ಸುದ್ದಿಗಳು

ವ್ಯಕ್ತಿ ಸಾಧನೆಯತ್ತ ಮುನ್ನುಗ್ಗಬೇಕು – ಡಾ. ಶಿವಮೂರ್ತಿ ಮುರುಘಾ ಶರಣರು
ವ್ಯಕ್ತಿ ಸಾಧನೆಯತ್ತ ಮುನ್ನುಗ್ಗಬೇಕು - ಡಾ. ಶಿವಮೂರ್ತಿ ಮುರುಘಾ ಶರಣರು

ಮಲ್ಲಾಡಿಹಳ್ಳಿ: ವ್ಯಕ್ತಿ ಯಾವುದಾದರೊಂದು ಸಾಧನೆಯತ್ತ ಮುನ್ನುಗ್ಗಿದಾಗ ಮಾತ್ರ ವ್ಯಕ್ತಿತ್ವ

ಮಲ್ಲಾಡಿಹಳ್ಳಿ ಬಿ.ಇಡಿ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ
ಮಲ್ಲಾಡಿಹಳ್ಳಿ ಬಿ.ಇಡಿ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮಲ್ಲಾಡಿಹಳ್ಳಿ: ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದ ಬಿ.ಇಡಿ ಕಾಲೇಜುಗಳ ತೃತೀಯ

Follow Us

ಪಾಶ್ಚಿಮಾತ್ಯರು ಆಯುರ್ವೇದಕ್ಕೆ ಕೊಡುವ ಗೌರವ ನಾವೇಕೆ ಕೊಡುತ್ತಿಲ್ಲ?-ಎಸ್.ಪಿ ರಾಧಿಕಾ

ಶನಿವಾರ, ಅಕ್ತೂಬರ 9th, 2021

ಮಲ್ಲಾಡಿಹಳ್ಳಿ: ಪಾಶ್ಚಿಮಾತ್ಯರುವ ಆಯುರ್ವೇದಕ್ಕೆ ಕೊಡುವ ಗೌರವ ನಾವೇಕೆ ಕೊಡುತ್ತಿಲ್ಲ ಎಂದು ಜಿಲ್ಲಾ ಪೋಲೀಸ್ ಅಧೀಕ್ಷಕಿ ಎಸ್.ಪಿ.ರಾಧಿಕಾ ಮಾತನಾಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಏರ್ಪಡಿಸಿದ್ದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಹಾಗೂ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಪಾಶ್ಚಿಮಾತ್ಯರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಯುರ್ವೇದದ ಬಗಗೆ ಆಸಕ್ತಿಯನ್ನು ತಾಳಿದ್ದಾರೆ ಮತ್ತು ಭಾರತದಲ್ಲಿರುವಷ್ಟು ವಿವಿಧ ರೀತಿಯ ಸಸ್ಯಜನ್ಯ ಸಂಪತ್ತು ಪ್ರಪಂಚದ ಯಾವುದೇ ರಾಷ್ಟ್ರಗಳಲ್ಲಿ ಇಲ್ಲ. ಹಾಗಾಗಿ ಆಯುರ್ವೇದ ಭಾರತದ ತವರೂರು ಆದರೆ ಹಿತ್ತಲಗಿಡ ಮದ್ದಲ್ಲ ಎಂಬ ಮಾತಿನಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಆಯುರ್ವೇದ ಪದ್ಧತಿಯನ್ನು ಅನುಸರಿಸಿದಾಗ ಅತ್ಯಂತ ಕಡಿಮೆ ವೆಚ್ಚ ಮತ್ತು ಪೂರ್ಣ ಆರೋಗ್ಯ ಲಭ್ಯವಾಗುತ್ತದೆ ಕರೋನಾದಂತಹ ಸಮಯದಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಪೋಲೀಸರಿಗೆ ನಾವು ಮುಂಜಾಗ್ರತಾ ಕ್ರಮವಾಗಿ ಆಯುರ್ವೇದದ ಔಷಧಿ ಕೊಟ್ಟಿದ್ದರಿಂದ ಎಲ್ಲರೂ ಆರೋಗ್ಯವಾಗಿದ್ದೇವೆ ಎಂದು ಆಯುರ್ವೇದದ ಬಗ್ಗೆ ಗೌರವವಾಗಿ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ|| ಎಸ್. ಅಹಲ್ಯಾ ಮಾತನಾಡಿ ಜೀವನ ಆರೋಗ್ಯಕರವಾಗಿ ಸಾಗಲು ಬೇಕಾದ ಕ್ರಮಗಳು ಮತ್ತು ಸಹಜ ಜೀವನದ ಬಗ್ಗೆ ತಿಳಿಸುತ್ತಾ ಸಂಗೀತ, ಧರ್ಮ ಮತ್ತು ಪ್ರಕೃತಿಯನ್ನು ಪ್ರೀತಿಸಿ ಗೌರವಿಸಿದಾಗ ಆರೋಗ್ಯಯುತ ಮನಸ್ಸು ಮತ್ತು ದೇಹ ಲಭ್ಯವಾಗುತ್ತದೆ ಬದಲಾವಣೆ ಜಗದ ನಿಯಮ ನಾವೆಲ್ಲರೂ ಅದಕ್ಕೆ ಬದ್ಧರಾಗಿರಬೇಕು ಎಂದರು. ಇನ್ನೋರ್ವ ಅತಿಥಿ ಚಿತ್ರದುರ್ಗ ಜಿಲ್ಲಾ ಡಿ.ಎಚ್.ಓ. ಡಾ|| ಆರ್.ರಂಗನಾಥ್ ಮಾತನಾಡಿ ನಮ್ಮ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗಿವೆ ಮನುಷ್ಯನನ್ನು ಗೌರವದಿಂದ ಕಾಣಲು ಕರೋನಾ ನಮಗೆ ಪಾಠ ಕಲಿಸಿದೆ ಸಮುದಾಯದಲ್ಲಿ ಆರೋಗ್ಯದ ಅರಿವು ಮೂಡಿಸಲು ಪ್ರಯತ್ನಿಸಿ ಭಾರತೀಯ ಔಷಧಿ ಪದ್ಧತಿಯನ್ನು ಗೌರವಿಸಿ ಹಾಗೂ ಮುಂದೆ ಆಯುರ್ವೇದ ವೈದ್ಯರಾಗುವವರು ರೋಗಿಗಳ ಜೊತೆಯಲ್ಲಿ ರೋಗದ ಕುರಿತಂತೆ ಸಂಶೋಧನೆಗಳು ನಡೆಯುತ್ತಿರಬೇಕು ಒಳ್ಳೆಯ ಆರೋಗ್ಯ ಸೇವನೆ ಮಾಡಲು ನಾವೆಲ್ಲರೂ ಬದ್ಧರಾಗಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಸಿದ್ಧ ಶಿಕ್ಷಣತಜ್ಞ ಹಾಗೂ ವಿಶ್ವಸ್ತ ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿ ಅನಾಥಸೇವಾಶ್ರಮದ ಸಂಸ್ಥಾಪಕರಾಗಿದ್ದ ರಾಘವೇಂದ್ರ ಸ್ವಾಮೀಜಿಯವರು ಆಯುರ್ವೇದ ಪಂಡಿತರಾಗಿದ್ದು ಜನರ ದೀನ ದಲಿತರ ಹಾಗೂ ದುರ್ಬಲರ ಸೇವೆ ಮಾಡಿದ್ದರಿಂದಲೇ ಸಮಾಜದಲ್ಲಿ ಇಂತಹ ಗೌರವ ಪ್ರಾಪ್ತಿಯಾಗಿದೆ ಮುಂದೆ ಭವಿಷ್ಯದ ವೈದ್ಯರಾಗುವವರ ಮೇಲೆ ಇಂತಹ ಹೊಣೆ ಇದೆ ಅದನ್ನು ನಿಭಾಯಿಸಬೇಕು ಎಂದರು ಮತ್ತು ಇಂದು ಆಶ್ರಮ ಡಾ.ಶಿವಮೂರ್ತಿ ಮುರುಘಾ ಶರಣರ ಮಾರ್ಗದರ್ಶನದಲ್ಲಿ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ಪ್ರಶಾಂತ್, ಪ್ರಾಂಶುಪಾಲ ಡಾ|| ಎಸ್.ನಾಗರಾಜ್, ವಿಶ್ವಸ್ತರಾದ ಕೆ.ವಿ.ಪ್ರಭಾಕರ್ ಮತ್ತು ಎಸ್.ಡಿ.ನಟರಾಜ್, ಆಶ್ರಮದ ವ್ಯವಸ್ಥಾಪಕ ಎಚ್.ಎಸ್.ಸಿದ್ರಾಮಸ್ವಾಮಿ, ಗ್ರಾಮಪಂಚಾಯತ್ ಅಧ್ಯಕ್ಷೆ ಸವಿತಾ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ|| ಎಸ್.ನಾಗರಾಜ್ 55 ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪಪ್ರಾಚಾರ್ಯ ಡಾ|| ಕೆ.ವಿ.ರಾಜಶೇಖರ್ ಸ್ವಾಗತಿಸಿ, ಡಾ|| ಅಶ್ವಿನಿ ನಿರೂಪಿಸಿ, ಡಾ|| ಸಂದೀಪ್ ವಂದಿಸಿದರು.