ಅಹಿಂಸಾತ್ಮಕವಾಗಿ ಕನ್ನಡವನ್ನು ಬೆಳಸಬೇಕು-ಕವಿ ಚಂದ್ರಶೇಖರ ತಾಳ್ಯ
ಗುರುವಾರ, ನವೆಂಬರ 6th, 2014ಮಲ್ಲಾಡಿಹಳ್ಳಿ : ಅಹಿಂಸಾತ್ಮಕವಾಗಿ ಕನ್ನಡವನ್ನು ಬೆಳಸಬೇಕೆಂದು ಕವಿ ಚಂದ್ರಶೇಖರ ತಾಳ್ಯ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಎಲ್ಲ ಶಾಲಾ ಕಾಲೇಜುಗಳು ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಚಿತ್ರದುರ್ಗದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಜಗತ್ತಿನಲ್ಲಿ ಯಾವುದೇ ಭಾಷೆಯನ್ನು ಬೆಳೆಸಬೇಕು ಎಂದು ನಿರ್ಧರಿಸಿದರೆ ಅದು ಅಹಿಂಸಾ ಮಾರ್ಗವಾಗಿರಬೇಕು ಹಾಗೆಯೇ ಕನ್ನಡ ಭಾಷೆ ಹಿಂದಿನಿಂದಲೂ ಅಹಿಂಸಾ ಮಾರ್ಗದಿಂದ ಬೆಳೆದು ಬಂದಿದೆ. ಸಾಕಷ್ಟು ಇತಿಹಾಸವಿರುವ ಕನ್ನಡ ಭಾಷೆ ಇಂದು ಸೊರಗುತ್ತಿರುವುದು ವಿಷಾದನೀಯ ಕನ್ನಡ ಭಾಷೆ ನಾಶವಾದರೆ ಅದರ ಜೊತೆಯಲ್ಲಿ […]