ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ
ಮಲ್ಲಾಡಿಹಳ್ಳಿ ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ ಎಂದು ಪ್ರಸಿದ್ಧ ರಂಗನಿರ್ದೇಶಕ
ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ

ಮಲ್ಲಾಡಿಹಳ್ಳಿ, 21-06-2016
ಮಲ್ಲಾಡಿಹಳ್ಳಿಯಲ್ಲಿ ಜೂನಿಯರ್ ಎನ್.ಸಿ.ಸಿ ಕೆಡೆಟ್ಗಳು ಹಾಗೂ ಸೀನಿಯರ್ ಎನ್.ಸಿ.ಸಿ ಕೆಡೆಟ್ಗಳು ಯೋಗ ಪ್ರದರ್ಶನ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಮಾತನಾಡಿ ಎನ್.ಸಿ.ಸಿ ವಿಭಾಗಗಳ 400ಕ್ಕೂ ಹೆಚ್ಚು ಕೆಡೆಟ್ಗಳು ಒಂದೇ ವೇದಿಕೆಯಲ್ಲಿ ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ವಿವಿಧ ರೀತಿಯ ಯೋಗಾಸನಗಳ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಸದೃಡತೆಯನ್ನು ತಂದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸೀನಿಯರ್ ಬೆಟಾಲಿಯನ್ ಕಮಾಂಡರ್ ಎಚ್.ಟಿ.ರಮೇಶ್ ಹಾಗೂ ಜ್ಯೂನಿಯರ್ ಬೆಟಾಲಿಯನ್ ಕಮಾಂಡರ್ ಹಾರೋಮಠ್ ಹಾಗೂ ಇತರೆ ಎನ್.ಸಿ.ಸಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.