ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಶಿಕ್ಷಕನು ವೃತ್ತಿಗೆ ನ್ಯಾಯ ಒದಗಿಸಿದಾಗ ಮಾತ್ರ ದೇಶದ ಅಭಿವೃದ್ಧಿ- ಎಸ್.ಕೆ.ಬಿ.ಪ್ರಸಾದ್

ಬುಧವಾರ, ಸೆಪ್ಟೆಂಬರ 15th, 2021

ಮಲ್ಲಾಡಿಹಳ್ಳಿ: ಶಿಕ್ಷಕನು ಉತ್ತಮ ಬೋಧನೆ ಮಾಡುತ್ತಾ ವೃತ್ತಿಗೆ ನ್ಯಾಯ ಒದಗಿಸಿದಾಗ ಮಾತ್ರ ಈ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಚಿತ್ರದುರ್ಗ ಡಯಟ್‍ನ ಜಿಲ್ಲಾ ಪದನಿಮಿತ್ತ ಉಪನಿರ್ದೇಶಕ ಎಸ್.ಕೆ.ಬಿ.ಪ್ರಸಾದ್ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಬಿ.ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಸಂಘದ ಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಕ ವೃತ್ತಿ ಇಂದು ಅತ್ಯಂತ ಕಷ್ಟಕರವಾಗಿದೆ ವೃತ್ತಿ ನಿರ್ವಹಣೆ ಅಷ್ಟೊಂದು ಸುಲಭವಲ್ಲ ಇದಕ್ಕೆ ಬೇಕಾಗುವ ಪೂರ್ವ ತಯಾರಿ ಹಾಗೂ ತರಬೇತಿಯನ್ನು ಮಾಡಿಕೊಂಡು ಸೂಕ್ತ ರೀತಿಯಲ್ಲಿ ಬೋಧನೆ ಮಾಡಬೇಕಾದ ಸನ್ನಿವೇಶವಿದೆ ಹಾಗಾಗಿ ನಿರಂತರ ಅಧ್ಯಯನ, ಅಧುನಿಕ ಬೋಧನಾ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಸಂದರ್ಭೋಚಿತವಾಗಿ ಪಾಠವನ್ನು ಮಾಡಿ ವಿದ್ಯಾರ್ಥಿಗಳ ಜೊತೆ ಸೌಹಾರ್ದತೆಯನ್ನು ಹೊಂದಬೇಕಾಗುತ್ತದೆ. ಅಣು ಬೋಧನೆಯಲ್ಲಿ ಬರುವ ಕೌಶಲ್ಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಬೇಕು ಎಂಬ ಸಲಹೆ ನೀಡಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಚಿತ್ರದುರ್ಗ ಎಸ್.ಎಲ್.ವಿ ಕಾಲೇಜಿನ ಪ್ರಾಚಾರ್ಯ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ಛೇರ್‍ಮನ್ ಪ್ರೊ.ಈ.ರುದ್ರಮುನಿ ಮಾತನಾಡಿ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವ ಜವಬ್ದಾರಿ ನಿರ್ವಹಣೆ ಮಾಡಬೇಕು ಒಳ್ಳೆಯ ಮೌಲ್ಯಗಳು ಬೆಳವಣಿಗೆಯಾದಾಗ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದರು. ತರಗತಿಯಲ್ಲಿ ಕಲಿಯುವ ವಿಷಯಗಳನ್ನು ಕೇವಲ ಪರೀಕ್ಷೆಗೆ ಸೀಮಿತಗೊಳಿಸದೇ ನಿಜಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇಂದಿಗೂ ಗುಣಮಟ್ಟದ ಶಿಕ್ಷಕರ ಕೊರತೆ ಇದ್ದು ಅದನ್ನು ಸರ್ವತೋಮುಖವಾಗಿ ಅಧ್ಯಯನ ಮಾಡುವುದರಿಂದ ಕೊರತೆ ನೀಗಿಸಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ವಹಿಸಿದ್ದರು. ಅನಾಥಸೇವಾಶ್ರಮದ ವ್ಯವಸ್ಥಾಪಕ ಎಚ್.ಎಸ್.ಸಿದ್ರಾಮಸ್ವಾಮಿ, ಬಿ.ಪಿ.ಇಡಿ ಕಾಲೇಜಿನ ಪ್ರೊ.ಟಿ.ವೆಂಕಟೇಶ್ ಉಪಸ್ಥಿತರಿದ್ದರು.

ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿ ಸಂಸ್ಥೆಗೆ ಕೀರ್ತಿ ತಂದ ಗುಲ್ಜಾರ್ ಬಾನು, ಪಾರಿಜಾತ.ಕೆ ಹಾಗೂ ಮಜ್ಹೀದ ಉನ್ನೀಸಾ ಇವರುಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಎನ್.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣಾರ್ಥಿಗಳಾದ ಅಯೇಷಾಖಾನಂ ಸ್ವಾಗತಿಸಿ, ಕಾವ್ಯ ಹಾಗೂ ವಿದ್ಯಾ ನಿರೂಪಿಸಿ, ವಿಶ್ವನಾಥ ವಂದಿಸಿದರು.