ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ : ಅಹಿಂಸಾತ್ಮಕವಾಗಿ ಕನ್ನಡವನ್ನು ಬೆಳಸಬೇಕೆಂದು ಕವಿ ಚಂದ್ರಶೇಖರ ತಾಳ್ಯ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಎಲ್ಲ ಶಾಲಾ ಕಾಲೇಜುಗಳು ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಚಿತ್ರದುರ್ಗದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಜಗತ್ತಿನಲ್ಲಿ ಯಾವುದೇ ಭಾಷೆಯನ್ನು ಬೆಳೆಸಬೇಕು ಎಂದು ನಿರ್ಧರಿಸಿದರೆ ಅದು ಅಹಿಂಸಾ ಮಾರ್ಗವಾಗಿರಬೇಕು ಹಾಗೆಯೇ ಕನ್ನಡ ಭಾಷೆ ಹಿಂದಿನಿಂದಲೂ ಅಹಿಂಸಾ ಮಾರ್ಗದಿಂದ ಬೆಳೆದು ಬಂದಿದೆ. ಸಾಕಷ್ಟು ಇತಿಹಾಸವಿರುವ ಕನ್ನಡ ಭಾಷೆ ಇಂದು ಸೊರಗುತ್ತಿರುವುದು ವಿಷಾದನೀಯ ಕನ್ನಡ ಭಾಷೆ ನಾಶವಾದರೆ ಅದರ ಜೊತೆಯಲ್ಲಿ ಕನ್ನಡ ಸಂಸ್ಕøತಿ ನಾಶವಾಗುತ್ತದೆ ಎನ್ನುವುದನ್ನು ಮರೆಯಬಾರದು ಆದ್ದರಿಂದ ಕನ್ನಡ ಭಾಷೆಯ ಜೊತೆಯಲ್ಲಿ ಕನ್ನಡ ಸಂಸ್ಕøತಿಯನ್ನು ಪರಿಚಯಿಸುವ ಕೆಲಸವಾಗಬೇಕು ಎಂದರು.
ಅನಾಥಸೇವಾಶ್ರಮದ ಕಾರ್ಯನಿರ್ವಹಣಾಧಿಕಾರಿ ಹಾಗೂ ನಿವೃತ್ತ ಅಪರ ಜಿಲ್ಲಾಧಿಕಾರಿ ಎ.ಎಸ್.ನಿರ್ವಾಣಪ್ಪ ಮಾತನಾಡಿ ಕನ್ನಡ ಭಾಷೆ, ಜಲ, ನೆಲವನ್ನು ಕಾಪಾಡುವ ಕನ್ನಡಿಗರಾಗಬೇಕೆ ವಿನಃ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಬೇರೆ ಸಂಸ್ಕøತಿಯನ್ನು ಕಲಿಯುವ ಕನ್ನಡಿಗರಾಗಬಾರದು ಎಂದರು ಕನ್ನಡ ಭಾಷೆಯನ್ನು ಪೂರ್ಣ ಕಲಿತು ನಂತರ ಜಗತ್ತಿನ ಯಾವುದೇ ಭಾಷೆಯನ್ನು ಕಲಿಯುವುದು ತಪ್ಪಲ್ಲ. ಅನಾಥಸೇವಾಶ್ರಮದಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಯಾವಾಗಲೂ ನಡೆಯುತ್ತಿರುತ್ತದೆ. ಅನಾಥಸೇವಾಶ್ರಮದ ಅಧ್ಯಕ್ಷರಾದ ಪೂಜ್ಯ ಡಾ.ಶಿವಮೂರ್ತಿ ಮುರುಘಾ ಶರಣರು ಶರಣ ಸಂಸ್ಕøತಿಯ ಮೂಲಕ ಕನ್ನಡ ಸಂಸ್ಕøತಿಯನ್ನು ವಿಶ್ವದೆಲ್ಲಡೆ ಪ್ರಚಾರ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ಕನ್ನಡ ಗೀತೆಗಳ ನೃತ್ಯರೂಪಕಗಳನ್ನು ಮಾಡಿಸಲಾಯಿತು.
ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಾಪಕರಾದ ಎಂ.ಓ.ಸ್ವಾಮಿ ಸ್ವಾಗತಿಸಿ, ವೈ.ಬಿ.ವನಜಾಕ್ಷಮ್ಮ ನಿರೂಪಿಸಿ, ಜಿ.ಟಿ.ಶಂಕರಮೂರ್ತಿ ವಂದಿಸಿದರು.