News and Events

ಶಿಕ್ಷಕನು ವೃತ್ತಿಗೆ ನ್ಯಾಯ ಒದಗಿಸಿದಾಗ ಮಾತ್ರ ದೇಶದ ಅಭಿವೃದ್ಧಿ- ಎಸ್.ಕೆ.ಬಿ.ಪ್ರಸಾದ್
ಶಿಕ್ಷಕನು ವೃತ್ತಿಗೆ ನ್ಯಾಯ ಒದಗಿಸಿದಾಗ ಮಾತ್ರ ದೇಶದ ಅಭಿವೃದ್ಧಿ- ಎಸ್.ಕೆ.ಬಿ.ಪ್ರಸಾದ್

ಮಲ್ಲಾಡಿಹಳ್ಳಿ: ಶಿಕ್ಷಕನು ಉತ್ತಮ ಬೋಧನೆ ಮಾಡುತ್ತಾ ವೃತ್ತಿಗೆ ನ್ಯಾಯ

ಆಯುರ್ವೇದ ಮಹತ್ವ ಅರಿಯಿರಿ-ಡಾ|| ಎಸ್.ನಾಗರಾಜ
ಆಯುರ್ವೇದ ಮಹತ್ವ ಅರಿಯಿರಿ-ಡಾ|| ಎಸ್.ನಾಗರಾಜ

ಮಲ್ಲಾಡಿಹಳ್ಳಿ: ಇತ್ತೀಚಿನ ದಿನಗಳಲ್ಲಿ ಜನರು ಖಾಯಿಲೆಗಳಿಂದ ಹೆಚ್ಚಾಗಿ ಬಳಲುತ್ತಿದ್ದು

ಮಲ್ಲಾಡಿಹಳ್ಳಿ ಆಶ್ರಮದ ದುಮ್ಮಿ ಅರುಣೋದಯ ಪ್ರೌಢಶಾಲೆಗೆ ಶೇ.96

ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಆಶ್ರಯದಲ್ಲಿ ನಡೆಯುತ್ತಿರುವ ದುಮ್ಮಿಯ

Follow Us

ಗಾಂಧೀಜಿಯವರ ಆದರ್ಶ ಇಂದಿಗೂ ಪ್ರಸ್ತುತ

Tuesday, October 2nd, 2012

ಗಾಂಧೀಜಿಯವರ ಆದರ್ಶ ಇಂದಿಗೂ ಪ್ರಸ್ತುತವಾಗಿದ್ದು ಅವರ ಕೃತಿಗಳನ್ನು ನಿರಂತರವಾಗಿ ಓದುವುದರಿಂದ ಸಮಾಜಿಕವಾಗಿ, ಶೈಕ್ಷಣಿಕವಾಗಿ ಬದಲಾಗಬಹುದು ಎಂದು ಭಾರತೀಯ ಜೀವ ವಿಮಾ ನಿಗಮದ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಜೆ.ಎಂ.ಯೋಗಾನಂದ ಮೂರ್ತಿ ನುಡಿದರು.
ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಏರ್ಪಡಿಸಿದ್ದ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಮಲ್ಲಾಡಿಹಳ್ಳಿ ಸ್ವಾಮೀಜಿಯವರು ಗಾಂಧೀಜಿಯವರಿಂದ ಪ್ರೇರಿತವಾಗಿದ್ದು ಇಂತಹ ಆಶ್ರಮವನ್ನು ಕಟ್ಟಲಿಕ್ಕೆ ಸಾಧ್ಯವಾಗಿದೆ. ಗಾಂಧೀಜಿಯವರ ಮತ್ತು ರಾಘವೇಂದ್ರ ಸ್ವಾಮೀಜಿಯವರ ಸರಳತೆಯ ಕೆಲವು ಅಂಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎನ್.ಧನಂಜಯ ಗಾಂಧೀಜಿಯವರನ್ನು ಕುರಿತಂತೆ ಕೆ.ತಂಗರಾಜು ಲಾಲ್ ಬಹದ್ಧೂರ್ ಶಾಸ್ತ್ರಿ ಅವರ ಜೀವನಾದರ್ಶಗಳನ್ನು ಕುರಿತಂತೆ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ರಾಘವೇಂದ್ರ ಪಾಟೀಲ ಮಾತನಾಡಿ ಗಾಂಧೀಜಿಯವರು ಮಹಾನ್ ವ್ಯಕ್ತಿಯಾಗಿದ್ದು ಅವರ ಜೀವನವನ್ನು ಅಧ್ಯಯನ ಮಾಡುವುದು ಸುಲಭ ಸಾಧ್ಯವಲ್ಲ ಅದು ನಿರಂತರವಾಗಿದ್ದರೆ ಮಾತ್ರ ಕೆಲವು ಅಂಶಗಳನ್ನು ತಿಳಿದುಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ ಎಂದರು. ಕವಿ ಚಂದ್ರಶೇಖರ ತಾಳ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಬಹುಮಾನಗಳನ್ನು ನೀಡಲಾಯಿತು.

Felicitation to Sri J.M. Yogananda Murthy