ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಸ್ವ-ಉದ್ಯೋಗಕ್ಕೆ ತರಬೇತಿ ಅವಶ್ಯ-ರುಡ್‍ಸೆಟ್ ನಿರ್ದೇಶಕ ನಾಗರಾಜ್

ಮಂಗಳವಾರ, ನವೆಂಬರ 21st, 2017

ಮಲ್ಲಾಡಿಹಳ್ಳಿ
ಸ್ವ-ಉದ್ಯೋಗ ಮಾಡುವವರಿಗೆ ತರಬೇತಿ ಅವಶ್ಯವಿದ್ದು ಅದನ್ನು ತಾಂತ್ರಿಕ ತರಬೇತಿಯನ್ನು ಹೊಂದಿದ ನುರಿತರಿಂದ ತರಬೇತಿ ಪಡೆದುಕೊಳ್ಳುವುದು ಅವಶ್ಯವಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ತರಬೇತಿ ಕೇಂದ್ರದ ನಿರ್ದೇಶಕ ಕೆ.ನಾಗರಾಜ್ ಹೇಳಿದರು. ಅವರು ಮಲ್ಲಾಡಿಹಳ್ಳಿ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಪ್ರಗತಿಬಂಧು ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಏರ್ಪಡಿಸಲಾಗಿದ್ದ ಸ್ವ-ಉದ್ಯೋಗ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ ಇಂದು ಎಲ್ಲ ರಂಗಗಳಲ್ಲೂ ತರಬೇತಿ ಅವಶ್ಯಕತೆ ಇದ್ದು ರುಡ್‍ಸೆಟ್‍ನಂತಹ ಸಂಸ್ಥೆಯಲ್ಲಿ ತರಬೇತಿ ಪಡೆಯುವುದರಿಂದ ಆರ್ಥಿಕವಾಗಿ ಸಬಲತೆಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.
ಚಿತ್ರದುರ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಎಚ್.ಪಿ.ಸುದರ್ಶನ ಕುಮಾರ್ ಮಾತನಾಡಿ ಕೈಗಾರಿಕಾ ಇಲಾಖೆಯಲ್ಲಿರುವ ಸ್ವ-ಉದ್ಯೋಗಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕುರಿತಂತೆ ತಿಳಿಸುತ್ತಾ ಇಂದಿನ ಯುವಜನತೆ ಸ್ವ-ಉದ್ಯೋಗಗಳಲ್ಲಿ ತೊಡಗಿಕೊಂಡರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು. ಅನಾಥಸೇವಾಶ್ರಮದ ಯೋಗ ತರಬೇತುದಾರ ಸಂತೋಷ್ ಕುಮಾರ್ ಮಾತನಾಡಿ ಸ್ವ-ಉದ್ಯೋಗ ಮಾಡುವವರು ಕೀಳಿರಿಮೆಯನ್ನು ಬಿಟ್ಟು ಉದ್ಯೋಗದಲ್ಲಿ ನಂಬಿಕೆ ಹೊಂದಬೇಕು ಇದರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಹೊಸ ವಿಚಾರಗಳ ಬಗೆಗೆ ಅನ್ವೇಷಣೆ ಮಾಡಿದಾಗ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಸಮಾಜದಲ್ಲಿ ಎಲ್ಲ ಅವಕಾಶಗಳಿದ್ದು ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಕುರಿತಂತೆ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಸ್. ಯಶವಂತ ಮಾತನಾಡುತ್ತಾ ಡಾ.ವೀರೇಂದ್ರ ಹೆಗ್ಗಡೆಯವರ ಕನಸು ಗ್ರಾಮೀಣ ಭಾಗದ ಜನರು ಒಂದಲ್ಲಾ ಒಂದು ಉದ್ಯೋಗದಲ್ಲಿ ತೊಡಗಿಕೊಂಡರೆ ಸಮಾಜದಲ್ಲಿ ಶಾಂತಿ ಲಭಿಸುತ್ತದೆ ಎನ್ನುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ ಎಂದರು. ಮಲ್ಲಾಡಿಹಳ್ಳಿ ಸಿಂಡಿಕೇಟ್ ಬ್ಯಾಂಕ್‍ನ ಸಹ ವ್ಯವಸ್ಥಾಪಕ ಕಶ್ಯಪ್ ಸ್-ಉದ್ಯೋಗಕ್ಕೆ ಬ್ಯಾಂಕ್‍ಗಳಲ್ಲಿ ಇರುವ ಯೋಜನೆಗಳ ಕುರಿತಂತೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಅನ್ನಪೂರ್ಣ, ಕೃಷಿ ಮೇಲ್ವಿಚಾರಕ ಮಹಾಂತೇಶ್, ಸೇವಾ ಪ್ರತಿನಿಧಿ ಸುಮಾ ಮತ್ತಿರರು ಉಪಸ್ಥಿತರಿದ್ದರು.