ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ನಿರಂತರ ಅಭ್ಯಾಸದಿಂದ ಉನ್ನತ ಸ್ಥಾನ ಪಡೆಯಬಹುದು

ಬುಧವಾರ, ಅಕ್ತೂಬರ 3rd, 2012

ಮಲ್ಲಾಡಿಹಳ್ಳಿ: ನಿರಂತರ ಅಭ್ಯಾಸದಿಂದ ಉನ್ನತ ಸ್ಥಾನಪಡೆಯಬಹುದು ಎಂದು ಭಾರತೀಯ ಜೀವ ವಿಮಾ ನಿಗಮ ಶಿವಮೊಗ್ಗ ವಿಭಾಗದ ಪ್ರಾಂಶುಪಾಲ ನಾಗರಾಜ್ ನುಡಿದರು. ಅವರು ಅನಾಥಸೇವಾಶ್ರಮದಲ್ಲಿ ಏರ್ಪಡಿಸಲಾಗಿದ್ದ ಭಾರತೀಯ ಜೀವವಿಮಾ ನಿಗಮದ ಸಹಯೋಗದೊಂದಿಗೆ ಸ್ಥಾಪಿಸಲಾದ ಸೋಲಾರ್ ಲೈಟಿಂಗ್ ಘಟಕ ಉದ್ಘಾಟಿಸಿ ಮಾತನಾಡಿದರು.
ಸ್ವಾಮೀಜಿಯವರು ಸ್ಥಾಪಿಸಿದ ಆಶ್ರಮದಲ್ಲಿ ಅಭ್ಯಾಸ ಮಾಡುತ್ತಿರುವುದು ವಿದ್ಯಾರ್ಥಿಗಳ ಪುಣ್ಯದ ಕೆಲಸ ಇಲ್ಲಿ ಅಭ್ಯಾಸ ಮಾಡಿದವರು ಉನ್ನತ ಸ್ಥಾನಕ್ಕೇರಿದಾಗ ಆಶ್ರಮಕ್ಕೆ ಕೊಡುಗೆ ನೀಡುವುದರ ಮೂಲಕ ಆಶ್ರಮದ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಸೆಲ್ಕೋ ಸೋಲಾರ್ ಲೈಟ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮೋಹನ್ ಹೆಗಡೆ ಮಾತನಾಡಿ ಇಂದು ಹಳ್ಳಿಗಳು ವಿದ್ಯುತ್ ವ್ಯತ್ಯಯ ಹೆಚ್ಚಾಗುತ್ತಿದ್ದು ಆಶ್ರಮಕ್ಕೆ ಶಾಶ್ವತ ಬೆಳಕಿನ ವ್ಯವಸ್ಥೆ ಮಾಡಲು ಸದಾ ಸಿದ್ಧರಾಗಿದ್ದೇವೆ ಆಶ್ರಮ ಎಂದಿಗೂ ಅನಾಥವಲ್ಲ ಅದು ಸನಾತಸೇವಾಶ್ರಮ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಅನಾಥಸೇವಾಶ್ರಮದ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ಮಾತನಾಡುತ್ತಾ ಕರ್ನಾಟಕz ಗ್ರಾಮೀಣ ಭಾಗದಲ್ಲಿ ಇಂತಹ ಆಶ್ರಮ ಬೇರೊಂದಿಲ್ಲ ಆಶ್ರಮದ ಕ್ರಿಯಾತ್ಮಕ ಚಟುವಟಿಕೆಗಳಿಂದ ಇಂದು ರಾಷ್ಟ್ರದಲ್ಲೇ ಹೆಸರುವಾಸಿಯಾಗಿದ್ದು ಅದರಲ್ಲಿ ವಿದ್ಯಾರ್ಥಿನಿಲಯಗಳಿಗೆ ಸ್ವಾವಲಂಬಿ ಬೆಳಕಿನ ವ್ಯವಸ್ಥೆ ಮಾಡುತ್ತಿರುವುದು ಹೆಮ್ಮೆಯ ಕೆಲಸ ವಿದ್ಯಾರ್ಥಿಗಳಿಗೆ ನಿರಂತರ ಬೆಳಕಿನ ವ್ಯವಸ್ಥೆ ಮಾಡಿದಾಗ ಅವರ ಶೈಕ್ಷಣಿಕ ಮಟ್ಟ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಲ್.ಐ.ಸಿ ಬ್ರಾಂಚ್‌ನ ರಾಜಶೇಖರ್, ಸೆಲ್ಕೋ ಕಂಪನಿ ಜನರಲ್ ಮ್ಯಾನೇಜರ್ ಪ್ರಸನ್ನ ಹೆಗಡೆ, ಕವಿ ಚಂದ್ರಶೇಖರತಾಳ್ಯ, ಮಂಜುನಾಥ ಭಾಗವತ್, ಸಹಾಯಕ ಆಡಳಿತಾಧಿಕಾರಿಗಳಾದ ಕೆ.ಡಿ.ಬಡಿಗೇರ, ಎಲ್.ಎಸ್.ಶಿವರಾಮಯ್ಯ, ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಎಸ್.ರವಿಶಂಕರ್ ಸ್ವಾಗತಿಸಿ, ಯೋಗ ಶಿಕ್ಷಕ ಸಂತೋಷ್ ಕುಮಾರ್ ನಿರೂಪಿಸಿ, ಸಂಸ್ಕೃತ ಪಂಡಿತ ಸುಬ್ರಾಯ್ ಭಟ್ ವಂದಿಸಿದರು.