ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ
ಯೋಗಾಭ್ಯಾಸದಿಂದ ಸದಾ ಕ್ರಿಯಾಶೀಲತೆ ಲಭ್ಯವಾಗುತ್ತದೆ ಎಂದು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ತಿಳಿಸಿದರು. ಅವರು ಅನಾಥಸೇವಾಶ್ರಮದಲ್ಲಿ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಸೂರುದಾಸ್ ಜೀ ಸ್ವಾಮೀಜಿಯವರ ಪುಣ್ಯಾರಾಧನೆ ನಿಮಿತ್ತವಾಗಿ ಏರ್ಪಡಿಸಿದ್ದ ಐದು ದಿನಗಳ ಉಚಿತ ಪಾತಂಜಲ ಮೂಲಯೋಗ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದು ನಾವುಗಳು ಒತ್ತಡ ಜೀವನವನ್ನು ಸಾಗಿಸುತ್ತಿದ್ದು ಅನೇಕ ಮಾನಸಿಕ ರೋಗಗಳಿಂದ ಹೆಚ್ಚಾಗಿ ಬಳಲುತ್ತಿದ್ದೇವೆ ನಿತ್ಯ ಯೋಗಾಭ್ಯಾಸದಲ್ಲಿ ತೊಡಗಿಕೊಂಡಾಗ ಆರೋಗ್ಯಯುತವಾದ ಜೀವನ ಹೊಂದಲು ಸಾಧ್ಯವಾಗಿ ಇದರ ಮೂಲಕ ಕ್ರಿಯಾಶೀಲತೆ ಲಭ್ಯವಾಗುತ್ತದೆ ಎಂದರು. ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಹಲವಾರು ಶಿಬಿರಗಳಲ್ಲಿ ಭಾಗವಹಿಸಿದ್ದು ಇಂದಿಗೂ ಆರೋಗ್ಯವಾಗಿ ಇರಲಿಕ್ಕೆ ಸಾಧ್ಯವಾಗಿದೆ ಎಂದರು.
ಶಿಬಿರದ ಯೋಗತರಬೇತುದಾರ ಸಂತೋಷ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸಮರ್ಥರಾಗಲು ಯೋಗಾಭ್ಯಾಸ ಅತ್ಯಗತ್ಯ ಅನಾಥಸೇವಾಶ್ರಮದ ಆಡಳಿತ ಮಂಡಳಿಯು ಯೋಗ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವುದರಿಂದ ಉಚಿತ ಯೋಗ ನೀಡಲು ಸಾಧ್ಯವಾಗಿದೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಘವೇಂದ್ರ ಆಯುರ್ವೇದ ಕಾಲೇಜಿನ ಉಪಪ್ರಾಚಾರ್ಯ ವೇದಮೂರ್ತಿ ಹಿರೇಮಠ್ ಮಾತನಾಡಿ ಮಾನಸಿಕ ಹಾಗೂ ದೈಹಿಕ ಖಾಯಿಲೆಗಳನ್ನು ವಾಸಿಮಾಡಲು ಎರಡು ರೀತಿಯ ಚಿಕಿತ್ಸಾ ವ್ಯವಸ್ಥೆಗಳಿದ್ದು ಔಷಧಿಗಳ ಮೂಲಕ ಮತ್ತೊಂದು ಔಷಧಿರಹಿತ ಚಿಕಿತ್ಸಾ ವ್ಯವಸ್ಥೆಯಾಗಿದೆ. ಯೋಗ, ಸಂಗೀತ, ನೃತ್ಯ, ಮುದ್ರೆ, ಧ್ಯಾನ ಪದ್ಧತಿಗಳು ಔಷಧಿರಹಿತವಾಗಿ ವ್ಯಕ್ತಿಯನ್ನು ಗುಣಮುಖರನ್ನಾಗಿ ಮಾಡಲು ಸಾಧ್ಯವಾಗುವಂತಹವುಗಳಾಗಿವೆ ಎಂದರು. ಬಿ.ಪಿ.ಇಡಿ ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ.ವೆಂಕಟೇಶ್, ಗ್ರಂಥಪಾಲಕ ಜಿ.ಬಿ.ಬುದ್ಧನಗೌಡರು, ಕೇಮಪಾಲಕರುಗಳಾದ ಎಂ.ಎನ್.ಮಲ್ಲಪ್ಪ, ಪಿ.ಎಂ.ಶಿವಕುಮಾರ್ ಉಪಸ್ಥಿತರಿದ್ದರು. ಜಿ.ಆರ್.ಕವಿತಾ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಕುಮಾರ್ ಸ್ವಾಗತಿಸಿ, ಬಿ.ಪಿ.ಚಂದ್ರಶೇಖರ್ ನಿರೂಪಿಸಿದರು.