ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ತಿರುಕನೂರಿನಲ್ಲಿ ರಂಗದಾಸೋಹ – 13

ಬುಧವಾರ, ಜನವರಿ 13th, 2016
ಆಧುನಿಕ ಜೀವನ ಶೈಲಿಯಿಂದ ಮನುಷ್ಯನ ಬದುಕು ಹಾಳು

ಮಲ್ಲಾಡಿಹಳ್ಳಿ

ಆಧುನಿಕ ಜೀವನ ಶೈಲಿಯಿಂದ ಮನುಷ್ಯನ ಬದುಕು ಹಾಳಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಅನಾಥಸೇವಾಶ್ರಮದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಸೂರುದಾಸ್‍ಜೀ ಸ್ವಾಮೀಜಿಯವರ ಪುಣ್ಯಾರಾಧನಾ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹ ನಾಟಕಗಳ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ ಕುಡಿಯುವ ನೀರು, ಉಸಿರಾಡುವ ಗಾಳಿ ಮಲೀನಗೊಂಡಿದ್ದು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ ರೋಗಗಳು ಹೆಚ್ಚಾದಂತೆ ಮಾನವ ದುರ್ಬಲನಾಗುತ್ತಿದ್ದಾನೆ. ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರು ಅನೇಕ ರೋಗಿಗಳಿಗೆ ಉತ್ತಮ ಆರೋಗ್ಯಯುತ ಜೀವನವನ್ನು ಒದಗಿಸಿಕೊಟ್ಟರು ಎಂದರು.Nataka Inguration photo

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ ನದಿಗಳು ಎಲ್ಲೋ ಹುಟ್ಟಿ ರೈತರ ಜೀವನಾಡಿಯಾದಂತೆ ಸ್ವಾಮೀಜಿಯವರು ಎಲ್ಲಿಂದಲೋ ಬಂದು ಸಾಧನೆ ಮೂಲಕ ಈ ಭಾಗದ ಜನರಿಗೆ ಜೀವನಾಡಿಯಾದರು. ಇಂದು ಸಾತ್ವಿಕ ಆಹಾರ ಮತ್ತು ದೇಶೀಯ ವಸ್ತುಗಳ ಉಪಯೋಗದಿಂದ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಸಾಧ್ಯ ಎಂದರು.

ಕರ್ನಾಟಕ ಶ್ರೇಷ್ಠನಾಡಾಗಿದ್ದು ವಿಶ್ವದಲ್ಲಿ ಸಮಶೀತೋಷ್ಣವನ್ನು ಹೊಂದಿದ್ದು ಜೊತೆಯಲ್ಲಿ ಉತ್ತಮ ಭಾಂಧವ್ಯವನ್ನು ಹೊಂದಿದೆ ನಾಟಕ ರಸವತ್ತಾಗಿದ್ದು ಅದು ಜೀವಂತ ಕಲೆಯಾಗಿದೆ ಮನುಷ್ಯನ ಮನಸ್ಸನ್ನು ಅರಳಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಿ.ಆರ್.ಶಿವಕುಮಾರ್ ಮಾತನಾಡಿ ಸ್ವಾಮೀಜಿಯವರು ಬರಿಗೈಯಲ್ಲಿ ಬಂದು ರಾಷ್ಟ್ರಮಟ್ಟದಲ್ಲಿ ಮಲ್ಲಾಡಿಹಳ್ಳಿಯನ್ನು ಯೋಗ, ಆಯುರ್ವೇದ ಮತ್ತು ಶಿಕ್ಷಣದ ಮೂಲಕ ಗುರುತಿಸುವಂತೆ ಮಾಡಿದರು ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆದ ನಾನು ಇಂದು ಅಧ್ಯಕ್ಷನಾಗಿ ಈ ಸಂಸ್ಥೆಯ ಸೇವೆಯನ್ನು ಮಾಡಲಿಕ್ಕೆ ಅವಕಾಶ ದೊರಕಿದ್ದು ನನ್ನ ಪುಣ್ಯ ಎಂದರು.

ಚನ್ನಗಿರಿ ತುಮ್‍ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ನಿರ್ದೇಶಕ ಎಚ್.ಎಸ್.ಮಲ್ಲಿಕಾರ್ಜುನಪ್ಪ, ವಿಶ್ವಸ್ತರಾದ ಕೆ.ವಿ.ಪ್ರಭಾಕರ್ ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಶಿವಮೂರ್ತಿ, ಕಾರ್ಯನಿರ್ವಹಣಾಧಿಕಾರಿ ಎ.ಎಸ್.ನಿರ್ವಾಣಪ್ಪ, ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಯೋಗನಮನ ಸಲ್ಲಿಸಿದರು. ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಸ್ವಾಗತಿಸಿ, ಎನ್.ಎಸ್.ರುದ್ರೇಶ್ ನಿರೂಪಿಸಿ, ಪ್ರಾಚಾರ್ಯ ಡಾ.ನಾಗರಾಜ್ ವಂದಿಸಿದರು. ಇದೇ ಸಂದರ್ಭದಲ್ಲಿ ವೈದೇಹಿ ಅನುವಾದಿಸಿ ಕಲ್ಲಪ್ಪ ಪುಜಾರ್ ನಿರ್ದೇಶನದ ‘ಕಣ್ಕಟ್ ನಗರ ತೆಲೆಕೆಟ್ ರಾಜ’ ನಾಟಕವನ್ನು ರಾಘವೇಂದ್ರ ಗುರುಕುಲ ವಿದ್ಯಾಪೀಠ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶಿಸಲಾಯಿತು.Procession Photo

ರಂಗದಾಸೋಹ ಮತ್ತು ಪುಣ್ಯಾರಾಧನೆ ಅಂಗವಾಗಿ ಮಲ್ಲಾಡಿಹಳ್ಳಿಯ ಪ್ರಮುಖ ಬೀದಿಗಳಲ್ಲಿ ಡೊಳ್ಳು, ವೀರಗಾಸೆ ಮತ್ತು ಜಾನಪದ ಕಲಾ ತಂಡಗಳೊಂದಿಗೆ ವೈಭವಯುತವಾಗಿ ಸ್ವಾಮೀಜಿದ್ವಯರ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.DSC05834 Kumvee Speech

ವಿವೇಕಾನಂದರ ತತ್ವಾದರ್ಶಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿ –ಎಸ್.ಬಸವರಾಜ್

ಮಲ್ಲಾಡಿಹಳ್ಳಿ
ವಿವೇಕಾನಂದರ ತತ್ವಾದರ್ಶಗಳ ಆಚರಣೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತವೆ ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜ್ ಹೇಳಿದರು. ಅವರು ಹೊಳಲ್ಕೆರೆ ತಾಲ್ಲೂಕು ಜೈಪುರ ಸರ್ಕಾರಿ ಶಾಲೆಯಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಾ ವಿದ್ಯಾರ್ಥಿ ದೆಸೆಯಿಂದಲೇ ವಿವೇಕಾನಂದ, ರಾಮಕೃಷ್ಣಪರಮಹಂಸರಂತವರ ತತ್ವಾದರ್ಶಗಳನ್ನು ಓದಿ ಜೀವನದಲ್ಲಿ ಅನುಸರಿಸಿದರೆ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಭಾರತೀಯ ಸಂಸ್ಕøತಿಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ವ್ಯಕ್ತಿ ವಿವೇಕಾನಂದರು ಇಂತಹ ಸಾಧಕರ ಜೀವನ ಚರಿತ್ರೆಗಳನ್ನು ಓದಬೇಕು ಇದರ ಮೂಲಕ ಭಾರತೀಯ ಸಂಸ್ಕøತಿಯನ್ನು ಆಚರಣೆಗೆ ತಂದುಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಾದ ಮಂಜುನಾಥ, ಚಂದನ್, ಮನೋಜ್, ರಾಕೇಶ್ ವಿವೇಕಾನಂದರ ಜೀವನ ಚರಿತ್ರೆ ಕುರಿತಂತೆ ಭಾಷಣ ಮಾಡಿದರು. ಮುಖ್ಯ ಶಿಕ್ಷಕಿ ಗಿರಿಜಾಬಾಯಿ, ಸಹಶಿಕ್ಷಕಿ ಎಸ್.ಪುಷ್ಪಾವತಿ ಉಪಸ್ಥಿತರಿದ್ದರು.