News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಜನವರಿ 12 ರಿಂದ ಮಲ್ಲಾಡಿಹಳ್ಳಿಯಲ್ಲಿ ತಿರುಕರಂಗೋತ್ಸವ

Wednesday, December 30th, 2015
Raghavendra Swamiji

Raghavendra Swamiji

ಮಲ್ಲಾಡಿಹಳ್ಳಿ

ರಾಜ್ಯದ ಪ್ರಸಿದ್ಧ ಅನಾಥಸೇವಾಶ್ರಮದಲ್ಲಿ ಬರುವ ಜನವರಿ 12 ರಿಂದ 14ರವರೆಗೆ ಸ್ವಾಮ್ಭಿಜಿದ್ವಯರ ಪ್ಮಣ್ಯಾರಾಧನೆ ಅಂಗವಾಗಿ 3 ದಿನಗಳ ನಾಟಕೋತ್ಸವ ನಡೆಯಲಿದೆ ಎಂದು ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ದಿನಾಂಕ : 12-01-2016ರಂದು ಕಲ್ಲಪ್ಪ ಪ್ರಜಾರ್ ನಿದೇಶನದ ವೈದೇಹಿ ಕನ್ನಡಕ್ಕೆ ಅನುವಾದಿಸಿದ ‘ಕಣ್ಕಟ್ ನಗರ ತಲೆಕೆಟ್ ರಾಜ’ ಎಂತೆನ್ನುವ ನಾಟಕ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿದೆ. ದಿನಾಂಕ : 13-01-2016ರಂದು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ರಚಿಸಿದ ಅಪ್ಪಣ್ಣ ರಾಮದುರ್ಗ ನಿರ್ದೇಶನದ ‘ಜನರೆಡೆಗೆ ಜಂಗಮ’ ಉಮೇಶ್ ಪತ್ತಾರ್ ಸಂಗೀತ ನೀಡಿರುವ ಚಿತ್ರದುರ್ಗದ ಜಮುರಾ ತಂಡದ ಕಲಾವಿದರಿಂದ ಅಭಿನಯಿಸಲ್ಪಡುವ ನಾಟಕ ಪದರ್ಶನಗೊಳ್ಳಲಿದೆ.

ದಿನಾಂಕ : 14-01-2016ರಂದು ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ರಚಿಸಿರುವ ‘ವೀರ ತಾವರೆ’ ನಾಟಕವನ್ನು ಶ್ರೀಮತಿ ಶೀಲಾ ಹಾಲ್ಕುರಿಕೆ ನಿರ್ದೇಶಿಸಲಿದ್ದು ಜಮುರಾ ಕಲಾತಂಡದವರಿಂದ ಪ್ರದರ್ಶಿಸಲ್ಪಡುತ್ತದೆ ಎಂದು ಅನಾಥಸೇವಾಶ್ರಮದ ಪ್ರಕಟಣೆ ತಿಳಿಸಿದೆ. ಪ್ರತಿನಿತ್ಯ ಮಧ್ಯಾಹ್ನ 3.00ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾಡಿನ ಸಾಹಿತಿಗಳು, ರಾಜಕೀಯ ಧುರೀಣರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಗಣ್ಯರು ಮತ್ತು ಅನಾಥಸೇವಾಶ್ರಮದ ಭಕ್ತವೃಂದ ಭಾಗವಹಿಸಲಿದ್ದಾರೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದಲ್ಲದೆ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ದಿನಾಂಕ : 10-1-2016ರಿಂದ 14-1-2016ರವರೆಗೆ ಯೋಗಶಿಬಿರ ನಡೆಯಲಿದ್ದು, ಉದ್ಘಾಟನಾ ದಿನದಂದು ಜಾನಪದ ಕಲಾ ತಂಡಗಳೊಂದಿಗೆ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರುದಾಸ್ ಜೀ ಸ್ವಾಮೀಜಿಯವರ ಭಾವಚಿತ್ರಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು ಅನಾಥಸೇವಾಶ್ರಮದ ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮದಲ್ಲಿ ಟ್ರಸ್ಟಿ ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿಗಳು, ವಿಶೇಷಾಧಿಕಾರಿಗಳು ಹಾಗೂ ಅನಾಥಸೇವಾಶ್ರಮದ ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

MALLADIHALLI VINAYAL

MALLADIHALLI VINAYAL