News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಸ್ವರಸುರಭಿ ಆನಂದ ಕಂದ ಗೀತೋತ್ಸವ

Sunday, December 1st, 2013

ದಿನಾಂಕ01.12.2013 ರ ಭಾನುವಾರ ಸಂಜೆ ಬಸವನಗುಡಿಯ ಬೀದಿ ಬೀದಿಗಳಲ್ಲಿ ಕಡ್ಲೆಕಾಯಿ ಪರೀಷೆಯ ಮೇಳ ನಡೆಯುತ್ತಿದ್ದರೆ ಮತ್ತೊಂದೆಡೆ ಕಹಳೆ ಬಂಡೆ ಉದ್ಯಾನವನದ ವೇದಿಕೆಯಲ್ಲಿ ಬೆಂಗಳೂರಿಗರಿಗೆ ಅಪರೂಪದ ಹಾಡುಗಳ ಅನುರಣನ. ಒಟ್ಟಾರೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ಸಂಜೆ ರಂಗೇರಿತ್ತು.

ಗಾಯಕ ಶ್ರೀಧರ ಅಯ್ಯರವರ ಸ್ವರಸುರಭಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆನಂದ ಕಂದ ಗೀತೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾಂರ್ಯಕ್ರಮದಲ್ಲಿ ಸಾವಿರ ಹಾಡುಗಳ ಸರ್ದಾರ ಬಾಳಪ್ಪ ಹುಕ್ಕೇರಿ ಹಾಗೂ ಇಂದಿನ ಪೀಳಿಗೆಯ ಸುಗಮ ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡರ ಸಂಗೀತ ನಿರ್ದೇಶನದಲ್ಲಿ ಆನಂದಕಂದರ ಗೀತೆಗಳಿಗೆ ನಾಡಿನ ಶ್ರೇಷ್ಠ ಕಲಾವಿದರು ಧ್ವನಿಯಾದರು.

ಸೃಜನ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಮೃತ್ಯುಂಜಯ ದೊಡ್ಡವಾಡರ ಸಂಯೋಜನೆಯ ‘ನಿನ್ನೆಗಳ ನೆಲಕೆ ಮೆಟ್ಟಿ ಕಾರ್ಯಕ್ರಮ ಪ್ರಾರಂಭವಾಯಿತು. ಕುಮಾರಿ ಮೇಘಾ ಸೊರಗಾವಿ ಬಾಳಪ್ಪ ಹುಕ್ಕೇರಿಯವರ ಬುತ್ತಿ ತಗೊಂಡು ಹೋಗ್ತೀನಿ ಹೊಲಕ್ಕೆ ಗೀತೆಯನ್ನು ಸೊಗಸಾಗಿ ಹಾಡಿದರು. ಗಾಯಕ ಶ್ರೀಧರ ಅಯ್ಯರ್‌ರವರು ದೊಡ್ಡವಾಡರವರ ’ಕುರಿಯ ಮರಿ ಬೇಕೇನು ಗೀತೆಗೆ ಧ್ವನಿಯಾದರು. ಖ್ಯಾತ ಗಾಯಕ ರವೀಂದ್ರ ಸೊರಗಾವಿ ಬಾಳಪ್ಪ ಹುಕ್ಕೇರಿಯವರ ನಾ ಸಂತೆಗೆ ಹೋಗಿನಿ ಹಾಡಿ ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದರು. ನಂತರ ಜಮಖಂಡಿಯ ಗಾಯಕಿ ಶಿವಲೀಲಾ ಮೃತ್ಯುಂಜಯ ದೊಡ್ಡವಾಡರ ಬಾರ ಕಾರ ಹುಣ್ಣಿವೆ  ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.

ಧಾರವಾಡದಿಂದ ಆಗಮಿಸಿದ ಆನಂದ ಕಂದರ ಮೊಮ್ಮಗ ಖ್ಯಾತ ಗಾಯಕ ’ರಾಜು ಕುಲಕರ್ಣೀ ಬಾಳಪ್ಪ ಹುಕ್ಕೇರಿಯವರ ಎಲ್ಲಿಂದಲೋ ಕರೆತಂದೆಣ್ಣ ಹಾಡನ್ನು ಅಪ್ಪಟ ಕರ್ನಾಟಕದ ಶೈಲಿಯಲ್ಲಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಮಧುರ ಕಂಠದ ಗಾಯಕಿ ಸುರೇಖ ಮೃತ್ಯುಂಜಯ ದೊಡ್ಡವಾಡರ ಹೊಸಕಾಲದ ಹಿರಿನೆರೆಯಿದು ಗೀತೆಯನ್ನು ಸುಮಧುರವಾಗಿ ಹಾಡಿದರು.  ಮೃತ್ಯುಂಜಯ ದೊಡ್ಡವಾಡರವರು ನಗು ನಗುತ ನಡಿದೀಯಲ್ಲೇ ಗೀತೆಯನ್ನು ಹಾಡಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.

ಇಷ್ಟು ಹೊತ್ತು ಕಹಳೆ ಬಂಡೆಯಲ್ಲಿ ಅಪ್ಪಟ ಉತ್ತರ ಕರ್ನಾಟಕದ ಸೊಗಡಿನ ಗೀತೆಗಳ ಸುರಿಮಳೆಯಾಗುತ್ತಿದ್ದರೆ ಅತ್ತ ವರುಣನಿಗೆ ಅಸೂಯೆಯಾಗಿರಬೇಕು. ಸುಪ್ರಸಿದ್ಧ ಗಾಯಕ ಶಂಕರ ಶಾನಭೋಗ್ ತಾಯಿ ಭುವನೇಶ್ವರಿಯ ಗೀತೆಯನ್ನು ಹಾಡುತ್ತಾ ಅತಿಥಿಗಳನ್ನು ವೇದಿಕೆಗೆ ಬರಮಾಡಿ ಕೊಳ್ಳುವನ್ನುವಷ್ಟರಲ್ಲಿ ಧಾರಾಕಾರವಾಗಿ ಮಳೆ ಸುರಿಯ ಲಾರಂಭಿಸಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಬಸವನಗುಡಿ ಶಾಸಕರಾದ ಶ್ರೀ ರವಿ ಸುಬ್ರಹ್ಮಣ್ಯರವರು ಮಳೆಯಲ್ಲಿ ನೆನೆಯುತ್ತಾ ಕಾರ್ಯಕ್ರಮಕ್ಕೆ ಶುಭಕೋರಿ ನಿರ್ಗಮಿಸಿದರು. ಸ್ವಲ್ಪ ಹೊತ್ತಿನಲ್ಲಿ ಮಳೆ ಶಾಂತವಾದ ತಕ್ಷಣ ಬೆಟಗೇರಿ ಕೃಷ್ಣ ಶರ್ಮ ಟ್ರಸ್ಟ್ ಅಧ್ಯಕ್ಷ ಹಾಗು ಖ್ಯಾತ ಕಾದಂಬರಿಕಾರ ಪ್ರೊ. ರಾಘವೇಂದ್ರ ಪಾಟೀಲರಿಗೆ ನಾಡಿನ ಶ್ರೇಷ್ಠ ಕವಿಗಳಾದ ಡಾ. ಹೆಚ್ ಎಸ್.

ವೆಂಕಟೇಶ್‌ಮೂರ್ತಿಯವರು ಸ್ವರಸುರಭಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವೇದಿಕೆಯಲ್ಲಿ ಮ್ಯಾಂಡೋಲಿನ್ ಪ್ರಸಾದ್, ಸಂಜೆ ಸಮಯ ಪತ್ರಿಕೆಯ ಅನಿಲ್  ಕುಮಾರ್, ಸಂಸ್ಥೆಯ ಅಧ್ಯಕ್ಷ ಶ್ರೀಧರ ಅಯ್ಯರ್, ಮೃತ್ಯುಂಜಯ ದೊಡ್ಡವಾಡ ಉಪಸ್ಥಿತರಿದ್ದರು.  ಕೊನೆಯಲ್ಲಿ ಮೃತ್ಯುಂಜಯ ದೊಡ್ಡವಾಡರ ’ಶಕುಂತಲೆ ಗೀತೆಗೆ’ ಶ್ರೀ ರಂಜನೀ ತಂಡದವರು ನೃತ್ಯ ಮಾಡಿದರು.
ಕುಮಾರಿ ನಂದಿನಿಯವರ ಕಾರ್ಯಕ್ರಮ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.