News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಸಮಯ ಪಾಲನೆ ರೂಢಿಸಿಕೊಳ್ಳಿ- ಡಾ.ಶಿವಮೂರ್ತಿ ಮುರುಘಾ ಶರಣರು

Thursday, January 26th, 2017

ಮಲ್ಲಾಡಿಹಳ್ಳಿ
ಸಮಯ ಪಾಲನೆಯನ್ನು ರೂಢಿಸಿಕೊಳ್ಳುವುದರಿಂದ ದೇಶಕ್ಕೆ ಅಪಾರವಾದ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ವಿವಿಧ ಶಾಲಾ ಕಾಲೇಜುಗಳ ವತಿಯಿಂದ ಸಾಮೂಹಿಕವಾಗಿ ಏರ್ಪಡಿಸಿದ್ದ 68ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸಮಯಪಾಲನೆ, ಶಿಸ್ತು, ದೇಶಾಭಿಮಾನವನ್ನು ರೂಢಿಸಿಕೊಂಡಲ್ಲಿ ದೇಶವನ್ನು ಸಮಗ್ರವಾಗಿ ಮುನ್ನೆಡೆಸಿಕೊಂಡು ಹೋಗಿ ಈ ಮೂಲಕ ಗಣರಾಜ್ಯೋತ್ಸವದ ಆಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ತಿಳಿಸಲು ಸಾಧ್ಯವಾಗುತ್ತದೆ ಎಂದರು.
ದೇಶದ ಜನರು ಕೆಲಸಗಳನ್ನು ಕರ್ತವ್ಯಗಳನ್ನು ಸಮರ್ಪಕವಾಗಿ ಮಾಡಿದಾಗ ಮಹಾತ್ಮಗಾಂಧೀಜಿ, ವಲ್ಲಭಭಾಯಿ ಪಟೇಲ್ ಮುಂತಾದವರ ತ್ಯಾಗ ಬಲಿದಾನಗಳಿಗೆ ಮಹತ್ವ ಬರುತ್ತದೆ ಎಂದರು. ಅನಾಥಸೇವಾಶ್ರಮದ ವಿಶ್ವಸ್ತ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಅನಾಥಸೇವಾಶ್ರನಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ, ಪಾಚಾರ್ಯರುಗಳಾದ ಟಿ.ವೆಂಕಟೇಶ್, ಚಂದ್ರಕಾಂತ ಹಿರೇಮಠ್, ಡಾ.ಜಿ.ಯು.ನಾಗರಾಜ್, ಟಿ.ಎಚ್.ಗುಡ್ಡಪ್ಪ, ಕೆ.ಎಂ.ತಿಮ್ಮರಾಜು, ಮಂಜುನಾಥ್, ಗುರುಕುಲ ವಿದ್ಯಾಪೀಠದ ಮುಖ್ಯಸ್ಥ, ಎಂ.ಎನ್.ವೇಣು ಗ್ರಾಮಪಂಚಾಯಿತಿ ಸದಸ್ಯರು, ಮಲ್ಲಾಡಿಹಳ್ಳಿ ಗ್ರಾಮಸ್ಥರು, ಎನ್.ಸಿ.ಸಿ ಕೆಡೆಟ್‍ಗಳು, ವಿದ್ಯಾರ್ಥಿಗಳು ಪರೇಡ್‍ನಲ್ಲಿ ಭಾಗವಹಿಸಿದರು. ರಾಘವೇಂದ್ರ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎನ್.ಸಿ.ಸಿ ಜ್ಯೂನಿಯರ್ ವಿಭಾಗದ ಅಧಿಕಾರಿ ಆರ್.ಬಿ.ಹಾರೋಮಠ ಮತ್ತು ಬಿ.ಪಿ.ಇಡಿ ಕಾಲೇಜಿನ ಪ್ರಾಚಾರ್ಯ ಟಿ.ವೆಂಕಟೇಶ್ ಇವರ ನೇತೃತ್ವದಲ್ಲಿ ಪರೇಡ್‍ನ್ನು ಮುನ್ನೆಡೆಸಲಾಯಿತು.