News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಬದುಕನ್ನು ಅರ್ಥೈಸಿಕೊಂಡು ಅನುಭವಿಸಿ-ಪ್ರೊ.ಕೆ.ಎಸ್.ಗಂಗಾಧರ್

Saturday, October 28th, 2017

ಮಲ್ಲಾಡಿಹಳ್ಳಿ
ಬದುಕು ಸಂಕೀರ್ಣವಾಗಿದ್ದು ಅರ್ಥೈಸಿಕೊಂಡು ಅನುಭವಿಸಿದಾಗ ಮಾತ್ರ ಮನುಷ್ಯ ಪರಿಪೂರ್ಣನಾಗುತ್ತಾನೆ ಎಂದು ದಾವಣಗೆರೆ ಎಸ್.ಎಂ.ಕೃಷ್ಣ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಪ್ರೊ.ಗಂಗಾಧರ್ ತಿಳಿಸಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಬಿ.ಇಡಿ ಕಾಲೇಜಿನ 2017ನೇ ಸಾಲಿನ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಸಮಾಜಕ್ಕೆ ಪ್ರಜ್ಞಾವಂತ, ಉತ್ತಮ ಸಂಸ್ಕಾರ ಹೊಂದಿದ ಶಿಕ್ಷಕರು ಅಗತ್ಯವಿದ್ದು ಇಂತಹ ಶಿಕ್ಷಕರನ್ನು ತಯಾರು ಮಾಡಲು ಶಿಕ್ಷಕರ ತರಬೇತಿ ಸಂಸ್ಥೆಗಳು ನಿರಂತರವಾಗಿ ಶ್ರಮಿಸುತ್ತಿವೆ ಶಿಕ್ಷಣಾರ್ಥಿಗಳು ಏನೇ ಕಲಿತರು ಗುರುಮುಖೇನ ಕಲಿತು ಅವುಗಳನ್ನು ಆಚರಣೆಯಲ್ಲಿ ತಂದಾಗ ಮಾತ್ರ ಪರಿಪೂರ್ಣರಾಗುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ಆಧುನಿಕ ಕಲಿಕೋಪಕರಣಗಳು ಹೆಚ್ಚು ಪ್ರಯೋಜನಕಾರಿಯಾಗಿದ್ದರೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುವುದರಿಂದ ಜಾಗ್ರತೆಯಾಗಿ ಬಳಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಮಾತನಾಡಿ ಕಲಿಕೆ ಮನುಷ್ಯನ ಸ್ವಭಾವಿಕ ಲಕ್ಷಣವಾಗಿದ್ದು ಬೇರೆಯವರನ್ನು ಅನುಕರಣೆ ಮಾಡುವುದರಿಂದಲೂ ಕಲಿಯುತ್ತೇವೆ. ಆದರೆ ನಮ್ಮ ಸಾಮಥ್ರ್ಯದ ಮೇಲೆ ನಮ್ಮ ಮೇಲೆ ನಂಬಿಕೆ ಮತ್ತು ತಿಳುವಳಿಕೆ ಇರಬೇಕು ಶಿಕ್ಷಕರ ವೃತ್ತಿಯನ್ನು ಒಪ್ಪಿಕೊಂಡ ನೀವು ಪ್ರಾಮಾಣಿಕವಾಗಿ ಅದರ ಕಡೆ ಗಮನವಹಿಸಬೇಕು ಸಮಾಜದಲ್ಲಿ ಪವಿತ್ರ ವೃತ್ತಿ ಶಿಕ್ಷಣವಾಗಿದ್ದು ಅದನ್ನು ನೀವು ಪರಿಪೂರ್ಣರಾಗಿ ನಿಭಾಯಿಸಬೇಕೆಂದು ಸಲಹೆ ನೀಡಿದರು.
ಶಿಬಿರದ ಧ್ವಜಾರೋಹಣ ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಿ.ಶಂಕರಪ್ಪ ನೆರವೇರಿಸಿ ಮಾತನಾಡುತ್ತಾ ಶ್ರದ್ಧೆ, ಭಕ್ತಿಯಿಂದ ಹಾಗೂ ವಿನಯದಿಂದ ಶಿಬಿರದಲ್ಲಿ ಪಾಲ್ಗೊಂಡಾಗ ಮಾತ್ರ ಶಿಬಿರದ ಯಶಸ್ಸು ನಿಂತಿದೆ ಎಲ್ಲ ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು. ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಾಡಿಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಮ್ಮ ಶಿವಾನಂದ್, ಸಂಯೋಜನಾಧಿಕಾರಿ ಎನ್.ಧನಂಜಯ, ಶಿಬಿರಾಧಿಕಾರಿ ಎಸ್.ಆರ್.ಸಂತೋಷ್ ಕುಮಾರ್, ಹಿರಿಯ ಉಪನ್ಯಾಸಕರಾದ ಎನ್.ಎಸ್.ರುದ್ರೇಶ್, ಎಸ್.ಎನ್.ಶಂಕರ್, ಮಂಜುನಾಥ, ಗ್ರಂಥಪಾಲಕ ಪಿ.ವಿ.ಬಸವರಾಜ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಿ.ಶಂಕರಪ್ಪ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ನಾಗರಾಜ್, ಶಿಬಿರಾಧಿಕಾರಿ ಸಂತೋಷ್ ಕುಮಾರ್, ಉಪನ್ಯಾಸಕ ಮಂಜುನಾಥ್ ಉಪಸ್ಥಿತರಿದ್ದರು.

ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಪೌರತ್ವ ತರಬೇತಿ ಶಿಬಿರವನ್ನು ದಾವಣಗೆರೆಯ ಪ್ರೊ.ಕೆ.ಎಸ್.ಗಂಗಾಧರ್ ಉದ್ಘಾಟಿಸುತ್ತಿರುವುದು. ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ, ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್, ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ ಶಿವಾನಂದ್ ಉಪನ್ಯಾಸಕರಾದ ಎನ್.ಧನಂಜಯ, ಎ.ಎಸ್. ರುದ್ರೇಶ್ ಉಪಸ್ಥಿತರಿದ್ದರು.