News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಭಾರತದ ಸಂಸ್ಕøತಿಯ ರಾಯಭಾರಿ ವಿವೇಕಾನಂದರು-ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ

Saturday, January 30th, 2016

ಭಾರತದ ಸಂಸ್ಕøತಿಯ ರಾಯಭಾರಿ ವಿವೇಕಾನಂದರು ಎಂದು ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿವೇಕಾನಂದರು ಭಾರತದ ಸಂಸ್ಕøತಿಯನ್ನು ವಿಶ್ವಕ್ಕೆ ಸಾರಿದ ಮೊದಲಿಗರು ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಭಾರತದ ಸಂಸ್ಕøತಿಯನ್ನು ಅಂದು ಪ್ರಚಾರ ಮಾಡಿ ಇಂದಿಗೂ ಅಮೇರಿಕನ್ನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಸಿದರು ವಿವೇಕಾನಂದರು ಎಂದರು. ಭಾರತದ ಯುವಶಕ್ತಿ ಅತ್ಯಂತ ಪ್ರಬಲವಾದದ್ದು ಅದನ್ನು ಹೆಚ್ಚು ಬಳಸಿದಲ್ಲಿ ವಿಶ್ವದಲ್ಲೇ ಭಾರತ ಪ್ರಥಮಸಾಲಿನಲ್ಲಿ ನಿಲ್ಲುತ್ತದೆ ಎಂದರು.

IMG-20160119-WA0031

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಜಿ.ಯು.ನಾಗರಾಜ್ ಮಾತನಾಡಿ ವಿವೇಕಾನಂದರು ಯುವಶಕ್ತಿಯ ನೇತಾರರಾಗಿ ಅಂದು ಹೇಳಿದ ವಾಕ್ಯಗಳನ್ನು ಇಂದು ಜಾರಿಗೆ ತರುವಲ್ಲಿ ಶ್ರಮವಹಿಸುತ್ತಿದ್ದೇವೆ. ಭಾರತ ಇಂದು ಎಲ್ಲ ಕ್ಷೇತ್ರಗಳಲ್ಲೂ ಬೆಳೆದಿದೆ ಆದರೆ ವಿವೇಕಾನಂದರ ಕಲ್ಪನೆಯಂತೆ ಬೆಳೆದರೆ ಮಾತ್ರ ಪ್ರಬಲರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ ಎಂದರು. ಕನ್ನಡ ಭಾಷಾ ಉಪನ್ಯಾಸಕ ಶಿವಲಿಂಗಪ್ಪ ಮಾತನಾಡಿದರು.

IMG-20160119-WA0028

ಉಪನ್ಯಾಸಕಿ ಜೆ.ಸಿದ್ಧಲಿಂಗಮ್ಮ ಸ್ವಾಗತಿಸಿ, ಉಪನ್ಯಾಸಕ ಉಮೇಶ್ ರಾಂಪುರ ವಂದಿಸಿ, ವೈ.ಬಿ.ವನಜಾಕ್ಷಮ್ಮ ನಿರೂಪಿಸಿದರು.