ಯೋಗಾಸನಗಳಲ್ಲಿರುವ ವ್ಶೆಜ್ಞಾನಿಕ ಸತ್ಯಗಳನ್ನು ಅರಿತುಕೊಳ್ಳಿ-ಪ್ರೊ. ಜೆ. ರಘುನಾಥ್
ಶನಿವಾರ, ಜನವರಿ 16th, 2016ಯೋಗಾಸನಗಳಲ್ಲಿರುವ ವೈಜ್ಞಾನಿಕ ಸತ್ಯಗಳನ್ನು ಅರಿತುಕೊಂಡು ಯೋಗ ಮಾಡಿದಾಗ ಮಾತ್ರ ಸಂಪೂರ್ಣ ಪ್ರಯೋಜನಕಾರಿಯಾಗುತ್ತದೆ ಎಂದು ಶತಮಾನೋತ್ಸವ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ.ಜೆ.ರಘುನಾಥ್ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಸ್ವಾಮೀಜಿದ್ವಯರ ಪುಣ್ಯಾರಾಧನೆ ಯ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹದ ಯೋಗ ಶಿಬಿರದ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಾ ಯೋಗಾಸನಗಳಲ್ಲಿ ವೈಜ್ಞಾನಿಕವಾಗಿ ಸತ್ಯಾಂಶಗಳನ್ನು ಹೊಂದಿದ್ದು ಯಾವುದೇ ಧರ್ಮಕ್ಕಾಗಲೀ ಜಾತಿಗಾಗಲೀ ಅಥವಾ ದೇಶಕ್ಕಾಗಲೀ ಸೀಮಿತವಾಗದೇ ಅವುಗಳ ಅಭ್ಯಾಸದಿಂದ ದೇಹದ ಗ್ರಂಥಿಗಳು ರಸವಿಶೇಷಣಗಳನ್ನು ಉತ್ಪತ್ತಿ ಮಾಡಿ ಆರೋಗ್ಯಕರವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬುದನ್ನು […]