ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ-ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ

ಗುರುವಾರ, ಜೂನ್ 22nd, 2017

ಮಲ್ಲಾಡಿಹಳ್ಳಿ
ಯೋಗಾಚರಣೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಲಭಿಸುತ್ತದೆ ಎಂದು ಅನಾಥಸೇವಾಶ್ರಮ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಹೇಳಿದರು. ಅವರು ಮಲ್ಲಾಡಿಹಳ್ಳಿಯಲ್ಲಿ 3ನೇ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸೀನಿಯರ್ ಹಾಗೂ ಜ್ಯೂನಿಯರ್ ಎನ್.ಸಿ.ಸಿ. ಕೆಡೆಟ್‍ಗಳ ಯೋಗ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಯೋಗ ಅವಶ್ಯವಾಗಿದ್ದು ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ 20 ನಿಮಿಷಗಳಾದರೂ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಇದರಿಂದ ಆರೋಗ್ಯವಾದ ಜೀವನ ನಡೆಸಬಹುದು ಮುಂದೆ ಆರೋಗ್ಯವಂತ ಸಮಾಜದ ಸೃಷ್ಠಿಯಾಗುತ್ತದೆ ಎಂದರು.
ಯೋಗ ತರಬೇತುದಾರ ಸಂತೋಷ್‍ಕುಮಾರ್ ಮಾತನಾಡಿ ದೈಹಿಕ ಸದೃಢತೆಯನ್ನು ವ್ಯಾಯಾಮಗಳಿಂದ ಪಡೆದರೂ ಯೋಗದಿಂದ ಮನಸ್ಸು ಶಾಂತಗೊಂಡು ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸೀನಿಯರ್ ವಿಭಾಗದ ಎನ್.ಸಿ.ಸಿ ಅಧಿಕಾರಿ ಹೆಚ್.ಟಿ.ರಮೇಶ್, ಜ್ಯೂನಿಯರ್ ವಿಭಾಗದ ಅಧಿಕಾರಿ ಆರ್.ಬಿ.ಹಾರೋಮಠ, ಪದವಿ ಕಾಲೇಜಿನ ಪ್ರಾಚಾರ್ಯ ಮೇಜರ್ ಮಹೇಂದ್ರಪ್ಪ ಹಾಗೂ ಪಿ.ಎಸ್.ಸ್ವಾಫ್ ಮತ್ತಿತರರು ಉಪಸ್ಥಿತರಿದ್ದರು.