ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ: ಉತ್ತಮ ನಾಗರೀಕರಾಗಲು ಸಾಮಾಜಿಕ ಪ್ರಜ್ಞೆ ಅವಶ್ಯ ಎಂದು ಅನಾಥಸೇವಾಶ್ರಮದ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ಎಸ್.ಎಸ್.ಬಿ.ಎಸ್. ಡಿ.ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮಾಜದಲ್ಲಿ ಸಾಮಾಜಿಕ ಪ್ರಜ್ಞೆ ಕಡಿಮೆ ಇದ್ದು ಇಂತಹ ಶಿಬಿರಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ಅದು ವೃದ್ಧಿಯಾಗುತ್ತದೆ ಎಂದರು.
ಇಂದಿನ ಯುವಜನತೆ ಆಧುನಿಕ ಸಂಸ್ಕೃತಿಗೆ ಮಾರು ಹೋಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ತಮ್ಮ ಜೀವನವನ್ನು ಜೊತೆಯಲ್ಲಿ ಸಮಾಜದ ಅವನತಿಗೆ ಕಾರಣವಾಗುತ್ತಿದ್ದಾರೆ. ಹಾಗೆಯೇ ಅಂದು ಒಬ್ಬ ಶಿಕ್ಷಕ ಪುರದ ಒಂದು ಭಾಗವಾಗಿ ಪೌರರನ್ನು ಸರಿದಾರಿಗೆ ತರುವಂತಹ ಕಾರ್ಯಗಳನ್ನು ಮಾಡುತ್ತಿದ್ದು ಇಂದು ಅವುಗಳನ್ನು ಕಾಣುವುದು ಅಪರೂಪವಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ರಾಘವೇಂದ್ರ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಶಿವಕುಮಾರ್ ಮಾತನಾಡಿ ಆದರ್ಶಗಳನ್ನು ಹೇಳುವುದು ಸುಲಭ ಆದರೆ ಅವುಗಳನ್ನು ಅನುಸರಿಸುವುದು ಕಷ್ಟ ಇಂತಹ ಶಿಬಿರಗಳಿಂದ ನಮ್ಮ ನಡೆ-ನುಡಿ ಉತ್ತಮಗೊಂಡು ಸಮಾಜದ ಉನ್ನತಿಗೆ ಕಾರಣವಾಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿ.ಇಡಿ ಕಾಲೇಜಿನ ಪ್ರಾಚಾರ್ಯ ಬಿದರಹಳ್ಳಿ ಕೃಷ್ಣಮೂರ್ತಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಶಿಬಿರಗಳು ಮತ್ತು ಶೈಕ್ಷಣಿಕ ಪ್ರವಾಸಗಳು ಸಹಕಾರಿಯಾಗುತ್ತವೆ ಇಲ್ಲಿ ಕಲಿತಂತಹ ಮೌಲ್ಯಗಳನ್ನು ಜೀವನದ ಪ್ರತೀ ಹಂತದಲ್ಲೂ ರೂಢಿಸಿಕೊಳ್ಳಿ ಎಂದರು.
ಉಪನ್ಯಾಸಕರಾದ ಎಸ್.ಬಸವರಾಜ್ ಸ್ವಾಗತಿಸಿ, ಶೇಷಪ್ಪ ನಿರೂಪಿಸಿ, ಸಂತೋಷ್ ಕುಮಾರ್ ವಂದಿಸಿದರು.