ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಶ್ರೀ ರಾಘವೇಂದ್ರ ಪಾಟೀಲ್

ಪರಿಚಯ

 ಹೆಸರು  :  ರಾಘವೇಂದ್ರ ಪಾಟೀಲ
 ತಂದೆ ಹೆಸರು  :  ಬಲವಂತರಾವ್ ಪಾಟೀಲ
 ತಾಯಿಯ ಹೆಸರು  :  ಇಂದಿರಾಬಾಯಿ
 ಜನ್ಮ ದಿನಾಂಕ  :  16-4-1951
 ವಿದ್ಯಾಭ್ಯಾಸ  : ಎಂ.ಎಸ್ಸಿ

 ನಿರ್ವಹಿಸಿದ/ನಿರ್ವಹಿಸುತ್ತಿರುವ ಹುದ್ದೆಗಳು: 1. ಜುಲೈ 1973 ರಿಂದ ಜುಲೈ 2003ರವರೆಗೆ ಜೀವಶಾಸ್ತ್ರದ ಉಪನ್ಯಾಸಕ 2. ಆಗಸ್ಟ್ 2003ರಿಂದ ಪ್ರಾಚಾರ್ಯರು, ಅ.ಸೇ. ಪದವಿಪೂರ್ವ ಕಾಲೇಜು 3. ಜುಲೈ 2003ರಿಂದ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಆಡಳಿತಾಧಿಕಾರಿಗಳು 4. 3 ಬಾರಿ ಡೈರೆಕ್ಟರ್ ಜನರಲ್ ಎನ್.ಸಿ.ಸಿಯವರಿಂದ ಉತ್ತಮ ಸಾಧನೆಗಾಗಿ ಅಭಿನಂದನೆಯ ಪತ್ರ 5. ಜುಲೈ 1975ರಿಂದ ಆಗಸ್ಟ್ 2003ರವರೆಗೆ ಎನ್.ಸಿ.ಸಿ ಅಧಿಕಾರಿ/ಮೇಜರ್‌ರಾಗಿ ನಿವೃತ್ತಿ. 6. ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ/ ಉಪನ್ಯಾಸಕ/ ಸಿಬ್ಬಂದಿ ವರ್ಗದವರ ಫೆಡರೇಶನ್‌ನ ರಾಜ್ಯ ಉಪಾಧ್ಯಕ್ಷನಾಗಿ 2 ಅವಧಿ ಸೇವೆ. 7. ಸಾಹಿತ್ಯ ಸಂವಾದ ಸಾಹಿತ್ಯಿಕ ಸಾಂಸ್ಕೃತಿಕ ತ್ರೈಮಾಸಿಕ ಪತ್ರಿಕೆಯ ಸ್ಥಾಪಕ ಸಂಪಾದಕ. 8. ಆನಂದಕಂದ ಗ್ರಂಥಮಾಲೆಯ ಸ್ಥಾಪಕ ಸಂಪಾದಕ ಸಂಚಾಲಕ 9. ಸ್ಥಾಪಕ ಕಾರ್ಯದರ್ಶಿ ತಿರುಕರಂಗ ಸಾಂಸ್ಕೃತಿಕ ವೇದಿಕೆ, ಅನಾಥಸೇವಾಶ್ರಮ ಮಲ್ಲಾಡಿಹಳ್ಳಿ 10. ಕರ್ನಾಟಕ ಸಾಹಿತ್ಯ ಅಕಾಡೆಮಿ ಕಥಾಕಮ್ಮಟದ ಸಹ ನಿರ್ದೇಶಕನಾಗಿ ಸೇವೆ. (2004 ಆಗಸ್ಟ್ ತಿಂಗಳಲ್ಲಿ ಕುಮಟಾದಲ್ಲಿ ನಡೆದ ಕಥಾ ಕಮ್ಮಟ) 11. ಬೆಟಗೇರಿ ಕೃಷ್ಣಶರ್ಮ ಫೌಂಡೇಷನ್‌ನ ಕಾರ್ಯದರ್ಶಿಯಾಗಿ ಸೇವೆ. ಪ್ರಕಟಣೆಗಳು:

  • ಒಡಪುಗಳು – ಸಣ್ಣ ಕಥಾ ಸಂಕಲನ
  • ಪ್ರತಿಮೆಗಳು – ಸಣ್ಣ ಕಥಾ ಸಂಕಲನ
  • ದೇಸಗತಿ-ಸಣ್ಣ ಕಥಾ ಸಂಕಲನ
  • ಮಾಯಿಯ ಮುಖಗಳು-ಸಣ್ಣ ಕಥಾ ಸಂಕಲನ
  • ಬಾಳವ್ವನ ಕನಸುಗಳು – ಕಾದಂಬರಿ
  • ತೇರು-ಕಾದಂಬರಿ
  • ವಾಗ್ವಾದ-ವಿಮರ್ಶಾ ಸಂಕಲನ
  • ಆನಂದಕಂದ-ಕೇಂದ್ರ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ನಿರ್ಮಾಣಕಾರರು ಪುಸ್ತಕ ಮಾಲಿಕೆಗೆ ಡಾ|| ಬೆಟಗೇರಿ ಕೃಷ್ಣಶರ್ಮರ ಕುರಿತ ಮಿಮರ್ಶೆ
  • ಅಜ್ಞಾತ ಮುಂಬೈ-ಪ್ರವಾಸಕಥೆ

ಸಂಪಾದಿತ ಕೃತಿಗಳು: 1. ಸಂಕಿರಣ-ಜ್ಞಾನ ಪೀಠ ಪ್ರಶಸ್ತಿ ವಿಜೇತ ಕುವೆಂಪು, ಬೇಂದ್ರೆ ಹಾಗೂ ಕಾರಂತ ಕುರಿತ ವಿಮರ್ಶೆ. 2. ಹೊಸಕಾವ್ಯದ ಮುನ್ನೆಲೆ ಭಾಗ ಒಂದು ಮತ್ತು ಎರಡು, ಕನ್ನಡ ಹೊಸ ಕಾವ್ಯ ಕುರಿತ ಲೇಖನಗಳ ಸಂಕಲನ. 3. ಮಾಸ್ತಿ ಸಾಹಿತ್ಯ ಸಮಗ್ರ ದರ್ಶನ-ಮಾಸ್ತಿ ಸ್ಮರಣ ಸಂಪುಟ 4. ಕಾಡಿನ ಹುಡುಗ ಕೃಷ್ಣ-ಹಾಲನಹಳ್ಳಿ ಕೃಷ್ಣ ಸ್ಮರಣ ಸಂಪುಟ 5. ನವಮೇಘರೂಪಿ-ಕನ್ನಡ ಕಾವ್ಯೋಧ್ಯಾನದಲ್ಲಿ ಒಂದು ಪರ್ಯಟನೆ. 6. ಪ್ರತ್ಯಭಿಜ್ಞಾನ ಕೀರ್ತಿ-ಪ್ರೋ.ಕೀರ್ತಿನಾಥ ಕುರ್ತಕೋಟಿ ಸ್ಮರಣ ಸಂಪುಟ ಪ್ರಶಸ್ತಿ-ಪುರಸ್ಕಾರಗಳು:

  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-2005, ತೇರು ಕಾದಂಬರಿಗೆ
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1998-ಮಾಯಿಯ ಮುಖಗಳು ಕಥಾ ಸಂಕಲನಕ್ಕೆ
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-2003-ತೇರು ಕಾದಂಬರಿಗೆ
  • ಕಾರಂತ ಪುರಸ್ಕಾರ-ದೇಸಗತಿ ಕಥಾಸಂಕಲನಕ್ಕೆ
  • ಚದುರಂಗ ಪ್ರಶಸ್ತಿ-ಮಾಯಿಯ ಮುಖಗಳು ಕಥಾ ಸಂಕಲನಕ್ಕೆ
  • ವರ್ಧಮಾನ ಪ್ರಶಸ್ತಿ-ಮಾಯಿಯ ಮುಖಗಳು ಕಥಾ ಸಂಕಲನಕ್ಕೆ
  • ಗೊರೂರು ಪ್ರಶಸ್ತಿ-ದೇಸಗತಿ ಕಥಾಸಂಕಲನಕ್ಕೆ
  • ಉದಯವಾಣಿ ಕಥಾ ಸ್ಪರ್ಧೆಯ ಪ್ರಥಮ ಬಹುಮಾನ-ಒಡಪುಗಳು ಕಥೆಗೆ
  • ಪ್ರಜಾವಾಣಿ ಕಥಾ ಸ್ಪರ್ಧೆಯ ಪ್ರಥಮ ಬಹುಮಾನ-ಪ್ರತಿಮೆಗಳು ಕಥೆಗೆ
  • ಸುಧಾ, ಯುಗಾದಿ ಕಾದಂಬರಿ ಸ್ಪರ್ಧೆ ಮೆಚ್ಚುಗೆಯ ಬಹುಮಾನ-ಕಳಕೊಂಡವರು (ಬಾಳವ್ವನ ಕನಸುಗಳು) ಕಾದಂಬರಿಗೆ
  • ಬೆಳಗಾಂ ಜಿಲ್ಲೆಯ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪ್ರಶಸ್ತಿ – ದೇಸಗತಿ ಮತ್ತು ತೇರು ಕೃತಿಗಳಿಗೆ
  • ಹಂಸಭಾವಿಯ ವಿಶ್ವನಾಥ ವಾರಂಬಳ್ಳಿಯ ಪ್ರಶಸ್ತಿ-ಮಾಯಿಯ ಮುಖಗಳು ಕೃತಿಗೆ
  • ಡಾ|| ಬಸು ಪಟ್ಟೇದ್ ಪ್ರಶಸ್ತಿ – ಮಾಯಿಯ ಮುಖಗಳು ಕೃತಿಗೆ
  • ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ-ದೇಸಗತಿ ಕೃತಿಗೆ
  • ಆರ್ಯಭಟ ಪ್ರಶಸ್ತಿ-ದೇಸಗತಿ ಕಥಾ ಸಂಕಲನಕ್ಕೆ

 

 ವಿಳಾಸ  : ರಾಘವೇಂದ್ರ ಪಾಟೀಲ
ಪ್ರಾಚಾರ್ಯರು ಹಾಗೂ ಆಡಳಿತಾಧಿಕಾರಿಗಳು ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ ಮಲ್ಲಾಡಿಹಳ್ಳಿ ಫೋನ್ : 08191-289528, 529 E-mail rbp_501@yahoo.co.in
ಮನೆ ವಿಳಾಸ : ಬಲರಾಮ ಅಧ್ಯಾಪಕರ ಕಾಲೋನಿ ಮಲ್ಲಾಡಿಹಳ್ಳಿ ಫೋನ್ : 08191-289501 ಮೊಬೈಲ್ : 9480455604