ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ
ಉತ್ತಮ ಆಲೋಚನೆಯಿಂದ ವ್ಯಕ್ತಿತ್ವ ಶ್ರೇಷ್ಠಗೊಳ್ಳುತ್ತದೆ ಎಂದು ಪೂಜ್ಯ ಶ್ರೀ.ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಹೊಳಲ್ಕೆರೆ ತಾಲ್ಲೂಕಿನ ಪ್ರಸಿದ್ಧ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ 3ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಯೋಗ ಪದ್ಧತಿಯನ್ನು ಆಚರಿಸುವ ಎಲ್ಲರಿಗೂ ಉತ್ತಮ ಆಲೋಚನೆಗಳು ಲಭ್ಯವಾಗುತ್ತವೆ ತನ್ಮೂಲಕ ವ್ಯಕ್ತಿತ್ವ ಶ್ರೇಷ್ಠಗೊಳ್ಳುತ್ತದೆ ಎಂದರು. ಯೋಗವು ಮನುಷ್ಯನ ಆಂತರಿಕ ವಿಕಾಸಕ್ಕೆ ದಾರಿಮಾಡಿಕೊಡುತ್ತದೆ ಒಳಮನಸ್ಸನ ನೋಡುವುದು ಯೋಗದಿಂದ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತೋರಿಸುವುದರ ಮೂಲಕ ಅರಿವನ್ನುಂಟು ಮಾಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತನೀಕಲ್ ಸುಧಾಕರ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಿಂದಲೇ ಯೋಗಾಸನಗಳನ್ನು ಮಾಡುವುದರ ಮೂಲಕ ದೈಹಿಕವಾಗಿ ಸಮರ್ಥರಾಗಿ ನಂತರದಲ್ಲಿ ಮನಸ್ಸನ್ನು ಅರಿಯಲು ಸಾಧ್ಯವಾಗುತ್ತದೆ ಮಲ್ಲಾಡಿಹಳ್ಳಿ ಓದುವ ವಿದ್ಯಾರ್ಥಿಗಳಿಗೆ ಇದು ಸದಾವಕಾಶ ಲಭ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಯೋಗತರಬೇತುದಾರ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ 2000ಕ್ಕೂ ಹೆಚ್ಚು ಮಕ್ಕಳು ಯೋಗಾಸನಗಳ ಪ್ರದರ್ಶನ ಮಾಡಿದರು. ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯತ್ ಸದಸ್ಯೆ ಸರೋಜ ಕುಬೇರಪ್ಪ, ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಶಿವಾನಂದ್ ಹಾಗೂ ಎಲ್ಲ ಸದಸ್ಯರುಗಳು ಮತ್ತು ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್.ಜೆ.ಎಂ.ಪ್ರೌಢಶಾಲಾ ಶಿಕ್ಷಕ ಧನಂಜಯ ರಚಿತ ಬಾ ರಾಘವೇಂದ್ರ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಉಪನ್ಯಾಸಕ ಎನ್.ಎಸ್.ರುದ್ರೇಶ್ ಸ್ವಾಗತಿಸಿ, ಶಿಕ್ಷಕರಾದ ಗಣಪತಿಗೌಡ ನಿರೂಪಿಸಿ ಜಿ.ಟಿ.ಶಂಕರಮೂರ್ತಿ ವಂದಿಸಿದರು.
ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾಶರಣರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ 3ನೇ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಉದ್ಘಾಟಿಸುತ್ತಿರುವುದು. ವಿಶೇಷಾಧಿಕಾರಿ ಪ್ರೊ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿರುವುದು.
ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ 3ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ಯೋಗ ತರಬೇತುದಾರ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ 2000 ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ.