ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ
ತಿರುಕನೂರಿನಲ್ಲಿ ರಂಗದಾಸೋಹದ ಹೆಸರಿನಲ್ಲಿ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಸೂರುದಾಸ್‍ಜೀ ಯವರ ಪುಣ್ಯಾರಾಧನೆಯ ಅಂಗವಾಗಿ ನಡೆದ ನಾಟಕಗಳ ಉತ್ಸವಕ್ಕೆ ತೆರೆ ಎಳೆಯಲಾಯಿತು. ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಂದ ಅಭಿನಯಿಸಲ್ಪಟ್ಟ ನಾಟಕಗಳು ಜನರ ಸಂಭ್ರಮಕ್ಕೆ ಸಾಕ್ಷಿಯಾದವು. ಡಾ.ಶಿವಮೂರ್ತಿ ಮುರುಘಾ ಶರಣರಿಂದ ಉದ್ಘಾಟಿಸಲ್ಪಟ್ಟ ಉತ್ಸವದಲ್ಲಿ ನಾಡಿನ ಹಿರಿಯ ಸಾಹಿತಿಗಳು, ನಾಟಕಕಾರರು, ಕವಿಗಳು ಮತ್ತು ರಾಜಕೀಯ ಧುರೀಣರು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಪಾತ್ರರಾದರು. ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿಯವರ ಉತ್ಸಾಹದ ನಿರ್ದೇಶನದಲ್ಲಿ ಜಾನಪದ ಕಲಾಮೇಳಗಳೊಂದಿಗೆ ಊರಿನಲ್ಲಿ ಪೂಜ್ಯದ್ವಯರ ಭಾವಚಿತ್ರಗಳ ಮೆರವಣಿಗೆ, ಸಾಮೂಹಿಕ ಅನ್ನಸಂತರ್ಪಣೆ ಮತ್ತು ಸಂತೋಷ್ ಕುಮಾರ್‍ರ ಮಾರ್ಗದರ್ಶನದಲ್ಲಿ ಯೋಗತರಬೇತಿ ಶಿಬಿರವು ಉಚಿತವಾಗಿ ಸಾರ್ವಜನಿಕರಿಗಾಗಿ ನಡೆಸಲ್ಪಟ್ಟು ಯಶಸ್ವಿಯಾಗಿ ನಡೆಯಿತು.
ಈ ಶತಮಾನದ ಶ್ರೇಷ್ಠ ಕವಿ, ನಾಟಕಕಾರ, ಭಾರತೀಯ ಚಿಂತಕರಲ್ಲೊಬ್ಬರಾದ ಕುವೆಂಪು. ಅವರ ನಾಟಕಗಳು ಪ್ರಜಾಸತ್ತಾತ್ಮಕ ಸಮಾಜಕ್ಕೆ ಹೊಸ ರೂಪ ಕೊಟ್ಟಿವೆ. ಜಾತಿ, ಮತ್ತು ವರ್ಗ ಸಂಘರ್ಷದ ವೈರುಧ್ಯವನ್ನು ಯಥವತ್ತಾಗಿ ಚಿತ್ರಿಸುವ ಜಲಗಾರ ಪೂರ್ವದಿಕ್ಕಿನಿಂದ ಸ್ವಚ್ಚಂದವಾದ ನೀಲಿ ಬಾನಂಗಳಲ್ಲಿ ಸೂರ್ಯನ ಹೊಂಗಿರಣಗಳು ಮೂಡುವ ಮುನ್ನವೇ ಎದ್ದು ಇಡೀ ಗ್ರಾಮವನ್ನು ಸ್ವಚ್ಚಗೊಳಿಸುವ ಕಾಯಕದಲ್ಲೇ ದೇವರನ್ನು ಕಾಣುವ ಜಲಗಾರನ ಅಸಹಾಯಕತೆ ಮತ್ತು ಅನಿವಾರ್ಯತೆಯ ಸಂಕೇತವಾಗಿ ಗೋಚರಿಸಿದರೂ ಅನ್ಯತಾ “ಶರಣಂ ಶಾಸ್ತಿ” ಅನ್ನೋದನ್ನ ಆತನು ಒಪ್ಪಿಕೊಂಡ ಬಾಳಿನ ತತ್ವ ಆದರೆ ಕೆಳಸ್ತರದ ನಿಷ್ಠಾವಂತ ಕರ್ಮಯೋಗಿ ಈ ಜಲಗಾರ.
ಬೇಂದ್ರೆಯವರ ‘ಜಾತ್ರೆ’ ನಾಟಕ ಒಂದು ಬಗೆಯ ಅಸಂಗತೆಯನ್ನು ಬಿಂಬಿಸುತ್ತದೆ. ಆಳುವ ವರ್ಗದ ದರ್ಪ ಮತ್ತು ಸರಕಾರಗಳ ಶೋಷಣೆ ಆಡಳಿತದ ಹುಚ್ಚಾಟಗಳು ನಿರಂತರವಾಗಿ ನಡೆಯುತ್ತಲೇ ಇವೆ. ಸರಕಾರ ಹೇಳಿದ್ದೇ ಸತ್ಯ ಎಂಬ ಬೇಂದ್ರೆಯವರ ‘ಜಾತ್ರೆಯ’ ಬೀಜವಾದ ಇಂದಿನ ಬಂಡವಾಳಶಾಹಿ ಪ್ರಜಾಸತ್ತೆಯ ಆಳ್ವಿಕೆಯ ಸೂತ್ರವು ಆಗಿದೆ. ಹುಚ್ಚಾಪುರದ ದೊರೆ-ಸಂಸ್ಥಾನಿಕ ಹಳೆಯ ಹುಚ್ಚ ಮಹಾರಾಜನಿಂದ ಹಿಡಿದು ಆಧುನಿಕ ಹುಚ್ಚಮಂತ್ರಿ ಮತ್ತು ಶಾಸಕರ ವರೆಗೂ ಸಾಂಕೇತಿಕತೆ ಪ್ರಾತಿನಿಧ್ಯ ವಹಿಸುವುದು ಮುಖ್ಯವಿಷಯ ಊರಲ್ಲಿ ಪ್ಲೇಗಿಲ್ಲ ಯಾರು ಸತ್ತರೂ ಜನರು ಊರು ಬಿಡಬಾರದು ಜಾತ್ರೆÉ ನಡೆದೇ ನಡೆಯುತ್ತದೆ. ಎಂದು ಡಂಗೂರ ಸಾರಿಸಿದ್ದು ಇದು ಹುಚ್ಚಾಟತನಕ್ಕೆ ವಿಪರೀತ ನಡತೆ. ಪ್ರಜೆಗಳಂತೆ ಬೆಕ್ಕು, ಇಲಿ ಸಹ ರಾಜಾಜ್ಞೆ ಪಾಲಿಸಬೇಕು ಎಂಬ ಹುಚ್ಚು ದೊರೆಯದ್ದು ಅದಕ್ಕೆ ಬಲಿಯಾದವರು ಪ್ರಜೆಗಳು ಸ್ವತಃ ದೊರೆಗೆ ಪ್ಲೇಗಾದಾಗ ಅವನಿಗೆ ವಿವೇಕೋದಯವಾಗುತ್ತದೆ. ಹೃದಯ ದ್ರವಿಸುತ್ತದೆ. “ಊರೊಳಗಿನ ಎಲ್ಲ ಇಲಿಗಳನ್ನು ಕೊಂದು ಬಿಡಿರಿ ಊರ ಜನರಿಗೆ ಊರ ಬಿಡಲು ಹೇಳಿರಿ ಜೀವದ ಜಾತ್ರೆ ಹೊರಡಲಿ ಊರಲ್ಲಿ ಪ್ಲೇಗಿದೆ” ಎಂದು ಒಪ್ಪಿ ಸಾಯುತ್ತಾನೆ. ಇಲ್ಲಿಗೆ ಹುಚ್ಚಾಟ ಮುಕ್ತಾಯವಾಗುತ್ತದೆ ಆಳುವವರು ಸಾರುತ್ತ ಹೊದದ್ದೆಲ್ಲಾ ಸತ್ಯವಲ್ಲ ಆಳಿಸಿ ಕೊಳ್ಳುವವರಿಗೆ ಶಾಶ್ವತ ಆನಂದ ಕೊಡಬಲ್ಲದ್ದಷ್ಟೇ ಸತ್ಯ.
ಪ್ರಸಿದ್ಧ ರಂಗಕರ್ಮಿ ವೈ.ಡಿ.ಬದಾಮಿ ಹಾಗೂ ಮಂಜುಳಾ ಬದಾಮಿಯವರ ನಿರ್ದೇಶನದಲ್ಲಿ ಮೂಡಿಬಂದ ಈ ಎರಡು ನಾಟಕಗಳು ವಿಭಿನ್ನವಾಗಿ ಮೂಡಿಬಂದವು. ಸುರೇಶ ಕೇಸಾಪುರ ಸಂಗೀತ ತಿರುಕರಂಗ ಸಾಂಸ್ಕøತಿಕ ವೇದಿಕೆಯ ಅಧ್ಯಾಪಕ ನಟ ಜೆ.ರಘುನಾಥ್‍ನ ಶಿವನ ಪಾತ್ರ, ಇನ್ನೋರ್ವ ಅಧ್ಯಾಪಕ ನಟ ಗಣಪತಿ ಗೌಡನ ಜಲಗಾರನ ಪಾತ್ರಗಳು ನೆರೆದಿದ್ದ ಪ್ರೇಕ್ಷಕರ ಮನತಣಿಸಿದವು. ಡಾ.ಶಿವಮೂರ್ತಿ ಮುರುಘಾ ಶರಣರು, ಚಿತ್ರದುರ್ಗ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಕವಿ ಚಂದ್ರಶೇಖರ ತಾಳ್ಯ, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ನಟರನ್ನು ಅಭಿನಂದಿಸಿದರು.