ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ
ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ ಎಂದು ಪ್ರಸಿದ್ಧ ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಹೇಳಿದರು. ಅವರು ಮಲ್ಲಾಡಿಹಳ್ಳಿಯಲ್ಲಿ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ 22ನೇ ಹಾಗೂ ಸೂರುದಾಸ್‍ಜೀ ಸ್ವಾಮೀಜಿಯವರ 20ನೇ ಪುಣ್ಯಾರಾಧನೆ ಅಂಗವಾಗಿ ಏರ್ಪಡಿಸಿದ್ದ ತಿರುಕರಂಗ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ ಮಲ್ಲಾಡಿಹಳ್ಳಿಯು ಒಂದು ಕಾಲದಲ್ಲಿ ಯೋಗಭೂಮಿಯಾಗಿ, ಕರ್ಮಭೂಮಿಯಾಗಿ, ಜ್ಞಾನಭೂಮಿಯಾಗಿ ಇಂದು ರಂಗಭೂಮಿಯಾಗಿ ಸಮಾಜದಲ್ಲಿ ಹೊಸತನವನ್ನು ಮೈಗೂಡಿಸಿಕೊಂಡಿದ್ದು ಇಂದಿನ ವಿಶ್ವಸ್ತ ಸಮಿತಿಯ ಅಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಮುಂದುವರೆಯುತ್ತಿರುವುದು ಸಂತಸದಾಯಕವಾದ ಸಂಗತಿಯಾಗಿದೆ ಧರ್ಮದ ಜೊತೆಗೆ ಸಂಸ್ಕøತಿ ಬೆರೆತಾಗ ಇವೆಲ್ಲವುಗಳು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಧಾನಪರಿಷತ್ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿ ವೃತ್ತಿಯಲ್ಲಿ ಧನ್ಯತೆಯ ಭಾವವನ್ನು ಅನುಭವಿಸಿದಾಗ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ದಿವ್ಯಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಡಾ.ಶಿವಮೂರ್ತಿ ಮುರುಘಾ ಶರಣರು ಸಮಾಜದಲ್ಲಿ ಆನಂದ ಮತ್ತು ಅನಂತತೆಯನ್ನು ಹೊಂದುವ ಜಾಗವೇ ಈ ರಂಗಭೂಮಿ ಇಲ್ಲಿ ಶಾಶ್ವತವಾಗಿ ನಿಲ್ಲುವ ವ್ಯಕ್ತಿ ಶ್ರೇಷ್ಠನಾಗುತ್ತಾನೆ. ರಂಗದಲ್ಲಿ ಸ್ಪೂರ್ತಿಯನ್ನು ಹೊಂದಿದ ವ್ಯಕ್ತಿ ಉತ್ತಮ ನಾಗರೀಕನಾಗುತ್ತಾನೆ ಎಂದರು. ಮನುಷ್ಯನ ಚಟುವಟಿಕೆಗಳು ಭೂಮಿಯ ಮೇಲೆ ಅಭಿವ್ಯಕ್ತಗೊಳಿಸಲು ರಂಗಭೂಮಿ ಉತ್ತಮ ವೇದಿಕೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವಸ್ತ ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿ ಈ ನೆಲದ ಸಂಸ್ಕೃತಿಯನ್ನು ನಾವು ವಚನಗಳಲ್ಲಿ ಕಾಣಬಹುದಾಗಿದೆ. ರಂಗಭೂಮಿಯಲ್ಲಿ ನೈಜತೆಯ ಅನಾವರಣವಾಗುತ್ತದೆ ಎಂದು ತಿಳಿಸಿದರು. ಸಮಾರಂಭದಲ್ಲಿ ವಿಶ್ವಸ್ತರಾದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಕೆ.ವಿ.ಪ್ರಭಾಕರ್, ವಿಶೇಷಾಧಿಕಾರಿ ಪ್ರೊ.ಕೃಷ್ಣಮೂರ್ತಿ ಹಾಗೂ ಶಾಲಾ ಕಾಲೇಜುಗಳ ಮುಖ್ಯಸ್ಥರು ಮತ್ತು ಅಧ್ಯಾಪಕರುಗಳು ಉಪಸ್ಥಿತರಿದ್ದರು. ಉಪನ್ಯಾಸಕ ತಂಗರಾಜು ನಿರೂಪಿಸಿ, ಜಿ.ಟಿ.ಶಂಕರಮೂರ್ತಿ ವಂದಿಸಿದರು.