News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಮಲ್ಲಾಡಿಹಳ್ಳಿಯಲ್ಲಿ ಜಾನಪದ ಕಲಾ ತಂಡಗಳೊಂದಿಗೆ ವೈಭವಯುತ ಮೆರವಣಿಗೆ

Tuesday, January 16th, 2018

ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ 22ನೇ ಹಾಗೂ ಪೂಜ್ಯ ಶ್ರೀ ಸೂರುದಾಸ್‍ಜಿ ಸ್ವಾಮೀಜಿಯವರ 20ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಊರಿನ ಬೀದಿಗಳಲ್ಲಿ ವೀರಗಾಸೆ, ನಂದಿಕೋಲು, ಡೊಳ್ಳು ಮುಂತಾದ ಜಾನಪದ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಭಾವಚಿತ್ರಗಳ ಮೆರವಣಿಗೆಯನ್ನು ಮಲ್ಲಾಡಿಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಏರ್ಪಡಿಸಲಾಗಿತ್ತು. 3000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮಲ್ಲಾಡಿಹಳ್ಳಿ ಹಾಗೂ ಸುತ್ತಮುತ್ತಲಿನ ನಾಗರೀಕರು, ಆಶ್ರಮದ ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರುಗಳು ಪಾಲ್ಗೊಂಡು ಮೆರವಣಿಗೆಯ ಯಶಸ್ಸಿಗೆ ಭಾಜನರಾದರು.

106 ವರ್ಷ ಸಾಮಾಜಿಕ ಸಾರ್ಥಕ ಬದುಕನ್ನು ಸಮಾಜಕ್ಕಾಗಿ ಮೀಸಲಾಗಿಟ್ಟಿದ್ದ ಪೂಜ್ಯ ರಾಘವೇಂದ್ರ ಸ್ವಾಮೀಜಿಯವರು ಯೋಗ, ಶಿಕ್ಷಣ ಮತ್ತು ಆಯುರ್ವೇದದ ಮೂಲಕ ನಾಡಿನಾದ್ಯಂತ ಹೆಸರಾಗಿದ್ದು ಇಂದು ಅನಾಥಸೇವಾಶ್ರಮವನ್ನು ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ದಿವ್ಯನೇತೃತ್ವದಲ್ಲಿ ಸ್ವಾಮೀಜಿದ್ವಯರ ಆಶಯಗಳು ಕವಲೊಡೆದು ಹೆಮ್ಮರವಾಗುತ್ತಿವೆ ಎಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು. ಪಾತಂಜಲ ಮೂಲಯೋಗ ಶಿಬಿರದ ಉದ್ಘಾಟನೆ : ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ 22ನೇ ಹಾಗೂ ಪೂಜ್ಯ ಶ್ರೀ ಸೂರುದಾಸ್‍ಜಿ ಸ್ವಾಮೀಜಿಯವರ 20ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಅನಾಥಸೇವಾಶ್ರಮದ ವ್ಯಾಸಪೀಠದಲ್ಲಿ ಯೋಗ ಶಿಬಿರದ ಉದ್ಘಾಟನೆಯನ್ನು ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು ನೆರವೇರಿಸಿ ಮಾತನಾಡುತ್ತ ದೈಹಿಕ ಹಾಗೂ ಮಾನಸಿಕ ಸಮ್ಮಿಲನಕ್ಕೆ ಯೋಗ ಪೂರಕವಾಗಿದ್ದು ವಿದ್ಯಾರ್ಥಿ ದೆಸೆಯಿಂದಲೇ ಅದನ್ನು ರೂಢಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅನಾಥಸೇವಾಶ್ರಮದ ಯೋಗತರಬೇತುದಾರ ಸಂತೋಷ್ ಕುಮಾರ್ ಕಾಲದ ಬದಲಾವಣೆಗೆ ನಾವೆಲ್ಲರೂ ಅಣಿಯಾಗಬೇಕಾಗಿದೆ ಇಂದು ಹಲವಾರು ಪ್ರಕಾರಗಳ ಯೋಗ ಪದ್ಧತಿಗಳು ಸಮಾಜದಲ್ಲಿದ್ದು ಅವೆಲ್ಲವೂ ಮನುಷ್ಯನ ವಿಕಾಸಕ್ಕೆ ಪೂರಕವಾಗಿವೆ ನಮಗೆ ಅನುಕೂಲವಾಗುಂತಹ ಪ್ರಕಾರವನ್ನು ಆಯ್ಕೆಮಾಡಿಕೊಂಡು ಅದರ ಸಾಧನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಬಿ.ಪಿ.ಇಡಿ ಕಾಲೇಜಿನ ಉಪನ್ಯಾಸಕ ಜೆ.ರಘನಾಥ್ ಮಾತನಾಡಿ ಅಷ್ಟಾಂಗಯೋಗದ ಮಹತ್ವ ಅದರ ಉದ್ಧೇಶಗಳನ್ನು ಮತ್ತು ಶಿಬಿರಾರ್ಥಿಗಳಾದ ನಾವು ಅದರಲ್ಲಿ ಹೇಗೆ ತೊಡಗಿಕೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಟಿ.ವೆಂಕಟೇಶ್ ಮಾತನಾಡಿ ದೈಹಿಕ ಶಿಕ್ಷಣ ಮತ್ತು ಯೋಗ ಬೇರೆ ಬೇರೆಯಾಗಿದ್ದು ಯೋಗವು ಮನುಷ್ಯ ಅಂತರಿಕ ಮೌಲ್ಯಗಳನ್ನು ವೃದ್ಧಿಗೊಳಿಸುತ್ತದೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಪಿ.ಚಂದ್ರಶೇಖರ್ ನಿರೂಪಿಸಿ, ಮೋಹನ್ ಕುಮಾರ್ ವಂದಿಸಿದರು. ಉಪನ್ಯಾಸಕ ಲೋಕೇಶ್, ಆಯುರ್ವೇದ ಕಾಲೇಜಿನ ಉಪಪ್ರಾಚಾರ್ಯ ಕೆ.ವಿ.ರಾಜಶೇಖರ್, ವಿದ್ಯಾರ್ಥಿ ನಿಲಯ ಪಾಲಕರಾದ ಎಂ.ಎನ್.ಮಲ್ಲಪ್ಪ, ಶಿವಕುಮಾರ್ ಹಾಗೂ ಶಾಂತಮ್ಮ ಉಪಸ್ಥಿತರಿದ್ದರು.

ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು ಅವರಿಂದ ಯೋಗಶಿಬಿರದ ಉದ್ಘಾಟನೆ

ಮಲ್ಲಾಡಿಹಳ್ಳಿಯಲ್ಲಿ ಪೂಜ್ಯಸ್ವಾಮೀಜಿದ್ವಯರ ಭಾವಚಿತ್ರಗಳ ಅದ್ಧೂರಿ ಮೆರವಣಿಗೆ