ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಮಲ್ಲಾಡಿಹಳ್ಳಿ ಬಿ.ಇಡಿ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮಂಗಳವಾರ, ನವೆಂಬರ 9th, 2021

ಮಲ್ಲಾಡಿಹಳ್ಳಿ: ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದ ಬಿ.ಇಡಿ ಕಾಲೇಜುಗಳ ತೃತೀಯ ಸೆಮಿಸ್ಟರ್ ಮತ್ತು ಪ್ರಥಮ ಸೆಮಿಸ್ಟರ್‍ನ ಫಲಿತಾಂಶ ಬಿಡುಗಡೆಯಾಗಿದ್ದು ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ, ಬಿ.ಇಡಿ ಕಾಲೇಜಿನ ಪ್ರಥಮ ಸೆಮಿಸ್ಟರ್‍ನ ವಿದ್ಯಾ ಎಸ್.ಸಿ 511 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿರುವರು. ಆಯೇಷಾ ಖಾನಂ ಮತ್ತು ಗಾನವಿ ಎಸ್.ಎಂ. ಹಾಗೂ ಪೂಜಾ ಟಿ.ಎಂ. 510 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದು, ಮನೋಹರ್ ಬಿ.ಎಂ.507 ಅಂಕಗಳಿಸಿ ತೃತೀಯ ಸ್ಥಾನ ಪಡೆದಿರುವರು. ಹಾಗೆಯೇ ತೃತೀಯ ಸೆಮಿಸ್ಟರ್‍ನ ಆಯೇಷಾ ಖಾನಂ 524 ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿರುವರು. ಶಬಾನಾ ಬಾನು 513 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದಿರುವರು. ಆಯೇಷಾ ಸಿದ್ಧಿಖಾ 509 ಅಂಕಗಳಿಸಿ ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಮತ್ತು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಎಂದು ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಹೇಳಿದರು.

ಯೋಗ, ಆಯುರ್ವೇದ ಮತ್ತು ಶಿಕ್ಷಣಕ್ಕೆ ಹೆಸರಾದ ಮಲ್ಲಾಡಿಹಳ್ಳಿ ಆಶ್ರಮದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಲ್ಲಿ ಪೂರಕವಾತಾವರಣ, ನುರಿತ ಬೋಧಕ ವರ್ಗ, ಉತ್ತಮ ಪೀಠೋಪಕರಣ, ಪಾಠೋಪಕರಣಗಳನ್ನು ಸುವ್ಯವಸ್ಥಿತವಾಗಿ ಹೊಂದಿರುವ ಹಿನ್ನೆಲೆಯಿಂದ ಇಂತಹ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದರು. ಪರೀಕ್ಷೆಗೆ ಹಾಜರಾದ 88 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿ ಶೇ.100ರಷ್ಟು ಫಲಿತಾಂಶ ಪಡೆದಿರುತ್ತಾರೆ. ಪ್ರಸಕ್ತ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿರುತ್ತದೆ. ಸಂಸ್ಥೆಯ ಅಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು, ವ್ಯವಸ್ಥಾಪಕರಾದ ಎಚ್.ಎಸ್.ಸಿದ್ರಾಮಸ್ವಾಮಿ ಹಾಗೂ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಅಭಿನಂದಿಸಿದ್ದಾರೆ.

ವಿದ್ಯಾ ಎಸ್.ಸಿ

ಆಯೇಷಾ ಖಾನಂ