News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

Author Archive

ಪ್ರತಿಭೆಗೆ ಪುರಸ್ಕಾರ ದೊರೆತರೆ ಏನನ್ನಾದರೂ ಸಾಧಿಸಲು ಸಾಧ್ಯ-ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ಪ್ರತಿಭೆಗೆ ಪುರಸ್ಕಾರ ದೊರೆತರೆ ಏನನ್ನಾದರೂ ಸಾಧಿಸಲು ಸಾಧ್ಯ-ಪ್ರೊ.ಟಿ.ಎಚ್.ಕೃಷ್ಣಮೂರ್ತಿ

Tuesday, December 12th, 2017

ಮಲ್ಲಾಡಿಹಳ್ಳಿ ಯಾವುದೇ ರಂಗದಲ್ಲಿ ಪ್ರತಿಭೆಗೆ ಪುರಸ್ಕಾರ ದೊರೆತರೆ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ತುಂಬಾ ಶ್ಲಾಘನೀಯವಾದದ್ದಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವಯುತ ಸ್ಥಾನಗಳನ್ನು ಪಡೆದುಕೊಂಡು ಮುಂದಿನ ವಿದ್ಯಾರ್ಥಿಗಳು ನಮ್ಮಂಥಾಗಲಿ ಎಂದು ಹಾರೈಸಿ ನೀಡುವ ಪ್ರೋತ್ಸಾಹ ಮತ್ತು ಸಂಸ್ಥೆಯ ಬಗೆಗಿನ […]

ಸ್ವ-ಉದ್ಯೋಗಕ್ಕೆ ತರಬೇತಿ ಅವಶ್ಯ-ರುಡ್‍ಸೆಟ್ ನಿರ್ದೇಶಕ ನಾಗರಾಜ್

ಸ್ವ-ಉದ್ಯೋಗಕ್ಕೆ ತರಬೇತಿ ಅವಶ್ಯ-ರುಡ್‍ಸೆಟ್ ನಿರ್ದೇಶಕ ನಾಗರಾಜ್

Tuesday, November 21st, 2017

ಮಲ್ಲಾಡಿಹಳ್ಳಿ ಸ್ವ-ಉದ್ಯೋಗ ಮಾಡುವವರಿಗೆ ತರಬೇತಿ ಅವಶ್ಯವಿದ್ದು ಅದನ್ನು ತಾಂತ್ರಿಕ ತರಬೇತಿಯನ್ನು ಹೊಂದಿದ ನುರಿತರಿಂದ ತರಬೇತಿ ಪಡೆದುಕೊಳ್ಳುವುದು ಅವಶ್ಯವಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ತರಬೇತಿ ಕೇಂದ್ರದ ನಿರ್ದೇಶಕ ಕೆ.ನಾಗರಾಜ್ ಹೇಳಿದರು. ಅವರು ಮಲ್ಲಾಡಿಹಳ್ಳಿ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಪ್ರಗತಿಬಂಧು ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಏರ್ಪಡಿಸಲಾಗಿದ್ದ ಸ್ವ-ಉದ್ಯೋಗ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ ಇಂದು ಎಲ್ಲ ರಂಗಗಳಲ್ಲೂ ತರಬೇತಿ ಅವಶ್ಯಕತೆ ಇದ್ದು ರುಡ್‍ಸೆಟ್‍ನಂತಹ ಸಂಸ್ಥೆಯಲ್ಲಿ ತರಬೇತಿ […]

ಶೇ 100 ಫಲಿತಾಂಶ ಪಡೆದ ಮಲ್ಲಾಡಿಹಳ್ಳಿ ಬಿ.ಇಡಿ ಕಾಲೇಜು

ಶೇ 100 ಫಲಿತಾಂಶ ಪಡೆದ ಮಲ್ಲಾಡಿಹಳ್ಳಿ ಬಿ.ಇಡಿ ಕಾಲೇಜು

Thursday, November 9th, 2017

ಮಲ್ಲಾಡಿಹಳ್ಳಿ ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ ಪ್ರತಿವರ್ಷದಂತೆ ಈ ವರ್ಷವೂ ಶೇ.100 ಫಲಿತಾಂಶ ಪಡೆದು ಉತ್ತಮ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿಯನ್ನು ಉಳಿಸಿಕೊಂಡಿದೆ ಎಂದು ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಹೇಳಿದರು. 3ನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದು 516 ಅಂಕದೊಂದಿಗೆ ಶೇ.86 ಗಳಿಸಿದ ಫಿರ್ದೋಸರಾ ಖಾನಂ ಪ್ರಥಮ ಸ್ಥಾನ ಪಡೆದರು. 508 ಅಂಕ ಗಳಿಸಿದ ತೋಹಿದಾ ಖಾನಂ ದ್ವಿತೀಯ ಸ್ಥಾನ, 504 ಅಂಕಗಳಿಸಿದ ಕವಿತಾ.ಆರ್. ತೃತೀಯ ಸ್ಥಾನ […]

ಮಾತಿಗಿಂತ ಮೌನ ಹೆಚ್ಚು ಪರಿಣಾಮಕಾರಿ-ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ

ಮಾತಿಗಿಂತ ಮೌನ ಹೆಚ್ಚು ಪರಿಣಾಮಕಾರಿ-ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ

Tuesday, November 7th, 2017

ಮಲ್ಲಾಡಿಹಳ್ಳಿ ಮಾತಿಗಿಂತ ಮೌನ ಹೆಚ್ಚು ಪರಿಣಾಮಕಾರಿಯಾಗುತ್ತದೆ ಮತ್ತು ಅದರ ಜೊತೆಗೆ ಹಲವಾರು ಅರ್ಥಗಳನ್ನು ತಂದುಕೊಟ್ಟು ವ್ಯಕ್ತಿಯ ಗೌರವವನ್ನು ಹೆಚ್ಚಿಸುತ್ತದೆ ಎಂದು ಅನಾಥಸೇವಾಶ್ರಮ ವಿಶ್ವಸ್ತ, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತು ಆರ್ಥಿಕ ತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ನುಡಿದರು. ಅವರು ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಸಂಸ್ಥಾಪಕ ಕಾರ್ಯದರ್ಶಿ ಪೂಜ್ಯ ಶ್ರೀ ಸೂರುದಾಸ್‍ಜೀ ಸಂಸ್ಥರಣೆಯ ಅಂಗವಾಗಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಸ್ತುತ ಸಮಾಜದಲ್ಲಿ ಮಾತುಗಳಿಗೆ ಹೆಚ್ಚು ಗಮನಹರಿಸುತ್ತೇವೆ ಆದರೆ ಈ ಎಲ್ಲದಕ್ಕೂ […]

ಬದುಕನ್ನು ಅರ್ಥೈಸಿಕೊಂಡು ಅನುಭವಿಸಿ-ಪ್ರೊ.ಕೆ.ಎಸ್.ಗಂಗಾಧರ್

ಬದುಕನ್ನು ಅರ್ಥೈಸಿಕೊಂಡು ಅನುಭವಿಸಿ-ಪ್ರೊ.ಕೆ.ಎಸ್.ಗಂಗಾಧರ್

Saturday, October 28th, 2017

ಮಲ್ಲಾಡಿಹಳ್ಳಿ ಬದುಕು ಸಂಕೀರ್ಣವಾಗಿದ್ದು ಅರ್ಥೈಸಿಕೊಂಡು ಅನುಭವಿಸಿದಾಗ ಮಾತ್ರ ಮನುಷ್ಯ ಪರಿಪೂರ್ಣನಾಗುತ್ತಾನೆ ಎಂದು ದಾವಣಗೆರೆ ಎಸ್.ಎಂ.ಕೃಷ್ಣ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಪ್ರೊ.ಗಂಗಾಧರ್ ತಿಳಿಸಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಬಿ.ಇಡಿ ಕಾಲೇಜಿನ 2017ನೇ ಸಾಲಿನ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಸಮಾಜಕ್ಕೆ ಪ್ರಜ್ಞಾವಂತ, ಉತ್ತಮ ಸಂಸ್ಕಾರ ಹೊಂದಿದ ಶಿಕ್ಷಕರು ಅಗತ್ಯವಿದ್ದು ಇಂತಹ ಶಿಕ್ಷಕರನ್ನು ತಯಾರು ಮಾಡಲು ಶಿಕ್ಷಕರ ತರಬೇತಿ ಸಂಸ್ಥೆಗಳು ನಿರಂತರವಾಗಿ ಶ್ರಮಿಸುತ್ತಿವೆ ಶಿಕ್ಷಣಾರ್ಥಿಗಳು ಏನೇ ಕಲಿತರು ಗುರುಮುಖೇನ ಕಲಿತು ಅವುಗಳನ್ನು ಆಚರಣೆಯಲ್ಲಿ ತಂದಾಗ […]

ಮಲ್ಲಾಡಿಹಳ್ಳಿ ಸ್ವತಂತ್ರ ವಿಜ್ಞಾನ ಕಾಲೇಜು ತಾಲ್ಲೂಕಿಗೆ ಸಮಗ್ರ ಪ್ರಶಸ್ತಿ

ಮಲ್ಲಾಡಿಹಳ್ಳಿ ಸ್ವತಂತ್ರ ವಿಜ್ಞಾನ ಕಾಲೇಜು ತಾಲ್ಲೂಕಿಗೆ ಸಮಗ್ರ ಪ್ರಶಸ್ತಿ

Thursday, September 7th, 2017

ಮಲ್ಲಾಡಿಹಳ್ಳಿ ಸ್ವತಂತ್ರ ವಿಜ್ಞಾನ ಕಾಲೇಜು ತಾಲ್ಲೂಕಿಗೆ ಸಮಗ್ರ ಪ್ರಶಸ್ತಿಮಲ್ಲಾಡಿಹಳ್ಳಿ  ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜು ತಾಲ್ಲೂಕಿನ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಗಳಿಸಿಕೊಂಡಿದ್ದು, ಉತ್ತಮ ಸಂಸ್ಕಾರ, ಉತ್ತಮ ಶಿಕ್ಷಣಕ್ಕೆ ಹೆಸರಾದ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶಾಲಾ ಕಾಲೇಜುಗಳು ಉತ್ತಮ ಯಶಸ್ಸನ್ನು ಗಳಿಸುತ್ತಿರುವುದು  ಶ್ಲಾಘನೀಯ ಎಂದು ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ತಿಳಿಸಿದರು. ಬಾಲಕರ ವಿಭಾಗದಲ್ಲಿ ಖೋಖೋ, ಷಟಲ್ ಬ್ಯಾಂಡ್ಮಿಂಟನ್, ಚೆಸ್, ಫುಟ್‍ಬಾಲ್ ಪ್ರಥಮ ಸ್ಥಾನ ಪಡೆದಿದ್ದು, ಕಬಡ್ಡಿ ದ್ವಿತೀಯ ಸ್ಥಾನ ಗಳಿಸಿಕೊಂಡಿದೆ. ಉದ್ದಜಿಗಿತ, ಎತ್ತರ […]

ಗಾಂಧೀಜಿಯವರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಿ- ಡಾ.ಶಿ.ಮು.ಶ

ಗಾಂಧೀಜಿಯವರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಿ- ಡಾ.ಶಿ.ಮು.ಶ

Wednesday, August 16th, 2017

ಮಲ್ಲಾಡಿಹಳ್ಳಿ ಗಾಂಧೀಜಿಯವರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಮಲ್ಲಾಡಿಹಳ್ಳಿಯ ಎಲ್ಲ ಶಾಲಾ ಕಾಲೇಜುಗಳ ವತಿಯಿಂದ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ತಮ್ಮ ಸಂದೇಶದಲ್ಲಿ ತಿಳಿಸಿದರು. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಬುದ್ಧನಂತೆ ಕಟ್ಟೆಯ ಮೇಲೆ ಧ್ಯಾನಾಸಕ್ತನಾಗಿ ಯೋಚಿಸುವ ಅಗತ್ಯತೆ ಇಂದು ನಮ್ಮ ಯುವಕರಿಗೆ ಬೇಕಾಗಿದೆ ಎಂದರು. ನಾವೆಲ್ಲರೂ ಸೇರಿ ಗಾಂಧೀಜಿಯವರ ಕನಸುಗಳನ್ನು ಪ್ರೋತ್ಸಾಹಿಸುವ ದಿಕ್ಕಿನಲ್ಲಿ ಆರೋಗ್ಯಯುತ, ಶಾಂತಿಯುತ ಸಮಾಜವನ್ನು ಕಟ್ಟಬೇಕು ಎಂದರು. ಒಟ್ಟಾರೆಯಾಗಿ ಸಂಘಶಕ್ತಿ ರಾಷ್ಟ್ರಶಕ್ತಿಯಾಗಿ ರೂಪುಗೊಳ್ಳುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಯೋನಿವೃತ್ತಿ […]

ಆಗಸ್ಟ್ 1 ರಿಂದ 3ರ ವರೆಗೆ ಮಲ್ಲಾಡಿಹಳ್ಳಿ ಸ್ವಾಮೀಜಿದ್ವಯರ ಪುಣ್ಯಾರಾಧನೆ

ಆಗಸ್ಟ್ 1 ರಿಂದ 3ರ ವರೆಗೆ ಮಲ್ಲಾಡಿಹಳ್ಳಿ ಸ್ವಾಮೀಜಿದ್ವಯರ ಪುಣ್ಯಾರಾಧನೆ

Thursday, July 27th, 2017

ಮಲ್ಲಾಡಿಹಳ್ಳಿ ಯೋಗ, ಆಯುರ್ವೇದ ಮತ್ತು ಶಿಕ್ಷಣಕ್ಕೆ ಪ್ರಸಿದ್ಧವಾದ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಸ್ಥಾಪಕರಾದ ವ್ಯಾಯಾಮ ಮೇಷ್ಟ್ರು, ಅಭಿನವ ಧನ್ವಂತರಿ ತಿರುಕನಾಮಾಂಕಿತ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಅವರ ಜೊತೆಗೂಡಿ ಬಡವರ, ದೀನದಲಿತರ ಹಾಗೂ ಹಿಂದುಳಿದ ವರ್ಗದವರ ಏಳ್ಗೆಗಾಗಿ ಉತ್ತಮ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಕಾರಣರಾದ ಪೂಜ್ಯ ಶ್ರೀ ಸೂರುದಾಸ್‍ಜೀ ಸ್ವಾಮೀಜಿದ್ವಯರ ಪುಣ್ಯಾರಾಧನೆಯು ಬರುವ ಆಗಸ್ಟ್ 1 ರಿಂದ 3ರವರೆಗೆ ನಡೆಯಲಿದೆ ಎಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು. ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ದೈಹಿಕ ಶಿಕ್ಷಣ […]

ಮಲ್ಲಾಡಿಹಳ್ಳಿ ಗುರುಕುಲದ ಜಿ.ಎಸ್.ಮನೋಹರಿ ತಾಲ್ಲೂಕಿಗೆ ಪ್ರಥಮ

ಮಲ್ಲಾಡಿಹಳ್ಳಿ ಗುರುಕುಲದ ಜಿ.ಎಸ್.ಮನೋಹರಿ ತಾಲ್ಲೂಕಿಗೆ ಪ್ರಥಮ

Thursday, June 29th, 2017

ಮಲ್ಲಾಡಿಹಳ್ಳಿ 2017ನೇ ನವೋದಯ ಶಾಲೆಯ ಆಯ್ಕೆಗಾಗಿ ನಡೆದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯಲ್ಲಿ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ರಾಘವೇಂದ್ರ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿನಿ ಜಿ.ಎಸ್.ಮನೋಹರಿ ಹೊಳಲ್ಕೆರೆ ತಾಲ್ಲೂಕಿಗೆ ಪ್ರಥಮ ಸ್ಥಾನಗಳಿಸಿ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ನವೋದಯ ಶಾಲೆಗೆ ಆಯ್ಕೆಯಾಗಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ತಿಳಿಸಿದರು. ಶಿಸ್ತು, ಸಂಸ್ಕಾರ ಹಾಗೂ ಶಿಕ್ಷಣಕ್ಕೆ ಹೆಸರಾದ ಸಂಸ್ಥೆಯಲ್ಲಿ ಪ್ರತಿವರ್ಷವೂ ಈ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಿದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಖ್ಯೋಪಾಧ್ಯಾಯರು, ಶಿಕ್ಷಕರು […]

ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ – ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ

Thursday, June 22nd, 2017

ಮಲ್ಲಾಡಿಹಳ್ಳಿ ಯೋಗಾಚರಣೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಲಭಿಸುತ್ತದೆ ಎಂದು ಅನಾಥಸೇವಾಶ್ರಮ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಹೇಳಿದರು. ಅವರು ಮಲ್ಲಾಡಿಹಳ್ಳಿಯಲ್ಲಿ 3ನೇ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸೀನಿಯರ್ ಹಾಗೂ ಜ್ಯೂನಿಯರ್ ಎನ್.ಸಿ.ಸಿ. ಕೆಡೆಟ್‍ಗಳ ಯೋಗ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಯೋಗ ಅವಶ್ಯವಾಗಿದ್ದು ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ 20 ನಿಮಿಷಗಳಾದರೂ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಇದರಿಂದ ಆರೋಗ್ಯವಾದ ಜೀವನ ನಡೆಸಬಹುದು ಮುಂದೆ ಆರೋಗ್ಯವಂತ ಸಮಾಜದ ಸೃಷ್ಠಿಯಾಗುತ್ತದೆ ಎಂದರು. ಯೋಗ ತರಬೇತುದಾರ ಸಂತೋಷ್‍ಕುಮಾರ್ […]