ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಮಾತಿಗಿಂತ ಮೌನ ಹೆಚ್ಚು ಪರಿಣಾಮಕಾರಿ-ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ

ಮಂಗಳವಾರ, ನವೆಂಬರ 7th, 2017

ಮಲ್ಲಾಡಿಹಳ್ಳಿ
ಮಾತಿಗಿಂತ ಮೌನ ಹೆಚ್ಚು ಪರಿಣಾಮಕಾರಿಯಾಗುತ್ತದೆ ಮತ್ತು ಅದರ ಜೊತೆಗೆ ಹಲವಾರು ಅರ್ಥಗಳನ್ನು ತಂದುಕೊಟ್ಟು ವ್ಯಕ್ತಿಯ ಗೌರವವನ್ನು ಹೆಚ್ಚಿಸುತ್ತದೆ ಎಂದು ಅನಾಥಸೇವಾಶ್ರಮ ವಿಶ್ವಸ್ತ, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತು ಆರ್ಥಿಕ ತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ನುಡಿದರು. ಅವರು ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಸಂಸ್ಥಾಪಕ ಕಾರ್ಯದರ್ಶಿ ಪೂಜ್ಯ ಶ್ರೀ ಸೂರುದಾಸ್‍ಜೀ ಸಂಸ್ಥರಣೆಯ ಅಂಗವಾಗಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಸ್ತುತ ಸಮಾಜದಲ್ಲಿ ಮಾತುಗಳಿಗೆ ಹೆಚ್ಚು ಗಮನಹರಿಸುತ್ತೇವೆ ಆದರೆ ಈ ಎಲ್ಲದಕ್ಕೂ ಮಿಗಿಲಾದದ್ದು ಮೌನ ಅದು ಪರಿಣಾಮಕಾರಿಯಾಗಿ ಮುಟ್ಟುತ್ತದೆ ಸಮಾಜೋಪಯೋಗಿ ಕೆಲಸ ಕಾರ್ಯಗಳಿಗೆ ಇದರ ಉಪಯುಕ್ತತೆಯ ಮಹತ್ವ ಹೆಚ್ಚಿದೆ ಎಂದರು.
ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಬೆಂಗಳೂರಿನ ನಿವೃತ್ತ ತಹಸಿಲ್ಧಾರ ಜಿ.ಪುಟ್ಟೇಗೌಡ ಮಾತನಾಡಿ ರಾಘವೇಂದ್ರ ಸ್ವಾಮೀಜಿ ಮತ್ತು ಸೂರುದಾಸ್‍ಜೀ ಸ್ವಾಮೀಜಿಯವರ ಕನಸುಗಳು ಇಂದು ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಡೆಯುತ್ತಿರುವ ಆಶ್ರಮ ಮತ್ತು ಹಿರಿಯ ಗುರುಗಳ ಆಶಯಗಳು ನೆರವೇರುತ್ತಿರುವುದು ಸಂತಸ ತಂದಿದೆ ನಾನು 1980ರಲ್ಲಿ ಬಂದು ನೋಡಿದ ಆಶ್ರಮ ಇಂದು ಬೃಹದಾಕಾರವಾಗಿ ಬೆಳೆದಿದ್ದು ಶರಣರ ಅಭಿವೃದ್ಧಿಯ ಕನಸು ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಯೋಗ, ಶಿಕ್ಷಣ, ಆಯುರ್ವೇದ ಕ್ಷೇತ್ರದಲ್ಲಿ ಹೆಸರು ಮಾಡಿದ ಸಂಸ್ಥೆ ಇಂದು ಸಾಂಸ್ಕøತಿಕವಾಗಿಯೂ ಗಟ್ಟಿಯಾಗುತ್ತಾ ಸಾಗುತ್ತಿರುವುದು ಸಂತೋಷ ತಂದಿದೆ ಆಶ್ರಮದಲ್ಲಿ ನಡೆಯುತ್ತಿರುವ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಕೊಡುವಲ್ಲಿ ಯಶಸ್ವಿಯಾಗುತ್ತದೆ ಎಂದರು.
ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು ಸ್ವಾಗತಿಸಿ, ಯೋಗ ತರಬೇತುದಾರ ಎಸ್.ಆರ್.ಸಂತೋಷ್ ಕುಮಾರ್ ನಿರೂಪಿಸಿ, ಪ್ರಾಚಾರ್ಯ ಡಿ.ಸತೀಶ್ ವಂದಿಸಿದರು. ಇದೇ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮೀಜಿ ರಚಿತ ಗೀತಗಾಯನ ಸ್ಪರ್ಧೆ ಮತ್ತು ಭಾಷಣ ಸ್ಫರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಎಲ್ಲ ಶಾಲಾ ಕಾಲೇಜುಗಳ ಅಧ್ಯಾಪಕರು, ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.