ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ ಮಾತ್ರ ಈ ದೇಶ ಸುಭದ್ರವಾಗುತ್ತದೆ ಎಂದು ಖ್ಯಾತ ಶಿಕ್ಷಣ ತಜ್ಞ ಹಾಗೂ ಅನಾಥಸೇವಾಶ್ರಮ ವಿಶ್ವಸ್ತ ಸಮಿತಿಯ ಕಾರ್ಯದರ್ಶಿ ಪ್ರೊ.ಕೆ.ಈ.ರಾಧಾಕೃಷ್ಣ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಜಾತ್ಯಾತೀತ ಪ್ರಜ್ಞೆಯನ್ನು ಬೆಳಸಬೇಕು ನಾವು ನೋಡುವ ಪ್ರಕೃತಿಯಲ್ಲಿ ಗಿಡ-ಮರ ಗಾಳಿ ಮತ್ತು ನೀರು ಇವುಗಳಲ್ಲಿ ಜಾತಿ ವ್ಯವಸ್ಥೆ ಇಲ್ಲ ಹಾಗಾಗಿ ಪ್ರಕೃತಿ ತತ್ವದಡಿಯಲ್ಲಿ ನಾವುಗಳು ಅದನ್ನು ಪಾಲಿಸಬೇಕು ಮುಂದಿನ ಭವ್ಯ ಭಾರತದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂಬ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹೊಳಲ್ಕೆರೆ ತಾಲ್ಲೂಕಿನ ತಹಸೀಲ್ಧಾರರಾದ ರಮೇಶಾಚಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಭಾಷೆಯ ಮೇಲೆ ಹಿಡಿತವಿರಬೇಕು ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೂ ಸಾಧನೆ ಮಾಡಲು ಸಮಾಜದಲ್ಲಿ ಅವಕಾಶವಿದೆ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳ ಬಗ್ಗೆ ತಾರತಮ್ಯವಿರಬಾರದು ಎಂದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚು ಎಂಬುದು ಸಂಶೋಧನೆಗಳಿಂದ ದೃಢವಾಗಿದೆ ಮತ್ತು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಂತಹ ಸುವ್ಯವಸ್ಥಿತ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ನಿಮಗೆ ಸತ್ಪ್ರಜೆಗಳಾಗುವ ಎಲ್ಲಾ ಅವಕಾಶವಿದೆ ಇಲ್ಲಿರುವ ವ್ಯವಸ್ಥೆಯನ್ನು ಬೆಳೆಸಿಕೊಂಡು ಉನ್ನತ ಹುದ್ದೆಗಳನ್ನು ದೊರಕಿಸಿಕೊಳ್ಳಿ ಎಂಬ ಕಿವಿಮಾತನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಮಲ್ಲಾಡಿಹಳ್ಳಿ ಅಮೃತ್ ಆಗ್ರ್ಯಾನಿಕ್ಸ್‍ನ ಉದ್ಯಮಿ ಹಾಗೂ ಟ್ರಸ್ಟಿ ಕೆ.ನಾಗರಾಜ್ ಮಾತನಾಡಿ ಮಲ್ಲಾಡಿಹಳ್ಳಿ ಶಿಸ್ತು ಮತ್ತು ಸಂಸ್ಕಾರಕ್ಕೆ ಹೆಸರಾಗಿದೆ ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಮತ್ತು ಸಾಂಸ್ಕøತಿಕ ಶಿಕ್ಷಣ ಕೊಡಲು ಡಾ.ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ವಿಶ್ವಸ್ತ ಸಮಿತಿ ಬದ್ಧವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಜೆ.ಸಿದ್ಧಲಿಂಗಮ್ಮ ಮಾತನಾಡಿ ನಮ್ಮ ಕಾಲೇಜಿನ ಉಪನ್ಯಾಸಕ ವರ್ಗದವರು ಅನುಭವಿಗಳಾಗಿದ್ದು ಅವರ ಅನುಭವಗಳನ್ನು ನೀವೆಲ್ಲರೂ ತಪ್ಪದೇ ಬಳಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಬೇಕು ಎಂದರು. ಚಿಕ್ಕಜಾಜೂರು ಎಸ್.ಜೆ.ಎಂ ಕಾಲೇಜಿನ ಗಣಿತ ಉಪನ್ಯಾಸಕ ನಿಸಾರ್ ಅಹಮ್ಮದ್, ವಿಶ್ವಸ್ತರಾದ ಕೆ.ವಿ.ಪ್ರಭಾಕರ್, ಜಿ.ತಿಮ್ಮಪ್ಪ ಮತ್ತು ಆಡಳಿತಾಧಿಕಾರಿ ಎಚ್.ಎಸ್.ಸಿದ್ರಾಮಸ್ವಾಮಿ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.