News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಮಲ್ಲಾಡಿಹಳ್ಳಿಯ ಆಯುರ್ವೇದ ಕಾಲೇಜಿನಿಂದ ಅಂತರಾಷ್ಟ್ರೀಯ ವೆಬಿನಾರ್ ಕಾರ್ಯಾಗಾರ

Thursday, September 2nd, 2021

ಮಲ್ಲಾಡಿಹಳ್ಳಿ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಆಯುರ್ವೇದ ಕಾಲೇಜಿನಿಂದ ಅಂತರಾಷ್ಟ್ರೀಯ ವೆಬಿನಾರ್ ಕಾರ್ಯಾಗಾರದ ಮೂಲಕ “ವೈರಲ್ ಡಿಸೀಜಸ್ ಮತ್ತು ಆಯುರ್ವೇದದ ಮೇಲ್ವಿಚಾರಣೆ” ಕುರಿತಂತೆ 3 ದಿನಗಳ ಅಂತರಾಷ್ಟ್ರೀಯ ಆನ್‍ಲೈನ್ ಕಾರ್ಯಾಗಾರವನ್ನು ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿ ಮಾತನಾಡುತ್ತಾ ನಾಲ್ಕು ವೇದಗಳನ್ನು ಕುರಿತು ಭಾರತೀಯರು ಶತಮಾನಗಳಿಂದ ಅನುಸರಿಸುತ್ತಾ, ಆಚರಿಸುತ್ತಾ ಬಂದಿದ್ದಾರೆ ಅದರಂತೆ ಆಯುರ್ವೇದದ ಕುರಿತು ಸಂಶೋಧನೆ ನಡೆಸಿ ಎಲ್ಲ ಚಿಕಿತ್ಸೆಗಳಿಗೆ ಆಯುರ್ವೇದವೇ ಪರಿಹಾರವಾಗಿದೆ ಎಂದರು. ಪ್ರಸ್ತುತ ಬಂದಿರುವ ಕರೋನಾದಂತಹ ಕಾಯಿಲೆಗೂ ಆಯುರ್ವೇದ ಚಿಕಿತ್ಸೆ ಹೇಗೆ ಸಹಕಾರಿಯಾಗುತ್ತದೆ ಎಂದು ಆಯುರ್ವೇದ ತಜ್ಞರು ನಿರೂಪಿಸಿ ತೋರಿಸಿದ್ದಾರೆ ಎಂದರು.

ಉಡುಪಿಯ ಧರ್ಮಸ್ಥಳ ಆಯುರ್ವೇದ ಕಾಲೇಜಿನ ನಿವೃತ್ತ ಅಧೀಕ್ಷಕರಾದ ಡಾ.ಮುರುಳೀಧರ ಶರ್ಮ ವೈರಲ್ ಡಿಸೀಜಸ್‍ಗಳ ವಿಧಗಳು ಮತ್ತು ಅವುಗಳು ದೇಹದಿಂದ ದೇಹಕ್ಕೆ ಹರಡುವ ಪ್ರಕ್ರಿಯೆ ಬಗ್ಗೆ ತಿಳಿಸಿ ಅದಕ್ಕೆ ಆಯುರ್ವೇದದಲ್ಲಿ ಇರುವ ಪರಿಹಾರಗಳೇನು ಎಂಬ ವಿಷಯವನ್ನು ಕುರಿತು ಮಾತನಾಡಿದರು. ಉತ್ತರ ಪ್ರದೇಶದ ವಾರಣಾಸಿ ಆಯುರ್ವೇದ ಕಾಲೇಜಿನ ರೋಗನಿಧಾನ ವಿಭಾಗದ ಮುಖ್ಯಸ್ಥರಾದ ಡಾ.ಪಿ.ಎಸ್.ಬ್ಯಾಡಗಿ ರೋಗನಿರೋಧಕ ಶಕ್ತಿಯ ಹೆಚ್ಚಳವನ್ನು ಹೇಗೆ ಮಾಡಿಕೊಳ್ಳಬೇಕು, ಯಾವ ಆಹಾರಗಳನ್ನು ತೆಗೆದುಕೊಂಡರೆ ಮತ್ತು ಉತ್ತಮ ಪರಿಸರವನ್ನುಂಟು ಮಾಡಿಕೊಂಡರೆ ಹೇಗೆ ರೋಗ ಬರದಂತೆ ತಡೆಗಟ್ಟಬಹುದು ಎಂಬ ವಿಷಯದ ಕುರಿತು ಮಾತನಾಡಿದರು.

2500ಕ್ಕೂ ಹೆಚ್ಚಿನ ರಾಜ್ಯ ಮತ್ತು ದೇಶದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ಆನ್‍ಲೈನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮೊದಲ ದಿನ ಡಾ.ರಾಧಿಕಾ ನಿರೂಪಿಸಿ, ಪ್ರಾಚಾರ್ಯರಾದ ಡಾ.ಎಸ್.ನಾಗರಾಜ್ ಸ್ವಾಗತಿಸಿ, ಡಾ.ರಾಮಚಂದ್ರ ವಂದಿಸಿದರು. ಅನಾಥಸೇವಾಶ್ರಮದÀ ಮೇಲ್ವಿಚಾರಕ ಎಚ್.ಎಸ್.ಸಿದ್ರಾಮಸ್ವಾಮಿ, ಅಧೀಕ್ಷಕ ಪವನ್ ಕುಮಾರ್ ಕಾಂಬಾಳಿಮಠ್, ಉಪಪ್ರಾಚಾರ್ಯ ಡಾ.ಕೆ.ವಿ.ರಾಜಶೇಖರ್, ವೈದ್ಯ ಉಪನ್ಯಾಸಕರುಗಳಾದ ಡಾ.ನಿರಂಜನ ಪ್ರಭು, ಡಾ.ಉಷಾ ದೇವಕಿ, ಡಾ.ಜೋಸೆಫ್ ಹಾಗೂ ಕಾಲೇಜಿನ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.