ವಜನಿಕರನ್ನು ಯಾವಾಗಲೂ ರಾಷ್ಟ್ರೀಯರೆ ಎಂದು ಸಂಬೋಧಿಸುತ್ತಿದ್ದುದನ್ನು ನೆನಪಿಸಿದರು.
ಉಪನ್ಯಾಸಕರಾದ ಎನ್.ಧನಂಜಯ, ಎನ್.ಎಸ್.ರುದ್ರೇಶ್, ಶಂಕರ್, ಸಂತೋಷ್‍ಕುಮಾರ್, ಭಾಗ್ಯಲಕ್ಷ್ಮಿ ಮತ್ತು ಗ್ರ್ರಂಥಪಾಲಕ ಪಿ.ವಿ.ಬಸವರಾಜು ಉಪಸ್ಥಿತರಿದ್ದರು.