ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ
ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ ಪ್ರತಿವರ್ಷದಂತೆ ಈ ವರ್ಷವೂ ಶೇ.100 ಫಲಿತಾಂಶ ಪಡೆದು ಉತ್ತಮ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿಯನ್ನು ಉಳಿಸಿಕೊಂಡಿದೆ ಎಂದು ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಹೇಳಿದರು.
3ನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದು 516 ಅಂಕದೊಂದಿಗೆ ಶೇ.86 ಗಳಿಸಿದ ಫಿರ್ದೋಸರಾ ಖಾನಂ ಪ್ರಥಮ ಸ್ಥಾನ ಪಡೆದರು. 508 ಅಂಕ ಗಳಿಸಿದ ತೋಹಿದಾ ಖಾನಂ ದ್ವಿತೀಯ ಸ್ಥಾನ, 504 ಅಂಕಗಳಿಸಿದ ಕವಿತಾ.ಆರ್. ತೃತೀಯ ಸ್ಥಾನ ಪಡೆದರು. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಬೋಧಕ ಬೋಧಕೇತರ ವರ್ಗದವರನ್ನು ಅನಾಥಸೇವಾಶ್ರಮದ ಅಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಹಾಗೂ ವಿಶ್ವಸ್ಥರು ಮತ್ತು ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಅಭಿನಂದಿಸಿದರು. ಅನಾಥಸೇವಾಶ್ರಮದ ಶಿಸ್ತು, ವಿದ್ಯಾರ್ಥಿಗಳಿಗೆ ಕೊಡುವ ಶೈಕ್ಷಣಿಕ ವ್ಯವಸ್ಥೆಗಳು ಮತ್ತು ಎಲ್ಲ ಸೌಲಭ್ಯಗಳು ಉತ್ತಮ ಫಲಿತಾಂಶಕ್ಕೆ ದಾರಿಯಾಗಿವೆ ಎಂದು ತಿಳಿಸಿದರು.