ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಅನಂತ ನಮಸ್ಕಾರಗಳು,
ತಮ್ಮ ಕೃಪಾಶೀರ್ವಾದದ ಬಲದಿಂದ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮವು ನಿರಂತರ ಪ್ರಗತಿಯನ್ನು ಸಾಧಿಸುತ್ತ ಮನ್ನಡೆದಿದೆ. ದಾನ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಲಭ್ಯವಾಗುವ ಆದಾಯವನ್ನು ಜತನ ಮಾಡಿಕೊಂಡು ಕಾಳಜಿಯಿಂದ ಬಳಸುತ್ತ ಬಂದುದರಿಂದ ಕನಿಷ್ಠ 5-6 ಕೋಟಿ ಮೊತ್ತದ ಕಟ್ಟಡ ಕಾಮಗಾರಿಗಳು ಆಶ್ರಮದ ಆವರಣದಲ್ಲಿ ಮತ್ತು ಆಶ್ರಮದ ಬೇರೆ ಊರಿನಲ್ಲಿಯ ಶಾಲಾ ಆವರಣಗಳಲ್ಲಿ ಇತ್ತೀಚೆಗೆ ಏರ್ಪಟ್ಟಿವೆ. ಆಶ್ರಮದ ಆವರಣದಲ್ಲಿ ಶಿಕ್ಷಣ ಕಾಲೇಜು, ಐ.ಟಿ.ಐ., ಆಯುರ್ವೇದ ಮಹಾವಿದ್ಯಾಲಯ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಮತ್ತು ಪದವಿ ಪೂರ್ವ ವಿಜ್ಞಾನ ಕಾಲೇಜು, ಇವಿಷ್ಟು ಹೊಸದಾಗಿ ಆರಂಭಗೊಂಡ ಶಿಕ್ಷಣ ಸಂಸ್ಥೆಗಳಾಗಿವೆ. ಮೈಸೂರಿನ ಕುವೆಂಪು ನಗರದಲ್ಲಿ ವಿಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ಸಮೀರ ಡಿ.ಇಡಿ. ಕಾಲೇಜು ಕಾರ್ಯನಿರ್ವಹಿಸುತ್ತವೆ. ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮ ಆವರಣದಲ್ಲಿಯ ಶಾಲಾ ಕಾಲೇಜುಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 2,500 ಕ್ಕಿಂತ ಹೆಚ್ಚಾಗಿದೆ. ಇದರಲ್ಲಿ 1,300 ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಸ್ಟೆಲ್ ಗಳಲ್ಲಿ ನೆಲೆಸಿದ್ದಾರೆ.
ಇವೆಲ್ಲವುಗಳಿಗಿಂತ ಮುಖ್ಯವಾದ ಸಂಗತಿ ಎಂದರೆ ಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಶ್ರೀ ಸೂರುದಾಸ್ ಸ್ವಾಮೀಜಿಯವರ ಸಮಾಧಿಮಂದಿರ-ಧ್ಯಾನಮಂದಿರ ಸಂಕೀರ್ಣದ ನಿರ್ಮಾಣ ಪೂಜ್ಯರಿಬ್ಬರಿಗೆ ಇದು ಸುಂದರ ಸ್ಮಾರಕವಾಗಲಿದೆ. ಈ ಕಟ್ಟಡದ ಅಂದಾಜು ವೆಚ್ಚ ರೂ. 1,30,00,000- (ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ) ಕಟ್ಟಡದ ಕೆಲಸ 80% ಭಾಗದಷ್ಟು ಪೂರ್ಣಗೊಂಡಿದೆ. ಕಟ್ಟಡದ ಸದ್ಯದ ಫೋಟೋ ತಮಗೆ ಕಳಿಸುತ್ತಿದ್ದೇವೆ.
ಪೂಜ್ಯದ್ವಯರ ಅಮೃತ ಶಿಲೆಯ ಮೂರ್ತಿಗಳನ್ನು ಜೈಪುರದಲ್ಲಿ ಮಾಡಿಸಿ ತರಿಸಿದ್ದೇವೆ. ಒಂದೊಂದು ಮೂರ್ತಿಗೆ ರೂ. 2,50,000- ಹಣ ನೀಡಿದ್ದೇವೆ. ಮೂರ್ತಿಗಳು ಅತ್ಯಂತ ಜೀವಂತವಾಗಿ ಬಂದಿವೆ. ಆ ಮೂರ್ತಿಗಳ ಫೋಟೋಗಳನ್ನು ತಮ್ಮ ಅವಗಾಹನೆಗಾಗಿ ಕಳಿಸುತ್ತಿದ್ದೇವೆ. ಕಟ್ಟಡದ ಕಾಮಗಾರಿ ಸಂಪೂರ್ಣವಾಗಿ ದಾನಿಗಳಿಂದ ಪಡೆದ ಸಹಾಯದಿಂದ ಏರ್ಪಟ್ಟಿರುವುದು ಅತ್ಯಂತ ಹೃದ್ಯವಾದ ಸಂಗತಿಯಾಗಿದೆ. ಕಟ್ಟಡ ಪೂರ್ಣಗೊಳ್ಳಲು ಇನ್ನೂ ಸುಮಾರು 25-30 ಲಕ್ಷದಷ್ಟು ಹಣ ಬೇಕಾಗುತ್ತದೆ. ದಾನಿಗಳ ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ.
ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಬಗ್ಗೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿರುವ ತಮ್ಮಲ್ಲಿಯೂ ಸಹ ಭಿಕ್ಷೆಯನ್ನು ಯಾಚಿಸುತ್ತಿದ್ದೇವೆ.
ನಮಸ್ಕಾರಗಳೊಂದಿಗೆ,
ತಮ್ಮ ಕೃಪಾಶೀರ್ವಾದವನ್ನು ಬೇಡುವ
( ರಾಘವೇಂದ್ರ ಪಾಟೀಲ)
ಆಡಳಿತಾಧಿಕಾರಿಗಳು
ಅಧ್ಯಕ್ಷರು, ಅನಾಥಸೇವಾಶ್ರಮ ಟ್ರಸ್ಟ್ , ಮಲ್ಲಾಡಿಹಳ್ಳಿ ಈ ಹೆಸರಿಗೆ ಡಿ.ಡಿ. ಅಥವಾ ಚೆಕ್ ಮೂಲಕ ಹಣ ಕಳುಹಿಸಬಹುದು. ಅಲ್ಲದೆ ಸಿಂಡಿಕೇಟ್ ಬ್ಯಾಂಕ್, ಮಲ್ಲಾಡಿಹಳ್ಳಿ IFSC:SYNB0001002. SB A/c No : 100222027394 ಗೆ ನೇರವಾಗಿ NEFT ಮೂಲಕ ಕಳುಹಿಸಬಹುದಾಗಿದೆ. |