News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಆಯುರ್ವೇದ ಮಹತ್ವ ಅರಿಯಿರಿ-ಡಾ|| ಎಸ್.ನಾಗರಾಜ

Sunday, September 12th, 2021

ಮಲ್ಲಾಡಿಹಳ್ಳಿ: ಇತ್ತೀಚಿನ ದಿನಗಳಲ್ಲಿ ಜನರು ಖಾಯಿಲೆಗಳಿಂದ ಹೆಚ್ಚಾಗಿ ಬಳಲುತ್ತಿದ್ದು ಇವೆಲ್ಲವುಗಳಿಗೆ ಮೂಲ ಪರಿಹಾರ ಆಯುರ್ವೇದ ಅದನ್ನು ಜನರು ಅರಿಯಬೇಕು ಎಂದು ಪ್ರಾಂಶುಪಾಲ ಡಾ||ಎಸ್.ನಾಗರಾಜ ತಿಳಿಸಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಆಯುರ್ವೇದ ಕಾಲೇಜಿನಲ್ಲಿ ಏರ್ಪಡಿಸಿದ್ದ ಆಯುರ್ವೇದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕರೋನಾದಂತಹ ರೋಗ ವಿಶ್ವಾದ್ಯಂತ ವ್ಯಾಪಿಸಿದ್ದು ಸಮೀಕ್ಷೆಯ ಪ್ರಕಾರ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಅದಕ್ಕೆ ಬಹಳ ಸರಳ ಮತ್ತು ಸುಲಭವಾಗಿ ಉಪಚರಿಸುವ ಪರಿಹಾರ ಸಿಕ್ಕಿದೆ ಆದರೆ ನಮ್ಮ ಭಾರತೀಯರಿಗೆ ಆಯುರ್ವೇದ ಔಷಧ ನಿಧಾನ ಎಂಬುದು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು. ಭಾರತ ಸ್ವಾತಂತ್ರ್ಯವನ್ನು ಪಡೆದು 75ವರ್ಷಗಳ ಸಂಭ್ರಮಾಚರಣೆಯ ನಿಮಿತ್ತ ಆಯುಷ್ ಇಲಾಖೆಯು ನಮ್ಮ ಆಯುಷ್ ನಮ್ಮ ಸ್ವಾಸ್ಥ್ಯ ಎಂಬ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಂಡು ಪ್ರತಿಯೊಂದು ಆಯುರ್ವೇದ ಕಾಲೇಜಿನ ಮೂಲಕ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಆಯುರ್ವೇದ ಜಾಗೃತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ ಇದರ ನಿಮಿತ್ತವಾಗಿ ಪ್ರತಿ ತಿಂಗಳು ಕಾರ್ಯಕ್ರಮಗಳನ್ನು ರೂಪಿಸಿ ಸ್ವಸ್ಥ ಮತ್ತು ಆರೋಗ್ಯಯುತ ಸಮಾಜವನ್ನು ನಿರ್ಮಿಸಲು ಪ್ರಯತ್ನ ನಡೆಯುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ರಾಘವೇಂದ್ರ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಮಾತನಾಡಿ ನಮ್ಮ ದೇಶದ ಸಂಸ್ಕøತಿ ಮತ್ತು ನಮ್ಮ ಪರಿಸರದ ಔಷಧಿ ಸಸ್ಯಗಳಿಂದ ನಮ್ಮ ಜೀವನ ಆರೋಗ್ಯಗೊಳಿಸಿಕೊಳ್ಳಲು ಸಾಧ್ಯವಾಗುವ ಆಯುರ್ವೇದ ಪದ್ಧತಿಯನ್ನು ನಾವೆಲ್ಲರೂ ಅನುಸರಿಸಬೇಕು ಮತ್ತು ಅದರ ಕುರಿತ ಮಾಹಿತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಅನಾಥಸೇವಾಶ್ರಮದ ವ್ಯವಸ್ಥಾಪಕ ಎಚ್.ಎಸ್.ಸಿದ್ರಾಮಸ್ವಾಮಿ ಮಾತನಾಡಿ ಇಂತಹ ಉಪಯುಕ್ತ ಕಾರ್ಯಕ್ರಮಕ್ಕೆ ಅನಾಥಸೇವಾಶ್ರಮದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಮತ್ತು ಎಲ್ಲಾ ವಿಶ್ವಸ್ತರ ಸಹಕಾರ ಯಾವಾಗಲೂ ಇದ್ದೇ ಇರುತ್ತದೆ ಅಭಿನವ ಧನ್ವಂತರಿ ರಾಘವೇಂದ್ರ ಸ್ವಾಮೀಜಿಯವರು ಆಯುರ್ವೇದ ಪದ್ಧತಿಯ ಮೂಲಕವೇ ಹೆಸರಾದವರು ಎಂದರು. ಉಪಪ್ರಾಚಾರ್ಯ ಡಾ.ಕೆ.ವಿ.ರಾಜಶೇಖರ್, ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಎಸ್.ಶಿವಕುಮಾರ್, ಯೋಗತರಬೇತುದಾರ ಎಸ್.ಆರ್.ಸಂತೋಷ್ ಕುಮಾರ್, ವೈದ್ಯರುಗಳಾದ ಡಾ|| ಜೋಸೆಫ್, ಡಾ||ದೇವಕಿ, ಡಾ||ರಾಧಿಕಾ ಡಾ|| ಪ್ರತಾಪ್ ಅಧೀಕ್ಷಕ ಪವನ್ ಕುಮಾರ್ ಕಂಬಾಳಿಮಠ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆಯುರ್ವೇದ ಜಾಗೃತಿ ನಿಮಿತ್ತ ಆಯುರ್ವೇದ ಸಸಿಯನ್ನು ನೆಡಲಾಯಿತು.