ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

knCheck

ಬಹುಮುಖ್ಯವಾಗಿ
ಸ್ವಾಮೀಜಿಯವರ ದಿವ್ಯಚೇತನಗಳಿಗೆ ನಮ್ಮ ಕೃತಜ್ಞತೆಯ ಕುರುಹಾಗಿ ‘’ಸಮಾಧಿ ಮಂದಿರ-ಧ್ಯಾನಮಂದಿರ-ಅತಿಥಿ ಗೃಹ ಸಮುಚ್ಛಯ” ಸ್ಮಾರಕವೊಂದನ್ನು ಕಟ್ಟುವ, ೧ ಕೋಟಿ ರೂಪಾಯಿಗಳಷ್ಟು ವೆಚ್ಚದ ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದು ಆಗಬೇಕಾಗಿರುವುದು ಅವರ ಅಭಿಮಾನಿಗಳು, ಶಿಷ್ಯರು, ಸಹೃದಯ ದಾನಿಗಳ, ಉದಾರ ಬುದ್ಧಿಯುಳ್ಳವರ ದಾನದಿಂದ. ಇದನ್ನೇ ನಂಬಿ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕನಸನ್ನು ಆದಷ್ಟು ಶೀಘ್ರದಲ್ಲಿ ನನಸಾಗಿಸುವ ಹಂಬಲವಿದೆ.
ಹಿಂದಿನಿಂದ ನಡೆದು ಬಂದಿರುವ ಪದ್ಧತಿಯಂತೆ ಆಶ್ರಮಕ್ಕೆ ದಾನಿಗಳು ಮತ್ತು ಅಭಿಮಾನಿಗಳು ನೀಡುವ ಹಣವನ್ನು ಒಂದಿನಿತೂ ವ್ಯರ್ಥ ಮಾಡದೆ ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ. ಪ್ರತಿ ಪೈಸೆಗೂ ನಿಖರವಾದ ವ್ಯವಸ್ಧೆಯಿದೆ. ಅದಕ್ಕಾಗಿ ಹಮ್ಮಿಕೊಂಡಿರುವ ಪ್ರಮುಖವಾದ ೩ ಯೋಜನೆಗಳೆಂದರೆ :
೧. ಮಾತೃಮಂದಿರ : ಸಮಾಜ ಮತ್ತು ಕುಟುಂಬದಿಂದ ಪರಿತ್ಯಕ್ತ್ಯರಾದ ಮತ್ತು ಶೋಷಿತ ಮಹಿಳೆಯರ ಪುನರ್ವಸತಿ ಯೋಜನೆ.
೨. ತಿರುಕರಂಗ ತರಬೇತಿ ಮತ್ತು ಸಂಶೋಧನಾ ಕೇಂದ್ರ : ಸ್ವಾಮೀಜಿಯವರು ರಂಗಚಟುವಟಿಕೆಗಳ ಬಗೆಗೆ ಅಪಾರ ಆಸಕ್ತಿಯನ್ನು ಹೊಂದಿದ್ದರು. ಅವರು ತಮ್ಮ ಪೂರ್ವಾಶ್ರಮದಲ್ಲಿ ಅಂಬಾಪ್ರಸಾದ ನಾಟಕ ಮಂಡಳಿಯಲ್ಲಿ ಪ್ರಮುಖ ಸೇವೆಯನ್ನು ಸಲ್ಲಿಸಿದವರು