News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

Poshakaru Tamma Makkala Kadege Gamana Avashya-Prof.T.H. Krishnamurthy

Monday, February 13th, 2017

ಮಲ್ಲಾಡಿಹಳ್ಳಿ
ಪೋಷಕರು ತಮ್ಮ ಮಕ್ಕಳ ಕಡೆಗೆ ಗಮನ ಹರಿಸಿ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸಿ ಉತ್ತಮ ಅಂಕಗಳಿಸಲು ನೆರವಾಗಬೇಕೆಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು ಅವರು ಮಲ್ಲಾಡಿಹಳ್ಳಿಯಲ್ಲಿ ನಡೆದ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಮಕ್ಕಳು ಮಾಧ್ಯಮಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದು ಮೊಬೈಲ್ ಮತ್ತು ಟಿ.ವಿಗಳಲ್ಲಿ ದಿನಕಳೆಯುತ್ತಿದ್ದು ಉತ್ತಮ ಅಂಕಗಳಿಸದೇ ಇರುವುದು ಆತಂಕಕಾರಿ ಮುಂದೆ ಅವರ ಭವಿಷ್ಯವನ್ನು ರೂಪಿಸುವ ಪೋಷಕರು ಅದರ ಕಡೆ ಗಮನ ಹರಿಸುವುದು ಅವಶ್ಯವಾಗಿದೆ ಪರೀಕ್ಷಾ ಸಮಯದಲ್ಲಿ ಶಿಕ್ಷಕರಿಗಿಂತಲೂ ಪೋಷಕರ ಗಮನ ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಬಿ.ತಿಪ್ಪೇಸ್ವಾಮಿ ಮಾತನಾಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನಾಥಸೇವಾಶ್ರಮದ ಪರಿಸರ ಉತ್ತಮವಾಗಿದ್ದು ಅನೇಕ ದಾನಿಗಳ ನೆರವಿನಿಂದ ಪೂಜ್ಯರು ಅನಾಥಸೇವಾಶ್ರಮವನ್ನು ಕಟ್ಟಿದ್ದಾರೆ ನನ್ನ ಅಧಿಕಾರಾವಧಿಯಲ್ಲಿ ಸಾಧ್ಯವಾದಷ್ಟು ಅನುದಾನವನ್ನು ಸರಕಾರದ ವತಿಯಿಂದ ಕೊಡಿಸಲಿಕ್ಕೆ ಶ್ರಮವಹಿಸುತ್ತೇನೆ ಎಂದರು.
ಇನ್ನೋರ್ವ ಅತಿಥಿ ಉಪವಲಯಾಧಿಕಾರಿ ಎಚ್.ಎ.ಮಾರುತಿ ಮಾತನಾಡಿ ಶಿಸ್ತು, ಸಂಸ್ಕಾರ ಮತ್ತು ಸಂಸ್ಕೃತಿಗೆ ಅನಾಥಸೇವಾಶ್ರಮವು ಮೊದಲಿನಿಂದಲೂ ಹೆಸರನ್ನು ಗಳಿಸಿಕೊಂಡಿದೆ. ಇಲ್ಲಿ ಓದಿರುವ ನನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಈ ಭಾಗದ ಜನರ ಆರ್ಥಿಕ, ಸಾಮಾಜಿಕ ಮತ್ತು ನೈತಿಕ ಜೀವನವನ್ನು ಉತ್ತಮ ಗೊಳಿಸಲಿಕ್ಕೆ ಸದಾ ಶ್ರಮಿಸುತ್ತಿದೆ ಎಂದರು.
ಮುಖ್ಯೋಪಾಧ್ಯಾಯ ಎಂ.ಎನ್.ವೇಣು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಪಂಚಾಯತ್ ಸದಸ್ಯೆ ಸರೋಜಾ ಕುಬೇರಪ್ಪ, ಮಲ್ಲಾಡಿಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಬಿ.ಪಿ.ಚಂದ್ರಶೇಖರ್ ಸ್ವಾಗತಿಸಿ, ಪಲ್ಲವಿ ಬಿ.ಎನ್.ವಂದಿಸಿ, ಜಿ.ರಂಗಸ್ವಾಮಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Prof.T.H.Krishna Murthy Inaugurate the Function