ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

Author Archive

ಉತ್ತಮ ಆಲೋಚನೆಯಿಂದ ವ್ಯಕ್ತಿತ್ವ ಶ್ರೇಷ್ಠ - ಡಾ.ಶಿವಮೂರ್ತಿ ಮುರುಘಾ ಶರಣರು

ಉತ್ತಮ ಆಲೋಚನೆಯಿಂದ ವ್ಯಕ್ತಿತ್ವ ಶ್ರೇಷ್ಠ – ಡಾ.ಶಿವಮೂರ್ತಿ ಮುರುಘಾ ಶರಣರು

ಬುಧವಾರ, ಜೂನ್ 21st, 2017

ಮಲ್ಲಾಡಿಹಳ್ಳಿ ಉತ್ತಮ ಆಲೋಚನೆಯಿಂದ ವ್ಯಕ್ತಿತ್ವ ಶ್ರೇಷ್ಠಗೊಳ್ಳುತ್ತದೆ ಎಂದು ಪೂಜ್ಯ ಶ್ರೀ.ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಹೊಳಲ್ಕೆರೆ ತಾಲ್ಲೂಕಿನ ಪ್ರಸಿದ್ಧ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ 3ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಯೋಗ ಪದ್ಧತಿಯನ್ನು ಆಚರಿಸುವ ಎಲ್ಲರಿಗೂ ಉತ್ತಮ ಆಲೋಚನೆಗಳು ಲಭ್ಯವಾಗುತ್ತವೆ ತನ್ಮೂಲಕ ವ್ಯಕ್ತಿತ್ವ ಶ್ರೇಷ್ಠಗೊಳ್ಳುತ್ತದೆ ಎಂದರು. ಯೋಗವು ಮನುಷ್ಯನ ಆಂತರಿಕ ವಿಕಾಸಕ್ಕೆ ದಾರಿಮಾಡಿಕೊಡುತ್ತದೆ ಒಳಮನಸ್ಸನ ನೋಡುವುದು ಯೋಗದಿಂದ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತೋರಿಸುವುದರ ಮೂಲಕ ಅರಿವನ್ನುಂಟು ಮಾಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತನೀಕಲ್ ಸುಧಾಕರ […]

ಅಭಿನಯದ ಮೂಲಕ ಬೋಧನೆ ಪರಿಣಾಮಕಾರಿ - ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ಅಭಿನಯದ ಮೂಲಕ ಬೋಧನೆ ಪರಿಣಾಮಕಾರಿ – ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ಮಂಗಳವಾರ, ಮೇ 16th, 2017

ಮಲ್ಲಾಡಿಹಳ್ಳಿ ಶಿಕ್ಷಕನು ಅಭಿನಯವನ್ನು ಕಲಿತುಕೊಂಡು ಅಭಿನಯಿಸುತ್ತಾ ಬೋಧಿಸಿದಾಗ ಪಠ್ಯ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾದ 2 ದಿನದ ಶಿಕ್ಷಣದಲ್ಲಿ ರಂಗಕಲೆ ನಾಟಕ ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಿಕ್ಷಣಾರ್ಥಿಗಳನ್ನು ಉದ್ಧೇಶಿಸಿ ಮಾತನಾಡುತ್ತಾ ಯಾವುದೇ ವಿಷಯವನ್ನು ಶಿಕ್ಷಕ ಬೋಧಿಸುವ ಸಮಯದಲ್ಲಿ ಬೋಧನೆಗೆ ನಾಟಕಾಭಿಯವನ್ನು ಸೇರಿಸಿಕೊಂಡು ಬೋಧಿಸಿದಾಗ ಹೆಚ್ಚು ಪರಿಣಾಮಕಾರಿಯಾಗುವುದಲ್ಲದೆ ಯಾವುದೇ ವಿಷಯವನ್ನು ವಿದ್ಯಾರ್ಥಿಗಳಲ್ಲಿ ಅಚ್ಚಳಿಯದೇ ಉಳಿಸಲು ಸಾಧ್ಯವಾಗುತ್ತದೆ ಎಂದರು. ಹಿರಿಯ ಉಪನ್ಯಾಸಕ […]

ಒಳ್ಳೆತನಗಳು ಹೆಚ್ಚು ಬಿಂಬಿತವಾದಷ್ಟು ಸಮಾಜದ ಪರಿವರ್ತನೆ ಸಾಧ್ಯ-ಡಾ.ಎಸ್.ಎಸ್.ಪಾಟೀಲ್

ಒಳ್ಳೆತನಗಳು ಹೆಚ್ಚು ಬಿಂಬಿತವಾದಷ್ಟು ಸಮಾಜದ ಪರಿವರ್ತನೆ ಸಾಧ್ಯ-ಡಾ.ಎಸ್.ಎಸ್.ಪಾಟೀಲ್

ಸೋಮವಾರ, ಏಪ್ರಿಲ್ 24th, 2017

ಮಲ್ಲಾಡಿಹಳ್ಳಿ ಒಳ್ಳೆತನಗಳು ಹೆಚ್ಚು ಬಿಂಬಿತವಾದಷ್ಟು ಸಮಾಜದ ಪರಿವರ್ತನೆ ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಶಿಕ್ಷಣ ಸಂಶೋಧನಾ ಹಾಗೂ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಪಾಟೀಲ್ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ 2016-17ನೇ ಸಾಲಿನ ವಿದ್ಯಾರ್ಥಿ ಸಾಂಸ್ಕತಿಕ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದು ಕ್ರೌರ್ಯ, ಹಿಂಸೆ, ಭ್ರಷ್ಟಾಚಾರಗಳು ಮಾಧ್ಯಮಗಳಲ್ಲಿ ಹೆಚ್ಚು ಬಿಂಬಿತವಾಗುತ್ತಿರುವುದು ವಿಷಾದನೀಯ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ ಸಲುವಾಗಿ ಒಳ್ಳೆತನಗಳನ್ನು ಹೆಚ್ಚು ಪ್ರಚಾರ ಮಾಡಿದಲ್ಲಿ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ […]

ಉತ್ತಮ ಶಿಕ್ಷಕರಾಗಲು ಉತ್ತಮ ಶಿಕ್ಷಣ ಅವಶ್ಯ - ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ಉತ್ತಮ ಶಿಕ್ಷಕರಾಗಲು ಉತ್ತಮ ಶಿಕ್ಷಣ ಅವಶ್ಯ – ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ಮಂಗಳವಾರ, ಮಾರ್ಚ 21st, 2017

ಮಲ್ಲಾಡಿಹಳ್ಳಿ ಉತ್ತಮ ಶಿಕ್ಷಕರಾಗಲು ಉತ್ತಮ ಶಿಕ್ಷಣದ ಅವಶ್ಯವಿದ್ದು ಅದನ್ನು ಪಡೆಯಲು ಮಲ್ಲಾಡಿಹಳ್ಳಿ ಬಿ.ಇಡಿಯಂತಹ ಕಾಲೇಜಿಗೆ ಸೇರುವುದರಿಂದ ಉತ್ತಮ ಶಿಕ್ಷಕರಾಗಲು ಸಾಧ್ಯವಾಗುತ್ತದೆ ಎಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು. ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡುತ್ತಾ ಎಲ್ಲ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುತ್ತವೆ ಆದರೆ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶಾಲಾ ಕಾಲೇಜುಗಳು ಉತ್ತಮ ಶಿಕ್ಷಣ ನೀಡುತ್ತಿದ್ದು, ಶಿಕ್ಷಣದ ಜೊತೆಯಲ್ಲಿ ಸಂಗೀತ, ಯೋಗ ಮತ್ತು ನಾಟಕದ ಕಲೆಗಳನ್ನು ಇಲ್ಲಿ […]

ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನುಗ್ಗಿ ಅವಕಾಶ ಪಡೆದುಕೊಳ್ಳಿ-ಡಾ.ವಾಣಿಶ್ರೀ

ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನುಗ್ಗಿ ಅವಕಾಶ ಪಡೆದುಕೊಳ್ಳಿ-ಡಾ.ವಾಣಿಶ್ರೀ

ಗುರುವಾರ, ಮಾರ್ಚ 9th, 2017

ಮಲ್ಲಾಡಿಹಳ್ಳಿ ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನುಗ್ಗಿ ಅವಕಾಶವನ್ನು ಪಡೆದುಕೊಳ್ಳಿ ಎಂದು ರಾಘವೇಂದ್ರ ಆಯುರ್ವೇದ ಮೆಡಿಕಲ್ ಕಾಲೇಜಿನ ವೈದ್ಯೆ ಡಾ.ವಾಣಿಶ್ರೀ ಹೇಳಿದರು. ಅವರು ರಾಘವೇಂದ್ರ ಬಿ.ಇಡಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಸ್ತ್ರೀ ಇಂದು ಎಲ್ಲ ರಂಗಗಳಲ್ಲೂ ತನ್ನದೇ ಆದ ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿದ್ದು ಅವಕಾಶಗಳನ್ನು ಯಾರೂ ಕೊಡುವುದಿಲ್ಲ ಪ್ರತಿಭೆಯಿದ್ದಾಗ ಅವುಗಳು ಹುಡುಕಿಕೊಂಡು ಬರುತ್ತವೆ ಒಂದು ವೇಳೆ ಅವುಗಳು ಕೈತಪ್ಪುವ ಸಂದರ್ಭ ಬಂದಲ್ಲಿ ಮುನ್ನುಗ್ಗಿ ಸಮರ್ಥವಾಗಿ ಅವುಗಳನ್ನು ಬಳಸಿಕೊಂಡು ಪ್ರತಿಭೆಯನ್ನು […]

ವಿದ್ಯಾದಾನ ಮಾಡಿದ ಸಂಸ್ಥೆಯನ್ನು ಮರೆಯದಿರಿ - ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು

ವಿದ್ಯಾದಾನ ಮಾಡಿದ ಸಂಸ್ಥೆಯನ್ನು ಮರೆಯದಿರಿ – ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು

ಬುಧವಾರ, ಫೆಬ್ರವರಿ 22nd, 2017

ಮಲ್ಲಾಡಿಹಳ್ಳಿ ತಾವು ಓದಿದ ಮತ್ತು ವಿದ್ಯಾದಾನ ಮಾಡಿದ ಸಂಸ್ಥೆಯನ್ನು ಎಂದಿಗೂ ಮರೆಯದಿರಿ ಎಂದು ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು ಹೇಳಿದರು. ಅವರು ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ 1986-88ರಲ್ಲಿ ಓದಿದ ವಿದ್ಯಾರ್ಥಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಕುರಿತು ಮಾತನಾಡುತ್ತಾ ಅತ್ಯಂತ ಬಡ ಹಾಗೂ ಹಿಂದುಳಿದ ವರ್ಗದವರ ಏಳ್ಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯೆ ಮತ್ತು ವಸತಿ ಸೌಕರ್ಯವನ್ನು ಪಡೆದುಕೊಂಡು ಅದರ ಋಣವನ್ನು ತೀರಿಸುವ ಸಲುವಾಗಿ ಬಂದು ಇಂದು ಆಶ್ರಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪ್ರೌಢಶಾಲೆಯ ಸಭಾಭವನದ ಲೈಟಿಂಗ್ ವ್ಯವಸ್ಥೆ ಮತ್ತು […]

ಪೋಷಕರು ತಮ್ಮ ಮಕ್ಕಳ ಕಡೆಗೆ ಗಮನ ಅವಶ್ಯ-ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ಪೋಷಕರು ತಮ್ಮ ಮಕ್ಕಳ ಕಡೆಗೆ ಗಮನ ಅವಶ್ಯ-ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ಸೋಮವಾರ, ಫೆಬ್ರವರಿ 13th, 2017

ಮಲ್ಲಾಡಿಹಳ್ಳಿ ಪೋಷಕರು ತಮ್ಮ ಮಕ್ಕಳ ಕಡೆಗೆ ಗಮನ ಹರಿಸಿ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸಿ ಉತ್ತಮ ಅಂಕಗಳಿಸಲು ನೆರವಾಗಬೇಕೆಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು ಅವರು ಮಲ್ಲಾಡಿಹಳ್ಳಿಯಲ್ಲಿ ನಡೆದ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಮಕ್ಕಳು ಮಾಧ್ಯಮಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದು ಮೊಬೈಲ್ ಮತ್ತು ಟಿ.ವಿಗಳಲ್ಲಿ ದಿನಕಳೆಯುತ್ತಿದ್ದು ಉತ್ತಮ ಅಂಕಗಳಿಸದೇ ಇರುವುದು ಆತಂಕಕಾರಿ ಮುಂದೆ ಅವರ ಭವಿಷ್ಯವನ್ನು ರೂಪಿಸುವ ಪೋಷಕರು ಅದರ ಕಡೆ ಗಮನ ಹರಿಸುವುದು ಅವಶ್ಯವಾಗಿದೆ ಪರೀಕ್ಷಾ […]

ವಿದ್ಯಾರ್ಥಿಗಳ ಚಿತ್ತ ಓದಿನತ್ತ - ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ವಿದ್ಯಾರ್ಥಿಗಳ ಚಿತ್ತ ಓದಿನತ್ತ – ಪ್ರೊ.ಟಿ.ಎಚ್.ಕೃಷ್ಣಮೂರ್ತಿ

ಶನಿವಾರ, ಫೆಬ್ರವರಿ 11th, 2017

ಮಲ್ಲಾಡಿಹಳ್ಳಿ ವಿದ್ಯಾರ್ಥಿಗಳ ಚಿತ್ತ ಓದಿನತ್ತ ಇರಬೇಕು ಎಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರೀಕರಿಸಿಕೊಂಡು ಮುಂದೆ ಬರುವ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು ವಿದ್ಯಾಭ್ಯಾಸದ ಕಡೆಗೆ ಮಹತ್ವವನ್ನು ನೀಡಿದ್ದೇ ಆದಲ್ಲಿ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಪ್ರಾಮಾಣಿಕ ಪ್ರಯತ್ನ ಮಾಡುವುದರಿಂದ ಕಲಿಸಿದ ಗುರುಗಳಿಗೆ ಪೋಷಕರಿಗೆ ಮತ್ತು ಸಂಸ್ಥೆಗೆ ಕೀರ್ತಿ ತರುವಂತಹ ಪ್ರಯತ್ನ ಮಾಡಬೇಕು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕಾದರೆ ವಿದ್ಯಾರ್ಥಿ ದೆಸೆಯಿಂದಲೇ […]

ಮಲ್ಲಾಡಿಹಳ್ಳಿಯಲ್ಲಿ ‘ಜಲಗಾರ’ ನ ‘ಜಾತ್ರೆ’ಯ ಸಂಭ್ರಮಕ್ಕೆ ತೆರೆ

ಮಲ್ಲಾಡಿಹಳ್ಳಿಯಲ್ಲಿ ‘ಜಲಗಾರ’ ನ ‘ಜಾತ್ರೆ’ಯ ಸಂಭ್ರಮಕ್ಕೆ ತೆರೆ

ಶುಕ್ರವಾರ, ಫೆಬ್ರವರಿ 10th, 2017

ಮಲ್ಲಾಡಿಹಳ್ಳಿ ತಿರುಕನೂರಿನಲ್ಲಿ ರಂಗದಾಸೋಹದ ಹೆಸರಿನಲ್ಲಿ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಸೂರುದಾಸ್‍ಜೀ ಯವರ ಪುಣ್ಯಾರಾಧನೆಯ ಅಂಗವಾಗಿ ನಡೆದ ನಾಟಕಗಳ ಉತ್ಸವಕ್ಕೆ ತೆರೆ ಎಳೆಯಲಾಯಿತು. ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಂದ ಅಭಿನಯಿಸಲ್ಪಟ್ಟ ನಾಟಕಗಳು ಜನರ ಸಂಭ್ರಮಕ್ಕೆ ಸಾಕ್ಷಿಯಾದವು. ಡಾ.ಶಿವಮೂರ್ತಿ ಮುರುಘಾ ಶರಣರಿಂದ ಉದ್ಘಾಟಿಸಲ್ಪಟ್ಟ ಉತ್ಸವದಲ್ಲಿ ನಾಡಿನ ಹಿರಿಯ ಸಾಹಿತಿಗಳು, ನಾಟಕಕಾರರು, ಕವಿಗಳು ಮತ್ತು ರಾಜಕೀಯ ಧುರೀಣರು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಪಾತ್ರರಾದರು. ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿಯವರ ಉತ್ಸಾಹದ ನಿರ್ದೇಶನದಲ್ಲಿ ಜಾನಪದ ಕಲಾಮೇಳಗಳೊಂದಿಗೆ ಊರಿನಲ್ಲಿ […]

ಸಮಯ ಪಾಲನೆ ರೂಢಿಸಿಕೊಳ್ಳಿ- ಡಾ.ಶಿವಮೂರ್ತಿ ಮುರುಘಾ ಶರಣರು

ಸಮಯ ಪಾಲನೆ ರೂಢಿಸಿಕೊಳ್ಳಿ- ಡಾ.ಶಿವಮೂರ್ತಿ ಮುರುಘಾ ಶರಣರು

ಗುರುವಾರ, ಜನವರಿ 26th, 2017

ಮಲ್ಲಾಡಿಹಳ್ಳಿ ಸಮಯ ಪಾಲನೆಯನ್ನು ರೂಢಿಸಿಕೊಳ್ಳುವುದರಿಂದ ದೇಶಕ್ಕೆ ಅಪಾರವಾದ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ವಿವಿಧ ಶಾಲಾ ಕಾಲೇಜುಗಳ ವತಿಯಿಂದ ಸಾಮೂಹಿಕವಾಗಿ ಏರ್ಪಡಿಸಿದ್ದ 68ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸಮಯಪಾಲನೆ, ಶಿಸ್ತು, ದೇಶಾಭಿಮಾನವನ್ನು ರೂಢಿಸಿಕೊಂಡಲ್ಲಿ ದೇಶವನ್ನು ಸಮಗ್ರವಾಗಿ ಮುನ್ನೆಡೆಸಿಕೊಂಡು ಹೋಗಿ ಈ ಮೂಲಕ ಗಣರಾಜ್ಯೋತ್ಸವದ ಆಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ತಿಳಿಸಲು ಸಾಧ್ಯವಾಗುತ್ತದೆ ಎಂದರು. ದೇಶದ ಜನರು ಕೆಲಸಗಳನ್ನು ಕರ್ತವ್ಯಗಳನ್ನು ಸಮರ್ಪಕವಾಗಿ ಮಾಡಿದಾಗ ಮಹಾತ್ಮಗಾಂಧೀಜಿ, ವಲ್ಲಭಭಾಯಿ […]